ಚಿತ್ರದುರ್ಗದಲ್ಲೊಬ ಸ್ವೀಟ್ ಬ್ರದರ್; ಜನಪ್ರೀತಿ ಗಳಿಸಿದ ಮಲ್ಲಣ್ಣ
ಮಲ್ಲಣ್ಣ ಬ್ರದರ್ ಕೇವಲ ಜನಪ್ರೀತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೂ ಅಚ್ಚುಮೆಚ್ಚು ಆಗಿದ್ದಾರೆ. ಜಿಲ್ಲಾಸ್ಪತ್ರೆಗೆ ಬರುವ ಜನ ವೈದ್ಯರಿಗಿಂತ ಮೊದಲು ಮಲ್ಲಣ್ಣ ಅವರನ್ನು ಸಂಪರ್ಕಿಸುತ್ತಾರೆ. ಅಂಬುಲೆನ್ಸ್ ಇರಬಹುದು, ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಡೆತ್ ಕ್ರಿಮಿನೇಷನ್ ಸೇರಿದಂತೆ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.
ಚಿತ್ರದುರ್ಗ: ಕೊರೊನಾ ಸೋಂಕಿನಿಂದ ಅನೇಕ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ಆಸ್ಪತ್ರೆ ಎಂದರೆ ಸಾಕು ಭಯ ಭೀತಿಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಜಿಲ್ಲೆಯ ವ್ಯಕ್ತಿಯೋರ್ವರು ಮಾತ್ರ ಶ್ರದ್ಧೆಯಿಂದ ಸೇವೆ ಸಲ್ಲಿಸುವ ಮೂಲಕ ಜನಪ್ರೀತಿ ಗಳಿಸಿದ್ದಾರೆ. ಮಲ್ಲಣ್ಣ ಎಂಬುವವರು ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ಶೂಶ್ರೂಷಕರಾಗಿ ಕೆಲಸ ಮಾಡುತ್ತಿದ್ದಾರೆ. ದುರ್ಗದ ಜನರ ಪ್ರೀತಿಯ ಮಲ್ಲಣ್ಣ, ಸರ್ವರಿಗೂ ಸಹೋದರನಂತೆ ಕಾಣುವ ಜೀವಪರ ಕಾಳಜಿಯುಳ್ಳ ವ್ಯಕ್ತಿ. ಜಿಲ್ಲಾಸ್ಪತ್ರೆಯೇ ಆಗಲಿ, ಕೊವಿಡ್ ಆಸ್ಪತ್ರೆಯೇ ಆಗಲಿ ಬಹುತೇಕರು ಮೊದಲು ಮಲ್ಲಣ್ಣ ಬ್ರದರ್ಗೆ ಫೋನ್ ಮೂಲಕ ಅಥವಾ ನೇರವಾಗಿ ಸಂಪರ್ಕಿಸಿಯೇ ಆಸ್ಪತ್ರೆಗೆ ಬರುತ್ತಾರೆ.
ಆತ್ಮಸ್ಥೈರ್ಯ ತುಂಬುವ ಮಲ್ಲಣ್ಣ ಮಲ್ಲಣ್ಣ ಬ್ರದರ್ ಇದ್ದರೆ ಸಾಕು ಏನೋ ಒಂದು ಶಕ್ತಿ ಸಮಾಧಾನ ಎಂಬುದು ಜನರ ಅಭಿಪ್ರಾಯವಾಗಿದೆ. ಅಂತೆಯೇ ಮಲ್ಲಣ್ಣ ಬ್ರದರ್ ಪ್ರತಿ ರೋಗಿಗೆ ಪ್ರೀತಿಯಿಂದ ಮಾತನಾಡಿಸಿ ಆತ್ಮಸ್ಥೈರ್ಯ ತುಂಬುವ ಪರಿ ಅನನ್ಯ. ಸದ್ಯ ಮಲ್ಲಣ್ಣ ಬ್ರದರ್ ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ಸಂದರ್ಭದಿಂದ ಈವರೆಗೆ ಒಂದೇ ಒಂದು ರಜೆಯನ್ನೂ ಪಡೆದಿಲ್ಲ. ಹತ್ತು ದಿನದ ಬಳಿಕ ಸ್ವಾಬ್ ಟೆಸ್ಟ್ ನೀಡಿ ನೆಗೆಟಿವ್ ಬಂದಾಗ ಐದು ದಿನ ರೆಸ್ಟ್ ಮಾಡುತ್ತಾರೆ. ಬಳಿಕ ಮತ್ತೆ ಡ್ಯೂಟಿಗೆ ಹಾಜರಾಗುತ್ತಾರೆ. ನಿರಂತರವಾಗಿ ಕೊವಿಡ್ ಆಸ್ಪತ್ರೆಯಲ್ಲಿ ಡ್ಯೂಟಿ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಮನೋಭಾವದಲ್ಲಿ ಪುಣ್ಯ ಫಲವಿದೆ. ಈ ಮೂಲಕವೇ ಸರ್ಕಾರದ ಕೆಲಸದಲ್ಲಿರುವ ನಾವು ಸರ್ಕಾರದ ಋಣ ಸಂದಾಯ ಮಾಡುವ ಅವಕಾಶ ಎಂಬುದು ನಮ್ಮ ನಂಬಿಕೆ ಎಂದು ಹಿರಿಯ ಶೂಶ್ರೂಷಕರಾದ ಮಲ್ಲಣ್ಣ ಬ್ರದರ್ ಅಭಿಪ್ರಾಯಪಟ್ಟರು.
ಮಲ್ಲಣ್ಣ ಬ್ರದರ್ ಕೇವಲ ಜನಪ್ರೀತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೂ ಅಚ್ಚುಮೆಚ್ಚು ಆಗಿದ್ದಾರೆ. ಜಿಲ್ಲಾಸ್ಪತ್ರೆಗೆ ಬರುವ ಜನ ವೈದ್ಯರಿಗಿಂತ ಮೊದಲು ಮಲ್ಲಣ್ಣ ಅವರನ್ನು ಸಂಪರ್ಕಿಸುತ್ತಾರೆ. ಅಂಬುಲೆನ್ಸ್ ಇರಬಹುದು, ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಡೆತ್ ಕ್ರಿಮಿನೇಷನ್ ಸೇರಿದಂತೆ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ಬೆನ್ನೆಲುಬಾಗಿ ಮಲ್ಲಣ್ಣ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಡಿಎಸ್ ಡಾ.ಬಸವರಾಜ್ ಹೇಳಿದರೆ, ಮಲ್ಲಣ್ಣ ಬ್ರದರ್ ತಾವು ಉತ್ತಮ ಕೆಲಸ ಮಾಡುವುದಲ್ಲದೆ ತಮ್ಮ ಜೊತೆಗೆ ಕೆಲಸ ಮಾಡುವವರಿಗೂ ಹುರಿದುಂಬಿಸುತ್ತ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜನರು ಹೇಳಿದರು.
ಇದನ್ನೂ ಓದಿ
ಚಿಕ್ಕಮಗಳೂರಿಗೆ ಉಸ್ತುವಾರಿ ಸಚಿವರಿಲ್ಲದೆ ಜನ ಕಂಗಾಲು; ಸರ್ಕಾರದ ವಿರುದ್ಧ ಆಕ್ರೋಶ
(Chitradurga man has earned love of t people by his diligent service)