77ರ ಹರೆಯದಲ್ಲೂ ಭಾರೀ ‘ಕಸರತ್ತು’: ಸಿಎಂ BSYರಿಂದ ಜಿಮ್​ನಲ್ಲಿ ಸಖತ್ ವರ್ಕ್​ಔಟ್​!

|

Updated on: Jan 08, 2021 | 9:48 PM

KAS ಅಧಿಕಾರಿಗಳ ಸಂಘದ ಶತಮಾನೋತ್ಸವ ಭವನದ ಶಂಕುಸ್ಥಾಪನೆ ಹಾಗೂ ಜಿಮ್​ನ ಲೋಕಾರ್ಪಣೆ ವೇಳೆ ಮುಖ್ಯಮಂತ್ರಿ B.S.ಯಡಿಯೂರಪ್ಪ ಕೊಂಚ ಡಿಫರೆಂಟ್​ ಆಗಿ ಉದ್ಘಾಟನೆ ಮಾಡಲು ಮುಂದಾದರು.

77ರ ಹರೆಯದಲ್ಲೂ ಭಾರೀ ‘ಕಸರತ್ತು’: ಸಿಎಂ BSYರಿಂದ ಜಿಮ್​ನಲ್ಲಿ ಸಖತ್ ವರ್ಕ್​ಔಟ್​!
ಜಿಮ್ ಉದ್ಘಾಟನೆ ವೇಳೆ ಸಿಎಂ BSYರಿಂದ ​ಸಖತ್ ವರ್ಕಔಟ್​!
Follow us on

ಬೆಂಗಳೂರು: KAS ಅಧಿಕಾರಿಗಳ ಸಂಘದ ಶತಮಾನೋತ್ಸವ ಭವನದ ಶಂಕುಸ್ಥಾಪನೆ ಹಾಗೂ ಜಿಮ್​ನ ಲೋಕಾರ್ಪಣೆ ವೇಳೆ ಮುಖ್ಯಮಂತ್ರಿ B.S.ಯಡಿಯೂರಪ್ಪ ಕೊಂಚ ಡಿಫರೆಂಟ್​ ಆಗಿ ಉದ್ಘಾಟನೆ ಮಾಡಲು ಮುಂದಾದರು.

ನಗರದ ಇನ್​ಫೆಂಟ್ರಿ ರಸ್ತೆಯಲ್ಲಿರುವ ಸಂಘದಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಿಎಂ ಯಡಿಯೂರಪ್ಪ ಜಿಮ್ ಉದ್ಘಾಟಿಸಿ 2021ರ ದಿನಚರಿಯನ್ನು ಸಹ ಬಿಡುಗಡೆ ಮಾಡಿದರು. ಈ ವೇಳೆ, ವ್ಯಾಯಾಮ ಮಾಡುವ ಮೂಲಕ ಜಿಮ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಆಡಳಿತ ಸುಧಾರಣಾ ಆಯೋಗ-2 ಅಧ್ಯಕ್ಷ ವಿಜಯ ಭಾಸ್ಕರ್ ಹಾಗೂ ಕೆಎಎಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ನಡುವೆ, ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಮುಂದೆ ಅಧಿಕಾರಿಗಳು ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದರು. ನಗರದಲ್ಲಿ ಮನೆ ಕಟ್ಟಿಕೊಳ್ಳಲು ನಮಗೆ ಒಂದು ನಿವೇಶನ ಬೇಕು. ಈಗಾಗಲೇ ಬಿಡಿಎ ಮೂಲಕ 25 ಎಕರೆ ಮಂಜೂರು ಆಗಿದೆ. ಅದಕ್ಕೆ ತಾವು ಅನುಮೋದನೆ ಮಾಡಿಕೊಡಬೇಕೆಂದು ಸಿಎಂಗೆ ಮನವಿ ಮಾಡಿದರು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಸಂಘದ ಬೇಡಿಕೆ ಬಗ್ಗೆ ಗಮನಹರಿಸೋದಾಗಿ ಸಿಎಸ್ ಹೇಳಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಜನರಿಗೆ ಬೇಸರ ಇದೆ. ಕಷ್ಟದಲ್ಲಿದ್ದಾಗ ಸ್ಪಂದಿಸುವುದಿಲ್ಲ ಎಂದು ಜನರಿಗೆ‌ ಬೇಸರ ಇದೆ. ಜನರು ಸಂಕಷ್ಟದಲ್ಲಿದ್ದಾಗ ಅವರಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

Published On - 7:29 pm, Fri, 8 January 21