ಸಿಎಂ ಯಡಿಯೂರಪ್ಪ ಲಸಿಕೆ ಇಲ್ಲದೆಯೇ ಅಭಿಯಾನ ಆರಂಭಿದ್ದಾರೆ! ಇದು ಕೇವಲ ಫೋಟೋಗಾಗಿ: ಸಿದ್ದರಾಮಯ್ಯ ಟೀಕೆ

|

Updated on: May 01, 2021 | 1:16 PM

ಜನರಿಗೆ ನಾನು ಮನವಿ ಮಾಡುತ್ತೇನೆ. ಗುಂಪಿನಿಂದ ದೂರ ಇರಿ. ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಿ. ಲಾಕ್ ಡೌನ್ ಗೆ ಸಹಕಾರ ಕೊಡಿ ಎಂದು ಸಿದ್ದರಾಮಯ್ಯ ಹೇಳಿದರು.

ಸಿಎಂ ಯಡಿಯೂರಪ್ಪ ಲಸಿಕೆ ಇಲ್ಲದೆಯೇ ಅಭಿಯಾನ ಆರಂಭಿದ್ದಾರೆ! ಇದು ಕೇವಲ ಫೋಟೋಗಾಗಿ: ಸಿದ್ದರಾಮಯ್ಯ ಟೀಕೆ
ಸಿದ್ದರಾಮಯ್ಯ
Follow us on

ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೊರೊನಾ ಸೋಂಕಿನ ವಿರುದ್ಧ ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಿದ್ದಾರೆ. ಆದರೆ ಸಿಎಂ ಲಸಿಕೆ ಇಲ್ಲದೇ ಇಂದು ಅಭಿಯಾನ ಆರಂಭಿದ್ದಾರೆ. ಇದು ಕೇವಲ ಫೋಟೋಗಾಗಿ ಅಭಿಯಾನ ಆರಂಭಿಸಿದ್ದಾರೆ; ಮಾಧ್ಯಮದವರು ತೋರಿಸಿದ್ದಾರೆ. ಆದರೆ ರಾಜ್ಯದಲ್ಲಿ ಮೇ ಅಂತ್ಯದವರೆಗೆ ಲಸಿಕೆ ಸಿಗುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮಾತನಾಡುವಾಗ ಮಾಹಿತಿ ಕೊರತೆ ಇತ್ತೋ ಗೊತ್ತಿಲ್ಲ. ಪಿಎಂ ಮೇ 1 ರಿಂದ 18 ವಯೋಮಾನದವರಿಗೆ ಲಸಿಕೆ ನೀಡ್ತಿವಿ ಅಂದರು. ಆದರೆ ಯಾವುದೇ ಪೂರ್ವ ತಯಾರಿ ಇಲ್ಲದೆ ಸುಮ್ಮನೆ ಭರವಸೆ ಕೊಟ್ಟಿಬಿಡುವುದು. ಪ್ರಧಾನಿ ಬೇಜಾಬ್ದಾರಿ ಹೇಳಿಕೆ‌ ಕೊಡ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ನಾನು ಹೇಳ್ತಾ ಇರುವುದು ಸತ್ಯ. ನಾನು ಮುಖ್ಯ ಕಾರ್ಯದರ್ಶಿಗೆ ಮಾತನಾಡಿದ್ದೀನಿ. ನಿನ್ನೆ ಸುಧಾಕರ್ ಏನಂತ ಹೇಳಿದ್ದಾನೆ. ಲಸಿಕೆ ಇಲ್ಲ ಅಂತಾ ಹೇಳಿದ್ದಾನೆ. ಪ್ರಧಾನಿ ಹೆಸರು ಏಳೆದು ತರಬೇಡಿ ಅಂತಾ ಸಿಎಂ ಹೇಳ್ತಾರೆ. ಸಿಎಂ ಏನಾಗಿದಾರೆ. ಅವರನ್ನ ಕೇಳದೆ ಯಾರನ್ನ ಕೇಳ ಬೇಕು? ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ನೀಡೋದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಆದ್ರೆ ಪೂರ್ವ ತಯಾರಿ ಇಲ್ಲದೆ ಪ್ರಧಾನಿ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಯಾವ ತಯಾರಿ ಮಾಡಿಕೊಂಡಿದೆ? ನನಗಿರುವ ಮಾಹಿತಿ ಪ್ರಕಾರ ಮೇ ತಿಂಗಳಾಂತ್ಯಕ್ಕೆ ಲಸಿಕೆ ಸಿಗಬಹುದು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಪೋಲಿಯೋ ಮಾದರಿಯಲ್ಲಿ ಕೊವಿಡ್ ಲಸಿಕೆ ನೀಡಬೇಕು: ಸಿದ್ದರಾಮಯ್ಯ

18 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ಸಿಗಲಿದೆ. ಪೋಲಿಯೋ ಮಾದರಿಯಲ್ಲಿ ಕೊವಿಡ್ ಲಸಿಕೆ ನೀಡಬೇಕು. ಮನೆ ಮನೆಗೂ ತೆರಳಿ ಕೊವಿಡ್ ಲಸಿಕೆ ನೀಡಬೇಕು. ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ₹2,000 ಕೋಟಿ ಬೇಕು. ರಾಜ್ಯದಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕೂಡ ಸಿಗುತ್ತಿಲ್ಲ. ನನ್ನ ಬಾವ ಮೈದನಿಗೆ ರೆಮಿಡೆಸ್ವಿರ್ ಸಿಕ್ಕಿಲ್ಲ. ಇಂಜೆಕ್ಷನ್‌ಗಾಗಿ ನಾನು ಡಿಸಿಎಂ ಅಶ್ವತ್ಥ್‌ಗೆ ಕರೆ ಮಾಡಿದ್ದೆ. ಉಮೇಶ್ ಜಾಧವ್‌ಗೆ ಮೂಟೆ ಮೂಟೆ ಲಸಿಕೆ ಕೊಡ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಕೇಳಿದರೆ ಮಾತ್ರ ಲಸಿಕೆ ಇಲ್ಲ ಅಂತಾರೆ. ಆರೋಗ್ಯ ಸಚಿವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ರಾಜ್ಯದಲ್ಲಿ ಅರಾಜಕತೆ ಇದೆ, ಆಡಳಿತ ಇಲ್ಲವೆಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.

ಗುಂಪಿನಿಂದ ದೂರ ಇರಿ. ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಿ: ಸಿದ್ದರಾಮಯ್ಯ ಮನವಿ

ಜನರಿಗೆ ನಾನು ಮನವಿ ಮಾಡುತ್ತೇನೆ. ಗುಂಪಿನಿಂದ ದೂರ ಇರಿ. ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಿ. ಲಾಕ್ ಡೌನ್ ಗೆ ಸಹಕಾರ ಕೊಡಿ. ಸರ್ಕಾರ ಆರ್ಥಿಕ ಪ್ಯಾಕೇಜ್ ನೀಡಬೇಕು. 1.5 ಕೋಟಿ ಸಂಘಟಿತ ಅಸಂಘಟಿತ ಕೆಲಸ ಮಾಡಬೇಕು. ಅವರೆಲ್ಲ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾ? ಎಂಥಂಥಾ ಮಂತ್ರಿಗಳು ಇದಾರಲ್ಲ. ಕತ್ತಿ ಏನ್ ಹೇಳಿದಾ ಗೊತ್ತಲ್ಲಾ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:

ಲಸಿಕೆಯೇ ನಮ್ಮ ಸುರಕ್ಷಾ ಕವಚ: 18 ವರ್ಷ ಮೇಲ್ಪಟ್ಟವರಿಗಾಗಿ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