Assembly Election Result 2021: 4 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಇಂದು ಮತಎಣಿಕೆ; ಒಟ್ಟು ಕ್ಷೇತ್ರಗಳು, ಸಮಯದ ವಿವರ ಇಲ್ಲಿದೆ..

Assembly Election Result 2021 Tomorrow: ಮತ ಎಣಿಕೆ ಮೇ 2, ಭಾನುವಾರ ಬೆಳಗ್ಗೆ 8ಗಂಟೆಗೆ ಪ್ರಾರಂಭವಾಗಲಿದ್ದು, ಪ್ರಾರಂಭಿಕ ಟ್ರೆಂಡ್​ ಏನಿದೆ ಎಂಬುದು ಬೆಳಗ್ಗೆ 10-11 ಗಂಟೆಯ ಹೊತ್ತಿಗೆಲ್ಲ ಗೊತ್ತಾಗಿಬಿಡುತ್ತದೆ.

Assembly Election Result 2021: 4 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಇಂದು ಮತಎಣಿಕೆ; ಒಟ್ಟು ಕ್ಷೇತ್ರಗಳು, ಸಮಯದ ವಿವರ ಇಲ್ಲಿದೆ..
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Digi Tech Desk

Updated on:May 02, 2021 | 8:44 AM

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಫಲಿತಾಂಶ ಭಾನುವಾರ (ಮೇ 2) ಹೊರಬೀಳಲಿದ್ದು, ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸದ್ಯದ ಮಟ್ಟಿಗೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಆಸ್ಸಾಂ ಮತ್ತು ಪುದುಚೇರಿಯತ್ತಲೇ ಎಲ್ಲರ ಗಮನ ನೆಟ್ಟಿದೆ. ಇದರಲ್ಲಿ ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ಮುಗಿದುಹೋಗಿತ್ತು. ಆಸ್ಸಾಂನಲ್ಲಿ ಮೂರು ಹಂತದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಒಟ್ಟು 8ಹಂತದಲ್ಲಿ ಮತದಾನ ನಡೆದಿದ್ದು, ಈ ಎಲ್ಲ ರಾಜ್ಯಗಳ ಫಲಿತಾಂಶವೂ ಪ್ರಕಟವಾಗಲಿದ್ದು, ಸಂಬಂಧಪಟ್ಟ ರಾಜಕೀಯ ಪಕ್ಷಗಳಿಗೆ ಇದು ನಿರ್ಣಾಯಕ ಆಗಲಿದೆ. ಫಲಿತಾಂಶದ ತಾಜಾ ವಿವರಕ್ಕೆ https://tv9kannada.com/elections/livetv ಲಿಂಕ್ ಕ್ಲಿಕ್ ಮಾಡಿ.

ಎಷ್ಟು ಗಂಟೆಗೆ ಪ್ರಾರಂಭ? ಮತ ಎಣಿಕೆ ಮೇ 2, ಭಾನುವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಪ್ರಾರಂಭಿಕ ಟ್ರೆಂಡ್​ ಏನಿದೆ ಎಂಬುದು ಬೆಳಗ್ಗೆ 10-11 ಗಂಟೆಯ ಹೊತ್ತಿಗೆಲ್ಲ ಗೊತ್ತಾಗಿಬಿಡುತ್ತದೆ. ಸಂಜೆ 5ಗಂಟೆ ಹೊತ್ತಿಗೆ ಅಂತಿಮವಾಗಿ ಗೆದ್ದವರ ಹೆಸರು ಹೊರಬೀಳಲಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಫಲಿತಾಂಶ ಹೊರಬೀಳುವುದು ಸ್ವಲ್ಪ ತಡವಾಗಬಹುದು. ಯಾಕೆಂದರೆ ಇಲ್ಲಿ 78,799 ಮತಗಟ್ಟೆಗಳಲ್ಲಿ ಎಣಿಕೆ ನಡೆಯಬೇಕಾಗಿದೆ. ಇನ್ನು ಇಲ್ಲಿ ದಾಂಧಲೆ ನಡೆಯುವುದು ಸಾಮಾನ್ಯವಾಗಿದ್ದು, ಕೆಲವು ಮತಗಟ್ಟೆಗಳು ತೀರ ಸೂಕ್ಷ್ಮವಾಗಿದೆ.

ಎಲ್ಲೆಲ್ಲಿ ಎಷ್ಟು ಕ್ಷೇತ್ರಗಳಿವೆ? ಪಶ್ಚಿಮಬಂಗಾಳದಲ್ಲಿ 294 ಕ್ಷೇತ್ರಗಳಿದ್ದು, ಬಹುಮತ ಪಡೆಯಲು 148 ಸೀಟುಗಳು ಬೇಕು ತಮಿಳುನಾಡು-234 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬಹುಮತದೊಂದಿಗೆ ಸರ್ಕಾರ ರಚಿಸಲು 118 ಸೀಟ್​ಗಳನ್ನು ಗೆಲ್ಲಲೇಬೇಕು.ಕೇರಳ: ಒಟ್ಟು 140 ಕ್ಷೇತ್ರಗಳಿದ್ದು, ಮೆಜಾರಿಟಿಗೆ 71 ಕ್ಷೇತ್ರಗಳಲ್ಲಿ ಗೆಲುವು ಬೇಕು. ಆಸ್ಸಾಂ: ಒಟ್ಟು 126 ಕ್ಷೇತ್ರಗಳು.. ಬಹುಮತದ ಸಂಖ್ಯೆ 64 ಪುದುಚೇರಿ: ಒಟ್ಟು 30+ ಮೂವರು ನಾಮನಿರ್ದೇಶಿತ ಸ್ಥಾನಗಳು; ಬಹುಮತ ಪಡೆಯಲು 17 ಸೀಟ್​ಗಳು ಬೇಕು.

