ರಾಜ್ಯದ ಹಲವು ಕಡೆ ಧಾರಾಕಾರ ಮಳೆ: ಬೆಳೆ ನಾಶ
ಹಾವೇರಿ, ದಾವಣಗೆರೆ, ಕೊಡಗು, ಹುಬ್ಬಳ್ಳಿ, ಚಿಕ್ಕಮಗಳೂರು ಸೇರಿದಂತೆ ಕೆಲವು ಕಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಚಿಕ್ಕಮಗಳೂರಿನಲ್ಲಿ ಒಣ ಹಾಕಿದ ಕಾಫಿ ಫಸಲು ಕಣ್ಮುಂದೆಯೇ ಕೊಚ್ಚಿ ಹೋಗುತ್ತಿವೆ.
ಎರಡು ದಿನಗಳ ಕಾಲ ಸುರಿದ ಮಳೆಯಿಂದ ಬೆಂಗಳೂರಿನ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಇಂದು (ಜನವರಿ 8) ರಾಜ್ಯದ ಕೆಲವು ಕಡೆ ಭಾರಿ ಮಳೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಹಾವೇರಿ, ದಾವಣಗೆರೆ, ಕೊಡಗು, ಹುಬ್ಬಳ್ಳಿ, ಚಿಕ್ಕಮಗಳೂರು ಸೇರಿದಂತೆ ಕೆಲವು ಕಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಚಿಕ್ಕಮಗಳೂರಿನಲ್ಲಿ ಒಣ ಹಾಕಿದ ಕಾಫಿ ಫಸಲು ಕಣ್ಮುಂದೆಯೇ ಕೊಚ್ಚಿ ಹೋಗುತ್ತಿವೆ. ಗದ್ದೆಯಲ್ಲಿ ಕೊಯ್ಲು ಮಾಡಿದ ಭತ್ತ ಮಳೆ ನೀರಿಗೆ ಸಿಕ್ಕಿ ರೈತರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಜಿಲ್ಲೆಯ ಕೊಪ್ಪ ತಾಲೂಕಿನ ಕಾನೂರು ಕಟ್ಟಿನಮನೆಯಲ್ಲಿ ಕಳೆದ ಒಂದು ಗಂಟೆಯಲ್ಲಿ ಮೂರು ಇಂಚು ಮಳೆಯಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗುಡುಗು-ಮಿಂಚು ಸಹಿತ ರಭಸದ ಮಳೆ ಸತತ 1ಗಂಟೆಯಿಂದ ಸುರಿಯುತ್ತಿದ್ದು, ಅರ್ಧ ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಹಾವೇರಿ, ದಾವಣಗೆರೆ ಹಾಗೂ ಮಡಿಕೇರಿ ಜಿಲ್ಲೆಯ ಕೆಲ ಭಾಗದ ರೈತರು ಕಂಗಾಲಾಗಿದ್ದು, ಅಕಾಲಿಕ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಕೊಚ್ಚಿ ಹೋಯ್ತು ಕಾಫಿ.. ಕರಗಿ ಹೋಗ್ತಿದೆ ಭತ್ತ: ವರ್ಷದ ಕೂಳನ್ನೇ ಕಿತ್ತುಕೊಂಡ ಅಕಾಲಿಕ ಮಳೆ