BSY ಏಕಾಂಗಿ ಪಯಣ: ಕಾರು ಕರೆಸಿ.. ಮನೆಗೆ ಹೋಗಬೇಕು ಎನ್ನುತ್ತಾ ಯಾರಿಗೂ ಏನೂ ಹೇಳದೆ ವಿಧಾನಸೌಧದಿಂದ ನಿರ್ಗಮನ!

ಯಾರಿಗೂ ಪೂರ್ವಭಾವಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಕೆಂಗಲ್ ಗೇಟ್ ಬಳಿ ಆಗಮಿಸಿದ ಮುಖ್ಯಮಂತ್ರಿಯನ್ನು ಕಂಡು ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಬಾದರು.

BSY ಏಕಾಂಗಿ ಪಯಣ: ಕಾರು ಕರೆಸಿ.. ಮನೆಗೆ ಹೋಗಬೇಕು ಎನ್ನುತ್ತಾ ಯಾರಿಗೂ ಏನೂ ಹೇಳದೆ ವಿಧಾನಸೌಧದಿಂದ ನಿರ್ಗಮನ!
B.S.ಯಡಿಯೂರಪ್ಪ
KUSHAL V

|

Feb 01, 2021 | 5:37 PM

ಬೆಂಗಳೂರು: ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಬಜೆಟ್​ ಮಂಡನೆಯನ್ನು ಟಿವಿಯಲ್ಲಿ ವೀಕ್ಷಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಬಳಿಕ ದಿಢೀರನೇ ಸದನದಿಂದ ತೆರಳಿದರು.

ಯಾರಿಗೂ ಪೂರ್ವಭಾವಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಕೆಂಗಲ್ ಗೇಟ್ ಬಳಿ ಆಗಮಿಸಿದ ಮುಖ್ಯಮಂತ್ರಿಯನ್ನು ಕಂಡು ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಬಾದರು.

ಯಾರಿಗೂ ಏನೂ ಹೇಳದೆ, ಕಾರು ಕರೆಯಿರಿ ಎಂದ BSY, ಕಾರು ಕರೆಸಿ, ಮನೆಗೆ ಹೋಗಬೇಕು ಎಂದು ಹೇಳಿ ಸುಮ್ಮನಾದರು. ಆದರೆ, ಕಾರು ಬರಲು ಕೊಂಚ ತಡವಾದ ಹಿನ್ನೆಲೆಯಲ್ಲಿ ತಮ್ಮ ವಾಹನಕ್ಕಾಗಿ ಏಕಾಂಗಿಯಾಗಿ ಕೆಂಗಲ್ ಗೇಟ್ ಬಳಿ ನಿಂತ ಸಿಎಂ ಯಡಿಯೂರಪ್ಪ 5 ನಿಮಿಷ ಕಾದು ನಂತರ ಕಾರಿನಲ್ಲಿ ಹೊರಟು ಹೋದರು. ಸದ್ಯ, ಯಡಿಯೂರಪ್ಪ ಅವರು ದೀಢೀರ್​ ಆಗಿ ತೆರಳಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದೀದಿ ಸರ್ಕಾರಕ್ಕೆ ಮತ್ತೆ ಆಘಾತ.. ಟಿಎಂಸಿ ಶಾಸಕ ದೀಪಕ್ ಹಲ್ದಾರ್ ರಾಜೀನಾಮೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada