ಕಲರ್ ನೋಡಿ​ ಮರುಳಾಗದಿರಿ: ಮಾರುಕಟ್ಟೆಗೆ ಬಂದ ಕೆಮಿಕಲ್​ ಕಲ್ಲಂಗಡಿ, ಪತ್ತೆ ಮಾಡುವುದ್ಹೇಗೆ?

ಬೇಸಿಗೆ ಕಾಲ ಶುರುವಾಯ್ತು ಅಂದ್ರೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿಯಾಗುತ್ತದೆ. ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ದೇಹಕ್ಕೆ ತಂಪನ್ನು ನೀಡುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿದೆ. ಗ್ರಾಹಕರು ಸಹ ಮುಗಿಬಿದ್ದು ಕಲ್ಲಗಂಡಿ ಖರೀದಿಸಿ ಸೇವಿಸುತ್ತಿದ್ದಾರೆ. ಆದ್ರೆ ಕರ್ನಾಟಕದ ಜನರು ಕಲ್ಲಂಗಡಿ ಹಣ್ಣು ಖರೀದಿಸಿ ಸೇವಿಸುವ ಮುನ್ನ ಕೊಂಚ ಎಚ್ಚರವಹಿಸಬೇಕಿದೆ. ಏಕೆಂದರೆ ರಾಜ್ಯದ ಹಲವು ಕಡೆಗಳಲ್ಲಿ ನಕಲಿ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಾಗಾದ್ರೆ, ಕೆಮಿಕಲ್​ ಕಲ್ಲಂಗಡಿ ಸೇವಿಸಿದ್ರೆ ಏನಾಗುತ್ತೆ? ಇನ್ನು ಕೆಮಿಕಲ್​ ಕಲ್ಲಂಗಡಿ ಪತ್ತೆ ಮಾಡುವುದ್ಹೇಗೆ? ಇಲ್ಲಿದೆ ವಿವರ.

ಕಲರ್ ನೋಡಿ​ ಮರುಳಾಗದಿರಿ: ಮಾರುಕಟ್ಟೆಗೆ ಬಂದ ಕೆಮಿಕಲ್​ ಕಲ್ಲಂಗಡಿ, ಪತ್ತೆ ಮಾಡುವುದ್ಹೇಗೆ?
Chemical Watermelon

Updated on: Feb 28, 2025 | 4:30 PM

ಬೆಂಗಳೂರು, (ಫೆಬ್ರವರಿ 28): ಒಂದು ದಿನದ ಹಿಂದಷ್ಟೇ ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಆಹಾರ ಇಲಾಖೆ ಅಧಿಕಾರಿಗಳು, ಹೋಟೆಲ್ ಗಳಲ್ಲಿ ಇಡ್ಲಿಗಳನ್ನು ತಯಾರಿಸುವಾಗ ಪ್ಲಾಸ್ಟಿಕ್ ಶೀಟ್ ಬಳಸುವುದನ್ನು ಪತ್ತೆ ಹಚ್ಚಿ ಅವುಗಳ ಮೇಲೆ ನಿಷೇಧ ಹೇರಲು ತಯಾರಿ ನಡೆಸಿದ್ದಾರೆ. ಇದಾದ ಬಳಿಕ ಟ್ಯಾಟೋದಿಂದ ಎಚ್​ಐವಿ, ಸ್ಕಿನ್​ ಕ್ಯಾನ್ಸರ್​ ಸೇರಿದತೆ ಚರ್ಮ ರೋಗಗಳು ಬರುತ್ತಿವೆ ಎನ್ನಲಾಗಿದೆ. ಹೀಗಾಗಿ ಇದಕ್ಕೆ ರಾಜ್ಯದಲ್ಲಿ ಹೊಸ ಕಾನೂನು ತರಲು ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ತರಕಾರಿ ಅಂಗಡಿಗಳಲ್ಲಿ ಮಾರಾಟ ಮಾಡುವ ಹಸಿ ಬಟಾಣಿ ಕಾಳು, ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳಲ್ಲಿ ಕೃತಕ ಬಣ್ಣಗಳನ್ನು ಬಳಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ.

ಬೀದಿ ಬದಿಗಳಲ್ಲಿ, ಅಂಗಡಿಗಳಲ್ಲಿ, ಮಾಲ್ ಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳನ್ನು ವಿವಿಧ ಮದ್ಯವರ್ತಿಗಳು ಹೊಲಗಳಿಂದ ಖರೀದಿ ಮಾಡಿ ಈ ಮಾರಾಟ ಕೇಂದ್ರಗಳಿಗೆ ತಲುಪಿಸುತ್ತಾರೆ. ಈ ಮದ್ಯವರ್ತಿಗಳಲ್ಲಿ ಕೆಲವರು ಹಣ್ಣುಗಳಿಗೆ ಕೃತಕ ಬಣ್ಣದ ಇಂಜೆಕ್ಷನ್ ನೀಡುತ್ತಾರೆ. ಅದರಿಂದ ಕಲ್ಲಂಗಡಿ ಹಣ್ಣನ್ನು ಕೊಯ್ದಾಗ ಅದು ಅತ್ಯಂತ ಕೆಂಪಾಗಿ, ಆಕರ್ಷಣೀಯವಾಗಿ ಕಾಣುತ್ತದೆ. ಇನ್ನೂ ಕೆಲವರು ಕೆಂಪು ಬಣ್ಣದ ಜೊತೆಗೆ ರುಚಿಯನ್ನು ತರುವಂಥ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿರುತ್ತಾರೆ. ಹಾಗಾಗಿ, ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಅಂಗಡಿಯವರು ನೀಡುವ ಸ್ಯಾಂಪಲ್ ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ ಹಾಗೂ ರುಚಿಕರವಾಗಿರುತ್ತದೆ. ಇದಕ್ಕೆ ಗ್ರಾಹಕರು ಮರುಳಾಗಿ ಹಣ್ಣುಗಳನ್ನು ಕೊಳ್ಳುತ್ತಾರೆ. ಹೀಗಾಗಿ ಇದನ್ನು ತಡೆಯಲು ಕೃತಕ ರಾಸಾಯನಿಕಗಳಿಂದ ಜನರನ್ನು ಪಾರು ಮಾಡಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ಟ್ಯಾಟೂನಿಂದ ಎಚ್​ಐವಿ, ಕ್ಯಾನ್ಸರ್: ಕೇಂದ್ರಕ್ಕೆ ಪತ್ರ ಬರೆದು ಹೊಸ ಕಾನೂನು ರೂಪಿಸುತ್ತೇವೆಂದ ಗುಂಡೂರಾವ್

ರಾಜ್ಯಾದ್ಯಂತ ಸ್ಯಾಂಪಲ್ ಸಂಗ್ರಹ

ಕೆಮಿಕಲ್ ಕಲರ್ ಇಂಜೆಕ್ಟ್ ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್​ ಸಂಗ್ರಹ ಮಾಡುತ್ತಿದ್ದಾರೆ. ಬಳಿಕ ಹಣ್ಣನ್ನು ಲ್ಯಾಬ್​ ರವಾನೆ ಮಾಡಲಾಗುತ್ತಿದ್ದು, ವರದಿ ಬಳಿಕ ಹಣ್ಣಿನ ಗುಣಮಟ್ಟ ತಿಳಿಯಲಿದೆ.

ಕಲ್ಲಂಗಡಿಗೆ ಕೃತಕ ಬಣ್ಣ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಆಕರ್ಷಣೀಯವಾಗಿ ಕಾಣುವಂತೆ ಮಾಡಿರುವ ಕಲ್ಲಂಗಡಿ ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಹೀಗಾಗಿ ನೀವು ಕಲ್ಲಂಗಡಿ ಹಣ್ಣಿನ ಕಲರ್ ಕಂಡು ಮರುಳಾಗುವ ಮುಂಚೆ ಸ್ವಲ್ಪ ಎಚ್ಚರವಿರಲಿ.

ಕೆಮಿಕಲ್​ ಕಲ್ಲಂಗಡಿ ಪತ್ತೆ ಹಚ್ಚುವುದು ಹೇಗೆ?

  • ಒಂದು ಸಣ್ಣ ಪೀಸ್ ಕಲ್ಲಂಗಡಿ ಹಣ್ಣನ್ನು ನೀರಿನಲ್ಲಿ ಬೆರೆಸಿ
  • ನೀರು ಗುಲಾಬಿ ಬಣ್ಣಕ್ಕೆ ತಿರುಗಿಯಾ ಎಂಬುದು ಗಮನಿಸಿ.
  • ನೀರು ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಅದು ಕೆಮಿಕಲ್​ ಕಲ್ಲಂಗಡಿಯಾಗಿರುತ್ತೆ.
  • ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಹಣ್ಣಿಗೆ ಕೃತಕ ಬಣ್ಣ ಸೇರಿಸಲಾಗಿರುತ್ತೆ.
  • ಟಿಶ್ಯೂ ಪೇಪರ್​ನಿಂದ ಹಣ್ಣನ್ನು ಒತ್ತಿ ನೋಡಬೇಕು
  • ಆಗ ಪೇಪರ್​ಗೆ ಕೆಂಪು ಬಣ್ಣ ಹತ್ತಿಕೊಂಡರೆ ಅದು ಕಲಬೆರಕೆ ಕಲ್ಲಂಗಡಿಯಾಗಿರುತ್ತೆ.

ಕೆಮಿಕಲ್​ ಕಲ್ಲಂಗಡಿ ಸೇವಿಸಿದ್ರೇ ಏನಾಗುತ್ತೆ?

  • ಸಮಸ್ಯೆ 1: ಕಲರ್ ಬರುವಂತೆ ಇಂಜೆಕ್ಟ್​ ಮಾಡಿರುವ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಫುಡ್ ಪಾಯ್ಸನಿಂಗ್​ನಂತಹ ಸಮಸ್ಯೆಗಳು ಆಗಲಿವೆ. ಅಲ್ಲದೇ ವಾಂತಿ ಭೇದಿಯಂತಯ ಸಮಸ್ಯೆಗಳಾಗುವ ಸಾಧ್ಯತೆಗಳಿವೆ.
  • ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಸಾಯನಿಕ ಕಲ್ಲಂಗಡಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಇಂಜೆಕ್ಟ್​ ನೀಡಿರುವ ಕಲ್ಲಂಗಡಿ ಹಣ್ಣಿನ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯ.
  • ಕೆಮಿಕಲ್​ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಸರಿಯಾದ ಸಮಯಕ್ಕೆ ಹಸಿವು ಆಗುವುದಿಲ್ಲ. ಹಸಿವಿನ ಕೊರತೆ ನಮ್ಮಲ್ಲಿ ಕಾಡುತ್ತದೆ. ಇದರಿಂದ ಸರಿಯಾದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಆಗದಂತೆ ಆಗಿ ಗ್ಯಾಸ್ಟ್ರಿಕ್​ ಸಮಸ್ಯೆ ಉಮಟಾಗುತ್ತೆ.
  • ಸುಸ್ತು ಮತ್ತು ಬಾಯಾರಿಕೆ
  • ಕೆಮಿಕಲ್​ ಹಗೂ ಕೃತ ಬಣ್ಣದ ಕಲ್ಲಂಗಡಿ ಸೇವನೆಯಿಂದ ಕಿಡ್ನಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು.