ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೆಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಇಂದು ಸಂಕ್ರಾಂತಿ ಹಬ್ಬ. ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದ್ರೆ, ಇಲ್ಲೋರ್ವ ಮಹಿಳೆ, ಗಂಡ ತನ್ನ ಚೆನ್ನಾಗಿ ನೋಡಿಕೊಳ್ಳಲ್ಲ ಎಂದು ಹಬ್ಬದ ದಿನವೇ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೆಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
Edited By:

Updated on: Jan 15, 2024 | 5:43 PM

ಬೆಂಗಳೂರು, (ಜನವರಿ 15): ಪತಿ ಚೆನ್ನಾಗಿ ನೋಡಿಕೊಳ್ಳಲ್ಲ ಎಂದು ಮನನೊಂದ ಮಹಿಳೆಯೋರ್ವಳು ಕರೆಗೆ ಹಾರಿ ಆತ್ಮಹತ್ಯೆಹಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿ ನಡೆದಿದೆ. ಗೂಳ್ಯ ಗ್ರಾಮದ ನಿವಾಸಿ ಅನಸೂಯಮ್ಮ ಇಂದು ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಹಾರಿದ್ದಾಳೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಅನಸೂಯಮ್ಮಳನ್ನ ರಕ್ಷಿಸಿದ್ದಾರೆ. ಅದೃಷ್ಟವಶಾತ್ ಅನಸೂಯಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದ್ರೆ, ಕಲ್ಲಿನ‌ ಮೇಲೆ ಬಿದ್ದಿದ್ದರಿಂದ ಅನಸೂಯಮ್ಮ ಪಾದಕ್ಕೆ ಗಂಭೀರ ಗಾಯವಾಗಿದೆ.

ಪತಿ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ನೊಂದು ಅನಸೂಯಮ್ಮ ಸಂಕ್ರಾಂತ್ರಿ ಹಬ್ಬದ ದಿನವೇ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇತ್ತ ಕೆರೆಗೆ ಹಾರಿದವಳನ್ನು ಅಲ್ಲಿದ್ದವರು ಕೂಡಲೇ ರಕ್ಷಿಸಿದ್ದಾರೆ. ಅನಸೂಯಮ್ಮ ಕೆರೆಗೆ ಹಾರುವಾಗ ಕಲ್ಲಿನ‌ ಮೇಲೆ ಬಿದ್ದಿದ್ದಾರೆ. ಪರಿಣಾಮ ಬಲಗಾಲಿನ ಪಾದಕ್ಕೆ ಗಂಭೀರ ಗಾಯವಾಗಿದ್ದು, ಸದ್ಯ ಅನಸೂಯಮ್ಮಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Loading...
Unable to load recommendations.
Follow Us