ಚಿತ್ರರಂಗಕ್ಕೆ ಶಾಪವಾದ ಕೊರೊನಾ; ಬಾಲಿವುಡ್​ನ ಖ್ಯಾತ ನಟ ಕೊವಿಡ್​​ಗೆ ಬಲಿ

ಚಿತ್ರರಂಗದ ಸಾಲು ಸಾಲು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಬಾಲಿವುಡ್​, ಕಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಕೊರೊನಾದಿಂದ ಮೃತಪಡುತ್ತಿದ್ದಾರೆ.

ಚಿತ್ರರಂಗಕ್ಕೆ ಶಾಪವಾದ ಕೊರೊನಾ; ಬಾಲಿವುಡ್​ನ ಖ್ಯಾತ ನಟ ಕೊವಿಡ್​​ಗೆ ಬಲಿ
ನಟ ಬಿಕ್ರಮ್​ಜೀತ್​
Follow us
ರಾಜೇಶ್ ದುಗ್ಗುಮನೆ
|

Updated on: May 01, 2021 | 3:24 PM

ಹಿಂದಿಯ ಪ್ರಮುಖ​ ಸಿನಿಮಾ, ಟಿವಿ ಶೋ ಹಾಗೂ ವೆಬ್​ ಸೀರಿಸ್​​ಗಳಲ್ಲಿ ಅಭಿನಯಿಸಿದ್ದ ನಟ ಮೇಜರ್​ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಕೊವಿಡ್​ಗೆ ಬಲಿಯಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಈ ಮೂಲಕ ಭಾರತ ಚಿತ್ರರಂಗ ಮತ್ತೋರ್ವ ಕಲಾವಿದನನ್ನು ಕಳೆದುಕೊಂಡಂತಾಗಿದೆ.

ಬಿಕ್ರಮ್‌ಜೀತ್ ಕನ್ವರ್‌ಪಾಲ್ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ಅಂಟಿರುವ ವಿಚಾರ ದೃಢವಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಅವರಿಗೆ ತೀವ್ರವಾಗಿ ಉಸಿರಾಟದ ತೊಂದರೆ ಕಾಡಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಬಿಕ್ರಮ್‌ಜೀತ್ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಬಿಕ್ರಮ್​ಜೀತ್​ ಸಾವು ಬಾಲಿವುಡ್​ಗೆ ಶಾಕ್​ ನೀಡಿದೆ. ಸಾಕಷ್ಟು ಸೆಲೆಬ್ರಿಟಿಗಳು ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಫಿಲ್ಮ್​​ಮೇಕರ್​ ಅಶೋಕ್​ ಪಂಡಿತ್​, ಬಿಕ್ರಮ್​ಜೀತ್​ ಕೊವಿಡ್​ಗೆ ಬಲಿಯಾಗಿದ್ದಾರೆ. ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಚಿತ್ರರಂಗಕ್ಕೆ ಬಂದು ಸಾಕಷ್ಟು ಪೋಷಕ ಪಾತ್ರ ನಿರ್ವಹಿಸಿದ್ದರು. ಅವರ ಕುಟುಂದವರಿಗೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದಿದ್ದಾರೆ.

ಬಿಕ್ರಮ್​ಜೀತ್ ಸೇನೆಯಲ್ಲಿ ಸೇವೆಸಲ್ಲಿಸಿ ಬಂದ ನಂತರ 2003ರಲ್ಲಿ ನಟನೆ ಆರಂಭಿಸಿದರು. ಪೇಜ್​ 3, ರಾಕೆಟ್​ ಸಿಂಗ್​, ಆರಕ್ಷಕನ್​, ಮರ್ಡರ್​ 2, 2 ಸ್ಟೇಟ್ಸ್​, ಘಾಜಿ ಅಟ್ಯಾಕ್​, ರಹಸ್ಯ ಸೇರಿ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇವರು ಕೊನೆಯಾದಾಗಿ ಕಾಣಿಸಿಕೊಂಡಿದ್ದು ಹಾಟ್​ ಸ್ಟಾರ್​ನ Special Ops ವೆಬ್​ ಸೀರಿಸ್​ನಲ್ಲಿ.

ಚಿತ್ರರಂಗದ ಸಾಲು ಸಾಲು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಬಾಲಿವುಡ್​, ಕಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಕೊರೊನಾದಿಂದ ಮೃತಪಡುತ್ತಿದ್ದಾರೆ. ಯುವ ನಟ-ನಿರ್ಮಾಪಕ ಡಿ.ಎಸ್. ಮಂಜುನಾಥ್, ಪೆಟ್ರೋಮ್ಯಾಕ್ಸ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜಶೇಖರ್ ಅವರನ್ನು ಕೊರೊನಾ ಬಲಿ ತೆಗೆದುಕೊಂಡಿದೆ.

ಇದನ್ನೂ ಓದಿ: Corona Death: ಪೆಟ್ರೋಮ್ಯಾಕ್ಸ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜು ನಿಧನ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