ದಾವಣಗೆರೆ: ರಶೀದಿ ಕೇಳಿದ್ದಕ್ಕೆ ನಿವೃತ್ತ ಸೈನಿಕನಿಗೆ ಹಿಗ್ಗಾಮುಗ್ಗಾ ಥಳಿತ; ಪೊಲೀಸರ ವಿರುದ್ಧ ಸೈನಿಕನ ಆರೋಪ

ಕಳೆದ ಸೋಮವಾರ ಆನಗೋಡು ಬಳಿ ಪತ್ನಿ ಜೊತೆ ಬೈಕ್​ನಲ್ಲಿ ಬರುವಾಗ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಿಂಗನಗೌಡ ನೆಗಳೂರು ಮತ್ತು ನಾಲ್ವರು ಕಾನ್ ಸ್ಟೇಬಲ್​ಗಳು ಗಸ್ತಿನಲ್ಲಿದ್ದರು. ಈ ವೇಳೆ ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ತಡೆದು ಫೈನ್ ಹಾಕಿದರು.

ದಾವಣಗೆರೆ: ರಶೀದಿ ಕೇಳಿದ್ದಕ್ಕೆ ನಿವೃತ್ತ ಸೈನಿಕನಿಗೆ ಹಿಗ್ಗಾಮುಗ್ಗಾ ಥಳಿತ; ಪೊಲೀಸರ ವಿರುದ್ಧ ಸೈನಿಕನ ಆರೋಪ
ನಿವೃತ್ತ ಸೈನಿಕ
Follow us
sandhya thejappa
|

Updated on: May 01, 2021 | 2:41 PM

ದಾವಣಗೆರೆ: ಸೈನಿಕ ದೇಶವನ್ನು ಕಾಯುವ ದೇವರು. ತನ್ನ ಆಸೆ-ಆಕಾಂಶೆಗಳನ್ನು ಬದಿಗೊತ್ತಿ ದೇಶಕ್ಕಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಉಗ್ರರ ಜೊತೆ ಹೋರಾಟ ಮಾಡುವವರು. ಯಾವುದಕ್ಕೂ ಎದೆಗುಂದದೆ ಭಯೋತ್ಪಾದಕರ ವಿರುದ್ಧ ಸೆಣಸಾಡುವವರು. ಅದರಂತೆ ಜಿಲ್ಲೆಯ ವೀರಪ್ಪ ಎಂಬ ನಿವೃತ್ತ ಸೈನಿಕ ದೇಶ ಸೇವೆಗೆ 22 ವರ್ಷ ತನ್ನ ಬದುಕನ್ನು ಮುಡುಪಾಗಿಟ್ಟಿದ್ದರು. ಆದರೆ ನಿವೃತ್ತ ಸೈನಿಕನ ಸ್ಥಿತಿಯನ್ನು ನೋಡಿದರೆ ಕರುಳು ಕಿತ್ತು ಬಂದಂತಾಗುತ್ತದೆ. ಅವರ ಈ ಸ್ಥಿತಿಗೆ ಕಾರಣ ಗ್ರಾಮಾಂತರ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಕಾನ್ ಸ್ಟೇಬಲ್​ಗಳು ಎನ್ನುವುದು ನಿವೃತ್ತ ಸೈನಿಕನ ಆರೋಪ.

1996 ರಿಂದ 2018ರವರೆಗೆ ಬರೋಬ್ಬರಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ದಾವಣಗೆರೆಯಲ್ಲಿ ವೀರಪ್ಪ ವಾಸ ಮಾಡುತ್ತಿದ್ದರು. ಕಳೆದ ಸೋಮವಾರ ಆನಗೋಡು ಬಳಿ ಪತ್ನಿ ಜೊತೆ ಬೈಕ್​ನಲ್ಲಿ ಬರುವಾಗ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಿಂಗನಗೌಡ ನೆಗಳೂರು ಮತ್ತು ನಾಲ್ವರು ಕಾನ್ ಸ್ಟೇಬಲ್​ಗಳು ಗಸ್ತಿನಲ್ಲಿದ್ದರು. ಈ ವೇಳೆ ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ತಡೆದು ಫೈನ್ ಹಾಕಿದರು. ಇದಾದ ಬಳಿಕ ರಶೀದಿ ನೀಡುವಂತೆ ಕೇಳಿದ್ದಕ್ಕೆ ಕುಪಿತಗೊಂಡ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಿವೃತ್ತ ಸೈನಿಕ ಎಂದರೂ ಕೇಳದೆ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆಂದು ಹಲ್ಲೆಗೊಳಗಾದ ನಿವೃತ್ತ ಸೈನಿಕ ಬಿ.ಎಸ್.ವೀರಪ್ಪ ಆರೋಪಿಸಿದ್ದಾರೆ.

ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವ ವೀರಪ್ಪ ಅವರ ಬಲಗೈ ಭುಜ, ಕೈ ಹಾಗೂ ಎಡಕಾಲಿನ ಹೆಬ್ಬೆರಳು ಊದಿಕೊಂಡಿದೆ. ಕೈ ದಪ್ಪಗಾಗುವಂತೆ ಥಳಿಸಿದ್ದು, ಆರಾಮಾಗಲು ಇನ್ನು ತಿಂಗಳುಗಳು ಬೇಕಾಗಬಹುದು.

ಬೆಂಬಲಕ್ಕೆ ನಿಂತ ಮಾಜಿ ಸೈನಿಕರ ವಿವಿಧೋದ್ದೇಶ ಸಂಘ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಂಘ ವೀರಪ್ಪರ ಬೆಂಬಲಕ್ಕೆ ನಿಂತಿದೆ. ಪೊಲೀಸರ ದುರ್ವರ್ತನೆ ಖಂಡಿಸಿ ಎಸ್​ಪಿ ಹನುಮಂತರಾಯ ಹಾಗೂ ಐಜಿ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದರೂ ನೀಡಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಹಲ್ಲೆಗೊಳಗಾದವರ ಮೇಲೆ ಆರೋಪ ಹೊರಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಮೂಲಕ ಎಫ್ಐಆರ್ ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇವೆ. ಈಗಲಾದರೂ ಪ್ರಕರಣ ಸಂಬಂಧ ಸತ್ಯಾಸತ್ಯತೆ ಹೊರಬರಬೇಕು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಸೈನಿಕರು ಒತ್ತಾಯಿಸಿದ್ದಾರೆ.

ಘಟನೆಯಿಂದ ನನ್ನ ನನ್ನ ಪತ್ನಿ ಕುಗ್ಗಿ ಹೋಗಿದ್ದಾಳೆ. ಮಾತನಾಡುತ್ತಿದ್ದಂತೆ ಈ ರೀತಿಯ ದರ್ಪ ತೋರಿಸುವ ಪೊಲೀಸರು ಮಾಜಿ ಸೈನಿಕರಿಗೆ ನೀಡುವ ಗೌರವ ಇದೆಯಾ? ನಮ್ಮಂತವರಿಗೆ ಹೀಗೆ ಆದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಉಗ್ರರ ಜೊತೆ ಕಾದಾಡುವಾಗಲೂ ನಮಗೆ ಈ ರೀತಿಯ ಘಟನೆ ನಡೆದಿಲ್ಲ. ತನಗೆ ನ್ಯಾಯ ಬೇಕು ಎಂದು ವೀರಪ್ಪ ಮನವಿ ಮಾಡಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ

ಕಲಬುರಗಿ ಜಿಲ್ಲೆಗೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್; ಡ್ರಗ್ ಕಂಟ್ರೋಲ್ ಅಧಿಕಾರಿಗಳ ವಿರುದ್ಧ ಆಕ್ರೋಶ

ರಸ್ತೆಬದಿಯಲ್ಲಿ ತುಂಬ ಹೊತ್ತು ನಿಂತಿದ್ದ ಟ್ರಕ್ ಪರಿಶೀಲನೆಗೆ ಬಂದ ಪೊಲೀಸರಿಗೆ ಅಚ್ಚರಿ.. ಅನುಮಾನ; ಚಾಲಕನ ಮೊಬೈಲ್ ಪೊದೆಯಲ್ಲಿ

(police assaulted a soldier for asking for receipt in Chitradurga)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