AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಮಾನವೀಯ ಅಂತ್ಯಸಂಸ್ಕಾರ; 84 ವರ್ಷದ ಕ್ರಿಶ್ಚಿಯನ್ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಬಾಂಧವರು

ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಬೆಳಗಾವಿಯ ಕ್ಯಾಂಪ್ ಪ್ರವೇಶದ ವೃದ್ಧನ ಮನೆಯಲ್ಲಿ ಮಗನನ್ನು ಬಿಟ್ಟು ಯಾರು ಇರಲಿಲ್ಲ. ಸಂಬಂಧಿಕರು ಕೂಡ ಬಾರದ ಹಿನ್ನಲೆ ಅಂಜುಮನ್ ಇಸ್ಲಾಂ ಸಂಸ್ಥೆಗೆ ವೃದ್ಧನ ಮಗ ಕರೆ ಮಾಡಿದ್ದಾರೆ. ಬಳಿಕ ಮುಸ್ಲಿಂ ಸಮುದಾಯದ ಮುಖಂಡರು ಅಂತ್ಯಕ್ರಿಯೆ ಮಾಡಿದ್ದಾರೆ

ಬೆಳಗಾವಿಯಲ್ಲಿ ಮಾನವೀಯ ಅಂತ್ಯಸಂಸ್ಕಾರ; 84 ವರ್ಷದ ಕ್ರಿಶ್ಚಿಯನ್ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಬಾಂಧವರು
ಪ್ರಾತಿನಿಧಿಕ ಚಿತ್ರ
preethi shettigar
|

Updated on: May 01, 2021 | 5:01 PM

Share

ಬೆಳಗಾವಿ: ಕೊರೊನಾ ಎರಡನೇ ಅಲೆ ಅತ್ಯಂತ ವೇಗಗತಿಯಲ್ಲಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೇಡೆ ಅಂತ್ಯಸಂಸ್ಕಾರಕ್ಕೂ ಕೂಡ ಮೃತರ ಕುಟುಂಬಸ್ಥರು ಹರಸಾಹಸಪಡುವಂತಾಗಿದೆ. ಹೀಗಿರುವಾಗಲೇ ಬೆಳಗಾವಿಯಲ್ಲಿ 84ವರ್ಷದ ಕ್ರಿಶ್ಚಿಯನ್ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿ ಮುಸ್ಲಿಂ ಬಾಂಧವರು ಮಾನವೀಯತೆಯನ್ನು ತೊರಿದ್ದಾರೆ.

ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಬೆಳಗಾವಿಯ ಕ್ಯಾಂಪ್ ಪ್ರವೇಶದ ವೃದ್ಧನ ಮನೆಯಲ್ಲಿ ಮಗನನ್ನು ಬಿಟ್ಟು ಯಾರು ಇರಲಿಲ್ಲ. ಸಂಬಂಧಿಕರು ಕೂಡ ಬಾರದ ಹಿನ್ನಲೆ ಅಂಜುಮನ್ ಇಸ್ಲಾಂ ಸಂಸ್ಥೆಗೆ ವೃದ್ಧನ ಮಗ ಕರೆ ಮಾಡಿದ್ದಾರೆ. ತಕ್ಷಣ ಕೆಲ ಮುಸ್ಲಿಂ ಸಮುದಾಯದ ಮುಖಂಡರು ಸ್ಥಳಕ್ಕೆ ಹೋಗಿ ಶವ ತಂದು ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ. ಸದ್ಯ ಮುಸ್ಲಿಂ ಬಾಂಧವರ ಈ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೊನಾ ಮುಕ್ತ ದೇಶವಾಗಲಿ ಎಂದು ಕಣ್ಣೀರು ಹಾಕಿ ಫಾಸ್ಟರ್ ಪ್ರಾರ್ಥನೆ ಹುಬ್ಬಳ್ಳಿಯ ನವೀನ ಪಾರ್ಕ್​ನ ಮಷಿನ್ ಮಿನಸ್ಟರಿ ಚರ್ಚ್‌ನ ಫಾಸ್ಟರ್ ಕೆ. ಓಬುಲ್ ರಾವ್ ಕೊರೊನಾ ಮುಕ್ತ ದೇಶವಾಗಲಿ ಎಂದು ಕಣ್ಣೀರು ಹಾಕಿ ಪ್ರಾರ್ಥನೆ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಪೊಲೀಸರು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಮಾಧ್ಯಮದವರು, ಪೌರ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಪ್ರಾರ್ಥನೆ ಮಾಡಿದ್ದು, ಆದಷ್ಟು ಬೇಗ ಕೊರೊನಾ ದೂರವಾಗಲಿ ಎಂದು ಕೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರದ ನಿಯಮದಂತೆ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಲು ಯಾರಿಗೂ ಅವಕಾಶ ಇರದ ಕಾರಣ, ಫಾಸ್ಟರ್ ಕೆ. ಓಬುಲ್ ರಾವ್ ಅವರು ಆನ್ಲೈನ್ ಮೂಲಕ ಎಲ್ಲರಿಗೂ ಪ್ರಾರ್ಥನೆಯಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ.

prayer

ಫಾಸ್ಟರ್ ಕೆ. ಓಬುಲ್ ರಾವ್ ಕೊರೊನಾ ಮುಕ್ತ ದೇಶವಾಗಲಿ ಎಂದು ಕಣ್ಣೀರು

ಇದನ್ನೂ ಓದಿ:

ವಿಶ್ವ ದಾಖಲೆ: ಭಾರತದಲ್ಲಿ ದಿನಕ್ಕೆ 4 ಲಕ್ಷದ ಗಡಿ ದಾಟಿದ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ, ಪ್ರತಿ ನಿಮಿಷಕ್ಕೆ ಸರಾಸರಿ 2 ಸಾವು

ದೇಶಾದ್ಯಂತ ಇಂದು ಶುರುವಾಗಿಲ್ಲ 3ನೇ ಹಂತದ ಕೊರೊನಾ ಲಸಿಕೆ ವಿತರಣೆ; ವ್ಯಾಕ್ಸಿನ್ ಇಲ್ಲ ಅಂದ್ರೂ ಕರ್ನಾಟಕದಲ್ಲಿ ಕ್ಯೂ ನಿಂತ ಜನ !