ಕೊವಿಡ್​​ನಿಂದಾಗಿ ಕಟ್ಟುನಿಟ್ಟಿನ ಕ್ರಮ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿರುವ ಕಾರಣ ಮತಗಟ್ಟೆ ಏಜೆಂಟ್​ಗಳು ಎಣಿಕೆ ಕೇಂದ್ರಗಳಿಗೆ ಕೊವಿಡ್ 19 ನೆಗೆಟಿವ್ ರಿಪೋರ್ಟ್ ಇಲ್ಲದೆ ಪ್ರವೇಶಿಸುವಂತಿಲ್ಲ. ಎರಡೂ ಡೋಸ್ ಲಸಿಕೆಯನ್ನೂ ಪಡೆದಿರಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದು ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯ ಆಗಲಿದೆ.

ಅಷ್ಟೇ ಅಲ್ಲ, ಯಾವ ರಾಜ್ಯಗಳಲ್ಲೂ ಮತ ಎಣಿಕೆಯ ಬಳಿಕ ಗೆದ್ದ ಪಕ್ಷಗಳು ವಿಜಯೋತ್ಸವ ಆಚರಿಸುವಂತಿಲ್ಲ. ಮೆರವಣಿಗೆಗಳನ್ನು ನಡೆಸಬಾರದೂ ಎಂದು ಚುನಾವಣಾ ಯೋಗ ಹೇಳಿದೆ. ಇನ್ನು ಎಲ್ಲ ರಾಜ್ಯಗಳ ಎಕ್ಸಿಟ್ ಪೋಲ್​ಗಳು ಈಗಾಗಲೇ ಹೊರಬಿದ್ದಿದ್ದು, ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ ಸರ್ಕಾರದ ಪರವಾಗಿಯೇ ಇದೆ. ಆದರೆ ಬಿಜೆಪಿ ಈ ಬಾರಿ ಹೆಚ್ಚು ಫೈಟ್​ ಕೊಡಲಿದೆ. ಕಳೆದ ಚುನಾವಣೆಗಳಿಗಿಂತ ಅಧಿಕ ಸೀಟ್​ಗಳನ್ನು ಗೆಲ್ಲಲಿದೆ ಎಂದು ಹೇಳಲಾಗಿದೆ. ಹಾಗೇ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಆಸ್ಸಾಂನಲ್ಲಿ ಬಿಜೆಪಿಯೇ ಗೆಲ್ಲಲಿದ್ದು, ಕೇರಳದಲ್ಲಿ ಮತ್ತೆ ಎಲ್​ಡಿಎಫ್​ ಅಧಿಕಾರಕ್ಕೆ ಬರಲಿದೆ. ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ಪರ ಜನ ಒಲವು ತೋರಿದ್ದಾರೆ ಎನ್ನಲಾಗಿದ್ದು, ಪುದುಚೇರಿಯಲ್ಲಿ ಎನ್​ಡಿಎ ಅಧಿಕಾರ ಹಿಡಿಯಲಿದೆ.

ಕರ್ನಾಟಕದ ಮೂರು ಕ್ಷೇತ್ರಗಳ ಕೌಂಟಿಂಗ್​ ಇನ್ನು ರಾಜ್ಯದ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಮತ್ತು ಬೆಳಗಾವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕೂಡ ಹೊರಬೀಳಲಿದೆ. ನೀವು ಈ ಎಲ್ಲ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಳನ್ನು ಟಿವಿ 9 ಕನ್ನಡ ಸುದ್ದಿವಾಹಿನಿ ಮತ್ತು https://tv9kannada.com/ ವೆಬ್​ಸೈಟ್ ಮೂಲಕ ಪಡೆಯಬಹುದಾಗಿದೆ.

ಫಲಿತಾಂಶದ ತಾಜಾ ವಿವರಕ್ಕೆ https://tv9kannada.com/elections/livetv ಲಿಂಕ್ ಕ್ಲಿಕ್ ಮಾಡಿ.

ಇದನ್ನೂ ಓದಿ: ಕೊವಿಡ್​ ಮಾರ್ಗಸೂಚಿಗಳ ಜಾರಿಗೊಳಿಸುವುದು ಈ ವರ್ಷ ಕಷ್ಟ ಕಷ್ಟವಾಗಿದೆ: ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್​ ಸೂದ್

7 changes from May: ಮೇ ತಿಂಗಳ ಮೊದಲ ದಿನದಿಂದ ಈ 7 ಬದಲಾವಣೆಗಳನ್ನು ನಿರೀಕ್ಷಿಸಿ, ಸಿದ್ಧರಾಗಿ

Published On - 11:36 am, Sat, 1 May 21