AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಬದಿಯಲ್ಲಿ ತುಂಬ ಹೊತ್ತು ನಿಂತಿದ್ದ ಟ್ರಕ್ ಪರಿಶೀಲನೆಗೆ ಬಂದ ಪೊಲೀಸರಿಗೆ ಅಚ್ಚರಿ.. ಅನುಮಾನ; ಚಾಲಕನ ಮೊಬೈಲ್ ಪೊದೆಯಲ್ಲಿ

ಇಂದು ದೇಶಾದ್ಯಂತ ಮೂರನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರುವಾಗಿದೆ. ಆದರೆ ಕೆಲವು ರಾಜ್ಯಗಳು ಲಸಿಕೆ ಅಭಾವ ಇದೆ ಎಂಬ ಕಾರಣಕ್ಕೆ ಮೂರನೇ ಹಂತವನ್ನು ಮುಂದೂಡಿವೆ.

ರಸ್ತೆಬದಿಯಲ್ಲಿ ತುಂಬ ಹೊತ್ತು ನಿಂತಿದ್ದ ಟ್ರಕ್ ಪರಿಶೀಲನೆಗೆ ಬಂದ ಪೊಲೀಸರಿಗೆ ಅಚ್ಚರಿ.. ಅನುಮಾನ; ಚಾಲಕನ ಮೊಬೈಲ್ ಪೊದೆಯಲ್ಲಿ
ದಾರಿಯಲ್ಲಿ ಸಿಕ್ಕ ಟ್ರಕ್​
Lakshmi Hegde
|

Updated on:May 01, 2021 | 1:40 PM

Share

ರಸ್ತೆಬದಿಯಲ್ಲಿ ನಿಂತಿದ್ದ, 2 ಲಕ್ಷಕ್ಕೂ ಅಧಿಕ ಕೊವ್ಯಾಕ್ಸಿನ್​ ಲಸಿಕೆ ತುಂಬಿದ್ದ ಟ್ರಕ್​ವೊಂದನ್ನು ಇದೀಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಹೋಗಿ ನೋಡಿದಾಗ ಆ ಟ್ರಕ್​​ನಲ್ಲಿ ಚಾಲಕನೂ ಇರಲಿಲ್ಲ. ಖಾಲಿ ಇತ್ತು. ಅಂದಹಾಗೆ ಘಟನೆ ನಡೆದಿದ್ದು ಮಧ್ಯಪ್ರದೇಶ ಕರೇಲಿ ಬಸ್​​ನಿಲ್ದಾಣದ ಬಳಿಯ ನರ್ಸಿಂಗ್​ಪುರ್​ ಎಂಬಲ್ಲಿ. ಪೊಲೀಸರು ಟ್ರಕ್​ ತಪಾಸಣೆ ನಡೆಸಿದ್ದಾಗ ಅದರಲ್ಲಿ 2,40,000 ಕೊವ್ಯಾಕ್ಸಿನ್​ ಲಸಿಕೆಗಳು ಇರುವುದು ಪತ್ತೆಯಾಗಿದೆ.

ಈ ಟ್ರಕ್​ ತುಂಬ ಹೊತ್ತಿನವರೆಗೆ ಅಲ್ಲಿಯೇ ನಿಂತಿತ್ತು. ಅದನ್ನು ನೋಡಿದ ಸ್ಥಳೀಯ ಜನರು ಕರೇಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಟ್ರಕ್​​ನಲ್ಲಿ ಸಿಕ್ಕ ಲಸಿಕೆಯ ಮೌಲ್ಯ ಸುಮಾರು 8 ಕೋಟಿ ರೂಪಾಯಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಡಿ ನಂಬರ್​ ನೋಡಿ, ಅದು ಯಾರದ್ದೆಂದು ಪತ್ತೆ ಹಚ್ಚಿ ಡ್ರೈವರ್​ನ ಮೊಬೈಲ್ ಲೊಕೇಶನ್​ ಕೂಡ ಪೊಲೀಸರು ಟ್ರ್ಯಾಕ್​ ಮಾಡಿದ್ದಾರೆ. ಜಾಡು ಹಿಡಿದು ಹೊರಟ ಪೊಲೀಸರಿಗೆ ಚಾಲಕನ ಮೊಬೈಲ್ ಸಿಕ್ಕಿದ್ದು ಹೆದ್ದಾರಿ ಪಕ್ಕದ ಪೊದೆಯೊಂದರಲ್ಲಿ. ಟ್ರಕ್​​ನ ಏರ್​ಕಂಡೀಶನ್ ಕೂಡ ಕಾರ್ಯನಿರ್ವಹಿಸುತ್ತಿದೆ. ಲಸಿಕೆಗಳೂ ಕೂಡ ಸುರಕ್ಷಿತವಾಗಿವೆ. ಚಾಲಕ ಮತ್ತು ನಿರ್ವಾಹಕನನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಸಾಧ್ಯವಾಗುತ್ತಿಲ್ಲ ಎಂದು ಕರೇಲಿ ಠಾಣೆಯ ಆಶೀಶ್​ ಬೊಪಾಚೆ ತಿಳಿಸಿದ್ದಾರೆ.

ಇಂದು ದೇಶಾದ್ಯಂತ ಮೂರನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರುವಾಗಿದೆ. ಆದರೆ ಕೆಲವು ರಾಜ್ಯಗಳು ಲಸಿಕೆ ಅಭಾವ ಇದೆ ಎಂಬ ಕಾರಣಕ್ಕೆ ಮೂರನೇ ಹಂತವನ್ನು ಮುಂದೂಡಿವೆ. ಈ ಮಧ್ಯೆ ಲಕ್ಷಾಂತರ ಡೋಸ್​ ಲಸಿಕೆ ಇರುವ ಟ್ರಕ್​ ಹೀಗೆ ಅನಾಥವಾಗಿ ಸಿಕ್ಕಿದ್ದು ಅನುಮಾನಕ್ಕೆ ಕಾರಣವಾಗಿದೆ. ಕಾಳಸಂತೆಯಲ್ಲಿ ಲಸಿಕೆ ಮಾರಾಟವಾಗುತ್ತಿದೆಯಾ ಎಂಬ ಸಂಶಯವೂ ಎದ್ದಿದೆ.

ಇದನ್ನೂ ಓದಿ: ಕೋವಿಡ್- 19ನಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ 2 ವರ್ಷ ವೇತನ, ಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಿದ ಬೋರೋಸಿಲ್

ಸುದೀಪ್ ಗುಣಮುಖ ಆಗಿದ್ದರೂ ಯಾಕೆ ಬಿಗ್​ ಬಾಸ್​ ನಡೆಸಿಕೊಡುತ್ತಿಲ್ಲ? ಜನರ ಪ್ರಶ್ನೆಗೆ ಇಲ್ಲಿದೆ ಕಿಚ್ಚನ ಉತ್ತರ

Published On - 1:40 pm, Sat, 1 May 21