AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತರ ಸಂಬಂಧಿಕರಿಗೂ ಉಚಿತ ಊಟ; ಜಿಮ್ಸ್ ಆಸ್ಪತ್ರೆ ಕಾರ್ಯಕ್ಕೆ ಗದಗ ಜನರ ಮೆಚ್ಚುಗೆ

ಕೊರನಾ ಜನರ ಜೀವನವೇ ಬುಡಮೇಲು ಮಾಡಿದೆ. ಅದೆಷ್ಟೋ ಜನರಿಗೆ ಉಪವಾಸ, ವನವಾಸ ಬೀಳುವಂತೆ ಮಾಡಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್​ಡೌನ್​ ಜಾರಿ ಮಾಡಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ನೋಡಿಕೊಳ್ಳುವ ಸಂಬಂಧಿಕರನ್ನು ಉಪವಾಸ ಬೀಳುವಂತೆ ಮಾಡಿದೆ.

ಕೊರೊನಾ ಸೋಂಕಿತರ ಸಂಬಂಧಿಕರಿಗೂ ಉಚಿತ ಊಟ; ಜಿಮ್ಸ್ ಆಸ್ಪತ್ರೆ ಕಾರ್ಯಕ್ಕೆ ಗದಗ ಜನರ ಮೆಚ್ಚುಗೆ
ಉಚಿತ ಊಟ ನೀಡಲಾಗುತ್ತಿದೆ
sandhya thejappa
|

