ಸುದೀಪ್ ಗುಣಮುಖ ಆಗಿದ್ದರೂ ಯಾಕೆ ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ? ಜನರ ಪ್ರಶ್ನೆಗೆ ಇಲ್ಲಿದೆ ಕಿಚ್ಚನ ಉತ್ತರ
ಸದ್ಯ ಎಲ್ಲೆಲ್ಲೂ ಕೊರೊನಾ ರಣಕೇಕೆ ಹಾಕುತ್ತಿದೆ. ಹಾಗಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಅನಿಸಿಕೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಅನಾರೋಗ್ಯದ ಕಾರಣದಿಂದ ಕಿಚ್ಚ ಸುದೀಪ್ ಅವರು ಕಳೆದ ಎರಡು ವಾರದಿಂದ ಬಿಗ್ ಬಾಸ್ ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಈಗ ಸುದೀಪ್ ಚೇತರಿಸಿಕೊಂಡಿದ್ದಾರೆ. ಹಲವು ದಿನಗಳ ವಿಶ್ರಾಂತಿ ಮತ್ತು ಚಿಕಿತ್ಸೆ ಬಳಿಕ ಅವರು ಹೊಸ ಹುಮ್ಮಸ್ಸಿನೊಂದಿಗೆ ಸಜ್ಜಾಗಿದ್ದಾರೆ. ಆದರೂ ಕೂಡ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಇರುವುದಿಲ್ಲ ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ. ಈ ಬಗ್ಗೆ ಸುದೀಪ್ ಕೂಡ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಎಲ್ಲೆಲ್ಲೂ ಕೊರೊನಾ ರಣಕೇಕೆ ಹಾಕುತ್ತಿದೆ. ಹಾಗಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ನಡೆಸಿಕೊಡುವುದು ಸೂಕ್ತ ಅಲ್ಲ ಎಂದು ಸುದೀಪ್ ನಿರ್ಧರಿಸಿದ್ದಾರೆ. ತಮ್ಮ ಅನಿಸಿಕೆಯನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
‘ಕೆಲವೇ ಜನರು ಸೇರುತ್ತೇವೆ ಎಂದಾದರೂ ಸಹ ಪ್ರಸ್ತುತ ಪರಿಸ್ಥಿತಿಗೆ ಅದು ಸೂಕ್ತ ಅಲ್ಲ ಎಂಬ ಕಾರಣಕ್ಕೆ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದೇವೆ. ವೀಕ್ಷಕರಿಗೆ ನಿರಾಸೆ ಆಗಿದೆ ಎಂಬುದು ನನಗೆ ಅರ್ಥ ಆಗುತ್ತೆ. ಆದರೆ ಜಾರಿಯಾಗಿರುವ ನಿಯಮ ಪಾಲಿಸಬೇಕು ಎಂಬುದನ್ನು ನೀವೆಲ್ಲ ಒಪ್ಪಿಕೊಳ್ಳುತ್ತೀರಿ ಎಂಬ ಭರವಸೆ ನನಗಿದೆ. ಒಳ್ಳೆಯದಾಗಲಿದೆ ಎಂದು ನಂಬಿಕೆ ಇಡೋಣ. ಆದಷ್ಟು ಬೇಗ ವೀಕೆಂಡ್ ಎಪಿಸೋಡ್ಗಳೊಂದಿಗೆ ಮರಳುವ ನಿರೀಕ್ಷೆ ಇದೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Cancelled coz even if its few members gathering ,,,it isn’t supporting th current situation.. I understand viewers disappointments ,,but I’m sure we all agree tat we need to support the rules laid. Let’s hope fo the best n hopefully we can be bk wth weekend episodes asap ??? L&H https://t.co/76uzSOEytc
— Kichcha Sudeepa (@KicchaSudeep) May 1, 2021
Thanks to @nimmaupendra @NimmaShivanna @1n1ly_VRC @shetty_rishab for personally calling and showing ur concern and luv. Thanks to all those few luvly friends and colleagues frm industry for ur tweets and txts filled wth luv and prayers. L&H to all. ????
— Kichcha Sudeepa (@KicchaSudeep) May 1, 2021
ಸುದೀಪ್ ಅನಾರೋಗ್ಯಕ್ಕೆ ಒಳಗಾದಾಗ ಅನೇಕರು ಅವರ ಹೆಸರಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಚಿತ್ರರಂಗದ ಅನೇಕರು ಕಿಚ್ಚನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಅವರೆಲ್ಲರಿಗೂ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ‘ಕರೆ ಮಾಡಿ ಕಾಳಜಿ ತೋರಿಸಿದ್ದಾಗಿ ರಿಷಬ್ ಶೆಟ್ಟಿ, ಉಪೇಂದ್ರ, ರವಿಚಂದ್ರನ್ ಮತ್ತು ಶಿವರಾಜ್ಕುಮಾರ್ ಅವರಿಗೆ ಧನ್ಯವಾದಗಳು. ಟ್ವೀಟ್ ಮತ್ತು ಮೆಸೇಜ್ ಮೂಲಕ ಪ್ರಾರ್ಥಿಸಿದ ಚಿತ್ರರಂಗದ ಸಹೋದ್ಯೋಗಿಗಳು ಮತ್ತು ಸ್ನೇಹಿತರಿಗೆ ಧನ್ಯವಾದಗಳು’ ಎಂದು ಕಿಚ್ಚ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Kichcha Sudeep: ಸುದೀಪ್ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್ಗೆ ಕಿಚ್ಚ ಗೈರು
Kichcha Sudeep: ಕಿಚ್ಚ ಸುದೀಪ್ ಆರೋಗ್ಯಕ್ಕಾಗಿ ವಿಡಿಯೋ ಮಾಡಿ ಪ್ರಾರ್ಥಿಸಿದ ಜಪಾನ್ ಮಹಿಳೆ