AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಜಾಗೃತಿ ಮೂಡಿಸುತ್ತಿರುವ ಯುವಕನಿಗೆ ಹರಿದುಬಂತು ಹಾಸನ ಜನರ ಮೆಚ್ಚುಗೆ

ಗಿರೀಶ್ ಎಂಬ ಯುವಕ ಬೀದಿ ಬೀದಿಗೆ ತಿರುಗಿ ಜಾಗೃತಿ ಮೂಡಿಸುತ್ತಾರೆ. ಜೀವದ ಹಂಗು ತೊರೆದು, ಹಾದಿ ಬೀದಿ, ಬಡಾವಣೆ ಎಲ್ಲೆಲ್ಲೂ ಸುತ್ತಾಡುತ್ತಾರೆ. ಗಿರೀಶ್ ಸ್ಕೌಟ್ಸ್ ಗಿರೀಶ್ ಎಂದೇ ಹಾಸನದಲ್ಲಿ ಪ್ರಚಲಿತನಾಗಿರುವ ಯುವಕ ಕೊರೊನ ಕಾಲದಲ್ಲಿ ಎಲ್ಲರಿಗೆ ಮಿತ್ರನಾಗಿ ಆತ್ಮೀಯನಾಗಿದ್ದಾರೆ.

ಕೊರೊನಾ ಜಾಗೃತಿ ಮೂಡಿಸುತ್ತಿರುವ ಯುವಕನಿಗೆ ಹರಿದುಬಂತು ಹಾಸನ ಜನರ ಮೆಚ್ಚುಗೆ
ಕೊರೊನಾ ಜಾಗೃತಿ ಮೂಡಿಸುತ್ತಿರುವ ಯುವಕ ಗಿರೀಶ್
sandhya thejappa
|

Updated on: May 01, 2021 | 3:54 PM

Share

ಹಾಸನ: ಜಗತ್ತಿನೆಲ್ಲೆಡೆ ಕೊರೊನಾ ಎರಡನೇ ಅಲೆ ಭೀತಿ ಹುಟ್ಟಿಸುತ್ತಿದೆ. ಸೋಂಕು ಶರವೇಗದಲ್ಲಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಸರಣಿ ಸಾವುಗಳು ಭೀತಿ ಹೆಚ್ಚಿಸಿವೆ. ಕೊರೊನಾ ಹರಡುವ ಸರಪಳಿಯನ್ನು ತುಂಡರಿಸಲು ಸರ್ಕಾರ ಕಠಿಣ ನಿಯಮಗಳ ಮೊರೆ ಹೋಗಿದೆ. ಆದರೂ ಜನರು ಮಾತ್ರ ಅದ್ಯಾಕೋ ನಿಯಮ ಪಾಲನೆಗೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಯುವಕನೊಬ್ಬ ಜೀವದ ಹಂಗು ತೊರೆದು ಬೀದಿ ಬೀದಿ ಅಲೆಯುತ್ತಾರೆ. ದಿನವಿಡೀ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡುವ ಯುವಕ ಎಲ್ಲರ ಮಿತ್ರನಾಗಿ ಕೊರೊನಾ ತಡೆಗೆ ಶ್ರಮಿಸುತ್ತಿದ್ದಾರೆ.

