ಮತ್ತದೇ ದುರ್ಘಟನೆ.. ಕಬ್ಬಿಣದ ಏಣಿಗೆ ವಿದ್ಯುತ್ ತಗುಲಿ ಕಾರ್ಮಿಕ ಸಾವು
ಕೊಡಗು: ಜಿಲ್ಲೆಯಲ್ಲಿ ಮತ್ತೊಂದು ಅಂತಹುದೇ ದುರ್ಘಟನೆ ನಡೆದಿದೆ. ಎಸ್ಟೇಟ್ ತೋಟಗಳಲ್ಲಿ ಕಾರ್ಮಿಕರು ಏಣಿ ಹತ್ತಿ ಕೆಲಸ ಮಾಡುವ ಸಂದರ್ಭಗಳು ಹೆಚ್ಚು. ದುರ್ದೈವವೆಂದ್ರೆ ಅಂತಹ ಸಂದರ್ಭಗಳಲ್ಲಿ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಏಣಿಗೆ ತಗುಲಿ ವಿದ್ಯುದಾಘಾತಗಳು ಸಂಭವಿಸುತ್ತಿರುತ್ತವೆ. ಇದೀಗ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿಯೂ ಸಹ ಇಂತಹುದೇ ಘಟನೆ ನಡೆದಿದೆ. ಕಬ್ಬಿಣದ ಏಣಿಗೆ ವಿದ್ಯುತ್ ತಗುಲಿ ಬರಡಿ ಗ್ರಾಮದ ರಾಜನ್(45) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಅತ್ತಿಮಂಗಲ ಎಸ್ಟೇಟ್ನಲ್ಲಿ ತೋಟದ ಕೆಲಸ ಮಾಡುವ ಸಂದರ್ಭ ಏಣಿಗೆ 11 ಕೆ.ವಿ ವಿದ್ಯುತ್ ಸ್ಪರ್ಶವಾಗಿದೆ. […]
ಕೊಡಗು: ಜಿಲ್ಲೆಯಲ್ಲಿ ಮತ್ತೊಂದು ಅಂತಹುದೇ ದುರ್ಘಟನೆ ನಡೆದಿದೆ. ಎಸ್ಟೇಟ್ ತೋಟಗಳಲ್ಲಿ ಕಾರ್ಮಿಕರು ಏಣಿ ಹತ್ತಿ ಕೆಲಸ ಮಾಡುವ ಸಂದರ್ಭಗಳು ಹೆಚ್ಚು. ದುರ್ದೈವವೆಂದ್ರೆ ಅಂತಹ ಸಂದರ್ಭಗಳಲ್ಲಿ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಏಣಿಗೆ ತಗುಲಿ ವಿದ್ಯುದಾಘಾತಗಳು ಸಂಭವಿಸುತ್ತಿರುತ್ತವೆ.
ಇದೀಗ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿಯೂ ಸಹ ಇಂತಹುದೇ ಘಟನೆ ನಡೆದಿದೆ. ಕಬ್ಬಿಣದ ಏಣಿಗೆ ವಿದ್ಯುತ್ ತಗುಲಿ ಬರಡಿ ಗ್ರಾಮದ ರಾಜನ್(45) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ.
ಅತ್ತಿಮಂಗಲ ಎಸ್ಟೇಟ್ನಲ್ಲಿ ತೋಟದ ಕೆಲಸ ಮಾಡುವ ಸಂದರ್ಭ ಏಣಿಗೆ 11 ಕೆ.ವಿ ವಿದ್ಯುತ್ ಸ್ಪರ್ಶವಾಗಿದೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 2:13 pm, Wed, 20 November 19