Updated on: May 01, 2021 | 3:18 PM

Share

ಗದಗ: ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಅದರಂತೆ ಜಿಲ್ಲೆಯೂ ಸಂಪೂರ್ಣ ಲಾಕ್ ಆಗಿದೆ. ಹೋಟೆಲ್ ಸೇರಿ ಎಲ್ಲವೂ ಬಂದ್ ಆಗಿವೆ. ಲಾಕ್​ಡೌನ್​  ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ನೋಡಿಕೊಳ್ಳುವ ಸಂಬಂಧಿಕರು ಉಪವಾಸ, ವನವಾಸ ಅನುಭವಿಸುತ್ತಿದ್ದರು. ಆದರೆ ಗದಗ ಜಿಮ್ಸ್ ನಿರ್ದೇಶಕರು ಜನರ ನೆರವಿಗೆ ಬಂದಿದ್ದಾರೆ. ದಾನಿಗಳ ನೆರವಿನೊಂದಿಗೆ ರೋಗಿಗಳ ಸಂಬಂಧಿಕರಿಗೂ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಜನರ ಜೀವ ಉಳಿಸುವ ಜೊತೆಗೆ ಹಸಿದ ಹೊಟ್ಟೆಗೆ ಊಟ ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊರನಾ ಜನರ ಜೀವನವೇ ಬುಡಮೇಲು ಮಾಡಿದೆ. ಅದೆಷ್ಟೋ ಜನರಿಗೆ ಉಪವಾಸ, ವನವಾಸ ಬೀಳುವಂತೆ ಮಾಡಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್ಡೌನ್​ ಜಾರಿ ಮಾಡಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ನೋಡಿಕೊಳ್ಳುವ ಸಂಬಂಧಿಕರನ್ನು ಉಪವಾಸ ಬೀಳುವಂತೆ ಮಾಡಿದೆ. ಹಳ್ಳಿ, ಪಟ್ಟಣ, ನಗರ ಪ್ರದೇಶಗಳಿಂದ ಸೋಂಕಿತರು ಜೀವ ಉಳಿಸಿಕೊಳ್ಳಲು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಜೊತೆಗೆ ಸೋಂಕಿತರನ್ನು ನೋಡಿಕೊಳ್ಳಲು ಸಂಬಂಧಿಕರು ಆಗಮಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಕೊರೊನಾ ಕಠಿಣ ನಿಯಮಗಳು ಜಾರಿಯಾಗಿವೆ. ಹೀಗಾಗಿ ಗದಗ ಜಿಲ್ಲೆ ಸ್ತಬ್ಧವಾಗಿದೆ. ಜಿಮ್ಸ್ ಆಸ್ಪತ್ರೆ ಗದಗ ನಗರದಿಂದ 5 ಕಿಲೋಮೀಟರ್ ಇದೆ. ಅಲ್ಲಿ ಯಾವುದೇ ಹೊಟೇಲ್ ಇಲ್ಲ. ಹೀಗಾಗಿ ಸೋಂಕಿತರ ಸಂಬಂಧಿಕರು ಊಟವಿಲ್ಲದೇ ಉಪವಾಸ ಅನುಭವಿಸುವಂತಾಗಿದೆ. ಜನರ ಸಮಸ್ಯೆ ಅರಿತ ಜಿಮ್ಸ್ ನಿರ್ದೇಶಕ ಡಾ.ಪಿಎಸ್.ಭೂಸರೆಡ್ಡಿ ರೋಗಿಗಳ ಜೊತೆಗೆ ಸಂಬಂಧಿಕರಿಗೂ ಉಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸೋಂಕಿತರ ಜೀವ ಉಳಿಸಲು ಜಿಮ್ಸ್ ವೈದ್ಯರು ಟೋಂಕ ಕಟ್ಟಿ ನಿಂತಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಡವರು ಸೇರಿದಂತೆ ಸಾಕಷ್ಟು ಸೋಂಕಿತರು ಜಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಳ್ಳಿ ಹಳ್ಳಿಯಿಂದ ಆಗಮಿಸಿದ ಸೋಂಕಿತರ ಸಂಬಂಧಿಕರು ಊಟವಿಲ್ಲದೇ ಪರದಾಡುತ್ತಿದ್ದರು. ಹೀಗಾಗಿ ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಪತಿ ವಿಷ್ಟುಕಾಂತ ಚೆಟಪಲ್ಲಿ ಕೂಡ ಕೊರೊನಾ ಎಮರ್ಜನ್ಸಿಯಲ್ಲಿ ಸಂಕಷ್ಟದಲ್ಲಿ ಇದ್ದ ಜದರ ನೆರವಿಗೆ ಧಾವಿಸಿದ್ದಾರೆ. ಜಿಮ್ಸ್ ಆಡಳಿತ ಉಚಿತ ಊಟಕ್ಕೆ ಇವರು ಕೈ ಜೋಡಿಸಿದ್ದಾರೆ. ನಿತ್ಯವೂ ಸೋಂಕಿತರನ್ನು ಹೊರತು ಪಡಿಸಿ 400-500 ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಪಲಾವ್, ಉಪ್ಪಿಟ್ಟು, ಚಪಾತಿ ಹೀಗೆ ಪ್ರತಿನಿತ್ಯವೂ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರ ಸಮಯ ಉಚಿತ ಊಟ ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ. ಜಿಮ್ಸ್ ಹಾಗೂ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕಾರ್ಯಕ್ಕೆ ಗದಗ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಭಾರತೀಯರಿಗಾಗಿ ಮಿಡಿದ ಕ್ರಿಕೆಟಿಗರ ಹೃದಯ! ಈ ಐಪಿಎಲ್​ನಲ್ಲಿ ನನ್ನ ಆಟಕ್ಕೆ ಸಿಗುವ ಅಷ್ಟೂ ಹಣವನ್ನು ಆಮ್ಲಜನಕ ಪೂರೈಕೆಗೆ ನೀಡುತ್ತಿದ್ದೇನೆ; ಧವನ್

ದಾವಣಗೆರೆ: ರಶೀದಿ ಕೇಳಿದ್ದಕ್ಕೆ ನಿವೃತ್ತ ಸೈನಿಕನಿಗೆ ಹಿಗ್ಗಾಮುಗ್ಗಾ ಥಳಿತ; ಪೊಲೀಸರ ವಿರುದ್ಧ ಸೈನಿಕನ ಆರೋಪ

(GIMS Hospital and Rural Development University offering free food to relatives of Corona victims)