ಗಿರೀಶ್ ಎಂಬ ಯುವಕ ಬೀದಿ ಬೀದಿಗೆ ತಿರುಗಿ ಜಾಗೃತಿ ಮೂಡಿಸುತ್ತಾರೆ. ಜೀವದ ಹಂಗು ತೊರೆದು, ಹಾದಿ ಬೀದಿ, ಬಡಾವಣೆ ಎಲ್ಲೆಲ್ಲೂ ಸುತ್ತಾಡುತ್ತಾರೆ. ಗಿರೀಶ್ ಸ್ಕೌಟ್ಸ್ ಗಿರೀಶ್ ಎಂದೇ ಹಾಸನದಲ್ಲಿ ಪ್ರಚಲಿತನಾಗಿರುವ ಯುವಕ ಕೊರೊನ ಕಾಲದಲ್ಲಿ ಎಲ್ಲರಿಗೆ ಮಿತ್ರನಾಗಿ ಆತ್ಮೀಯನಾಗಿದ್ದಾರೆ. ಈತ ಕಳೆದ ಒಂದು ತಿಂಗಳಿನಿಂದ ಬೆಳಿಗ್ಗೆ 7 ಗಂಟೆಗೆ ಹಾಸನದ ಮಾರ್ಕೆಟ್, ಎಪಿಎಂಸಿ, ಬಡಾವಣೆಗಳು ವಾಣಿಜ್ಯ ಪ್ರದೇಶಕ್ಕೆ ಬೇಟಿ ನೀಡಿ ಎಲ್ಲೆಡೆ ಕೊರೊನ ಜಾಗೃತಿ ಮೂಡಿಸುತ್ತಾರೆ.

ಅಗತ್ಯ ವಸ್ತುಗಳ ಖರೀದಿ ಸಮಯ ಮೀರುತ್ತಲೆ ಪ್ರತ್ಯಕ್ಷವಾಗುವ ಗಿರೀಶ್ ಎಲ್ಲರೂ ವ್ಯಾಪಾರ ಬಂದ್ ಮಾಡಿಸುವಂತೆ ಮನವಿ ಮಾಡುತ್ತಾರೆ. ಯಾರು ಇವರನ್ನು ಕೇಳಿಲ್ಲವಾದರೂ ಸ್ವಯಂ ಸ್ಪೂರ್ತಿಯಿಂದ ಬಂದು ಎಲ್ಲೆಡೆ ಸುತ್ತಾಡುವ ಗಿರೀಶ್ ಜನರು ಕೊರೊನದಿಂದ ದೂರವಾಗಲು ಹೇಗಿರಬೇಕು, ಯಾವ ರೀತಿಯ ಅಹಾರ ಸೇವಿಸಬೇಕೆಂದು ಕೊರೊನಾ ಬಗೆಗೆ ಅರಿವು ಮೂಡಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಳೆದ ವರ್ಷವೂ ಕೂಡ ಕೊವಿಡ್ ಕಾಲದಲ್ಲಿ ಜನರ ನಡುವೆ ಜಾಗೃತಿ ಮೂಡಿಸಿದ್ದ ಗಿರೀಶ್ ಈಗ ಮತ್ತೆ ತನ್ನ ಕಾರ್ಯ ಮುಂದುವರೆಸಿದ್ದಾರೆ. ಕೈಯಲ್ಲಿ ಮೈಕ್ ಹಿಡಿದು ಎಲ್ಲರನ್ನ ಪ್ರೀತಿಯಿಂದ ಮಾತನಾಡಿಸುತ್ತಾ, ಜಾಗೃತಿ ಮೂಡಿಸುತ್ತಾ ಎಲ್ಲರ ಪ್ರೀತಿ ಗಳಿಸುತ್ತಿದ್ದಾರೆ. ಜನರು ಮೈಮರೆತು ಎಲ್ಲೆಡೆ ಓಡಾಡುತ್ತಿದ್ದರೆ ಗಿರೀಶ್ ಮಾತ್ರ ಎಲ್ಲರಲ್ಲೂ ಅರಿವು ಮೂಡಿಸುತ್ತಿದ್ದಾರೆ.

ಇದನ್ನೂ ಓದಿ

ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವ ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ: ಕ್ರಿಕೆಟರ್ ಅಶ್ವಿನ್ ಪತ್ನಿ

ಚಿತ್ರರಂಗಕ್ಕೆ ಶಾಪವಾದ ಕೊರೊನಾ; ಬಾಲಿವುಡ್​ನ ಖ್ಯಾತ ನಟ ಕೊವಿಡ್​​ಗೆ ಬಲಿ

(Hassan youth is raising awareness of corona infection)