ಬಿಗ್ ಬಾಸ್ ಮನೆಯವರಿಗೆ ಬೇಡವಾದರಾ ಮಂಜು? ಎಲ್ಲರ ಅಸಲಿಮುಖ ಬಯಲು
ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರವೇ ನಡೆಯುತ್ತಿತ್ತು. ಆದರೆ, ಈ ವಾರ ವಿಳಂಬವಾಗಿದೆ. ಶುಕ್ರವಾರ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಬಿಗ್ ಬಾಸ್ ಎಲಿಮಿನೇಷನ್ ಪ್ರಕ್ರಿಯೆ ಎಂದರೆ ಮನೆಯವರಿಗೆ ಒಂದು ರೀತಿಯ ತಲೆನೋವು. ಸ್ಪರ್ಧಿಗಳನ್ನು ಕೇವಲ ನಾಮಿನೇಷನ್ ಮಾಡಿದರೆ ಮಾತ್ರ ಸಾಲದು, ಅದಕ್ಕೆ ಸೂಕ್ತ ಕಾರಣವನ್ನು ಕೂಡ ನೀಡಬೇಕು. ಮನೆಯಲ್ಲಿ ಎಲ್ಲರ ಜತೆಯೂ ಉತ್ತಮವಾಗಿರುವ ಮಂಜು ಈಗ ಮನೆಯವರಿಗೆ ಬೇಡವಾಗಿದ್ದಾರೆ. ಈ ವಿಚಾರ ನಾಮಿನೇಷನ್ ವೇಳೆ ಸ್ಪಷ್ಟವಾಗಿದೆ.
ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರವೇ ನಡೆಯುತ್ತಿತ್ತು. ಆದರೆ, ಈ ವಾರ ವಿಳಂಬವಾಗಿದೆ. ಶುಕ್ರವಾರ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವೇಳೆ ಬಹುತೇಕರು ಮಂಜು ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ ಅತಿ ಹೆಚ್ಚು ವೋಟ್ ಪಡೆದು ಮಂಜು ಅವರೇ ನಾಮಿನೇಟ್ ಲಿಸ್ಟ್ನಲ್ಲಿ ಮೊದಲಿದ್ದಾರೆ.
ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ವೇಳೆ ಮಂಜು ತಪ್ಪು ನಿರ್ಧಾರ ತೆಗೆದುಕೊಂಡಿದ್ದರು. ಅರವಿಂದ್ಗೋಸ್ಕರ ಅವರು ಆ ರೀತಿ ಮಾಡಿದ್ದಾರೆ ಎನ್ನುವ ಮಾತಿದೆ. ಈ ವಿಚಾರವನ್ನೇ ಇಟ್ಟುಕೊಂಡು ನಾಮಿನೇಷನ್ ವೇಳೆ ಮನೆಯ ಬಹುತೇಕರು ಮಂಜು ಅವರ ಹೆಸರನ್ನು ತೆಗೆದುಕೊಂಡರು. ಅರವಿಂದ್, ದಿವ್ಯಾ ಉರುಡುಗ, ಪ್ರಶಾಂತ್ ಸೇರಿದಂತೆ ಬಹುತೇಕರು ಮಂಜು ಅವರನ್ನು ನಾಮಿನೇಷನ್ಗೆ ಆಯ್ಕೆ ಮಾಡಿದರು.
ಮಂಜು ಪಾವಗಡ, ಗೇಮ್ ಆಡಬೇಕಾದರೆ ಫೇವರಿಸಂ ಮಾಡುತ್ತಾರೆ, ದ್ವೇಷದ ಆಟ ಆಡುತ್ತಾರೆ, ಅವರು ರಿವೇಂಜ್ ತೆಗೆದುಕೊಳ್ಳುತ್ತಾರೆ, ಮೋಸದ ಆಟ ಆಡುತ್ತಾರೆ ಎಂಬಿತ್ಯಾದಿ ಆರೋಪಗಳು ಬಂದವು. ಈ ಮೂಲಕ ಎಲಿಮಿನೇಷನ್ ತೂಗುಗತ್ತಿ ಅವರ ತಲೆಯಮೇಲೆ ತೂಗುವಂತಾಯಿತು.
ಉಳಿದಂತೆ, ಪ್ರಶಾಂತ್, ಚಕ್ರವರ್ತಿ ಚಂದ್ರಚೂಡ್, ಅರವಿಂದ್ ನಾಮಿನೇಟ್ ಆದರು. ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ನೇರವಾಗಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ಗೌಡ ಅವರು ಒಬ್ಬರ ಹೆಸರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಆಗ ಅವರು ಶುಭಾ ಅವರ ಹೆಸರನ್ನು ತೆಗೆದುಕೊಂಡರು. ಶುಭಾ ಗೋಲ್ಡನ್ ಪಾಸ್ ಬಳಸಿ ನಾಮಿನೇಷನ್ನಿಂದ ಬಚಾವ್ ಆದರು.
ಇದನ್ನೂ ಓದಿ: ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ
ಬಿಗ್ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರಗಿ; ಸುದೀಪ್ ಛೀಮಾರಿ