ಸಂಕ್ರಾಂತಿ ಪ್ರಯುಕ್ತ ಎತ್ತಿನ ಬಂಡಿಗಳ ಓಟದ ಸ್ಪರ್ಧೆ, ಜನರನ್ನು ನೋಡಿ ಬಂಡಿ ಸಮೇತ ದಿಕ್ಕಾಪಾಲಾಗಿ ಓಡಿದ ಹಳ್ಳಿಕಾರ್ ಎತ್ತುಗಳು!
ಕೆಲವು ಎತ್ತುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಷ್ಟ ಇರಲಿಲ್ಲ, ಆದ್ರೂ ಪಟ್ಟುಬಿಡದ ರೈತರು... ಹರಸಾಹಸ ಪಟ್ಟು ಬಲವಂತವಾಗಿ ಎತ್ತುಗಳನ್ನು ಸ್ಪರ್ಧೆಯಲ್ಲಿ ಅಣಿಗೊಳಿಸಿದ್ದು ನೋಡುಗರಿಗೆ ರೋಮಾಂಚನಕಾರಿಯಾದ್ರೆ ಎತ್ತುಗಳ ಕಣ್ಣೀರ ಕೋಡಿಗೆ ಸಾಕ್ಷಿಯಾಯಿತು.
ಅದೊಂದು ಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಳ್ಳಿಕಾರ್ ಎತ್ತುಗಳ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಓಟದ ಸ್ಪರ್ಧೆಗೆ ಕಲರ್ ಫುಲ್ ಹಳ್ಳಿಕಾರ್ ಎತ್ತುಗಳು ಆಗಮಿಸಿದ್ವು. ಆದ್ರೆ ನೆರೆದಿದ್ದ ಜನಸ್ತೋಮ ನೋಡಿ ಕೆಲವು ಎತ್ತುಗಳು ಬೆದರಿ ಬಂಡಿ ಸಮೇತ ದಿಕ್ಕು ಪಾಲಾಗಿ ಓಡಿದ ರೋಮಾಚನಕಾರಿ ಘಟನೆಗಳು ನಡೆದವು. ಎತ್ತುಗಳಿಗೆ ಪರದಾಟವಾದ್ರೆ ಜನರಿಗೆ ತಮಾಸೆಯಾಗಿತ್ತು. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೊಡಿ!!
ಹಳ್ಳಿಕಾರ್ ಎತ್ತಿನ ಬಂಡಿಯ ಸ್ಪರ್ಧೆ ನೋಡಿ ಕೇಕೆ ಹಾಕಿ ಸಂಭ್ರಮ ಸಂತಸ ಒಂದೆಡೆಯಾದ್ರೆ ಮತ್ತೊಂದೆಡೆ ಪ್ರಾಣ ಭಯದಲ್ಲಿ ದಿಕ್ಕಾಪಾಲಾಗಿ ಓಡುತ್ತಿರುವ ಎತ್ತುಗಳು, ಇಂಥ ರೋಮಾಂಚನಕಾರಿ/ ಆತಂಕಕಾರಿ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹುದಗೂರು ಗ್ರಾಮದಲ್ಲಿ. ಗ್ರಾಮದ ರೈತಮಿತ್ರ ರೈತ ಬಳಗದಿಂದ ಹಳ್ಳಿಕಾರ್ ಎತ್ತಿನಬಂಡಿ ಓಟದ ಸ್ಪರ್ಧೆ ಆಯೋಜನೆಯಾಗಿತ್ತು. ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಜೊತೆಯ ಎತ್ತುಗಳು ಭಾಗವಹಿಸಿದ್ದವು. ಒಂದಕ್ಕಿಂತ ಇನ್ನೊಂದು ಜೋಡಿ ಕಲರ್ ಫುಲ್, ಪವರ್ ಫುಲ್ ಆಗಿದ್ದವು. ಉಳಿದಂತೆ ಹಳ್ಳಿಕಾರ್ ಎತ್ತುಗಳ ಓಟ ಹಾಗೂ ಬಂಡಿಗಳ ಓಟ ನೋಡುಗರ ಮನಸೊರೆಗೊಂಡಿತು.
’
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 30 ಸಾವಿರ ಹಾಗೂ ಟ್ರೋಫಿ, ಎರಡನೆಯ ಬಹುಮಾನವಾಗಿ 20 ಸಾವಿರ ಹಾಗೂ ಟ್ರೋಫಿ, ಮೂರನೆ ಬಹುಮಾನವಾಗಿ 10 ಸಾವಿರ ಹಾಗೂ ಟ್ರೋಫಿ, ನಾಲ್ಕನೆ ಬಹುಮಾನವಾಗಿ ಐದು ಸಾವಿರ ಹಾಗೂ ಟ್ರೋಫಿ ಘೋಷಣೆ ಮಾಡಲಾಯಿತು. ಮುನ್ನೂರು ಮೀಟರ್ ಉದ್ದದ ಟ್ರಾಕ್ ನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆಲ್ಲಲು ರೈತರು ತಮ್ಮ ತಮ್ಮ ಎತ್ತುಗಳನ್ನು ಹೊಡೆದು ಬಡಿದು ರೋಶಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಎತ್ತುಗಳಿಗೆ ಅದು ಸಂಕಷ್ಟವಾದ್ರೆ ರೈತರಿಗೆ ಸಂತಸಕ್ಕೆ ಕಾರಣವಾಯಿತು.
ಕೆಲವು ಎತ್ತುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಷ್ಟ ಇರಲಿಲ್ಲ, ಆದ್ರೂ ಪಟ್ಟುಬಿಡದ ರೈತರು… ಹರಸಾಹಸ ಪಟ್ಟು ಬಲವಂತವಾಗಿ ಎತ್ತುಗಳನ್ನು ಸ್ಪರ್ಧೆಯಲ್ಲಿ ಅಣಿಗೊಳಿಸಿದ್ದು ನೋಡುಗರಿಗೆ ರೋಮಾಂಚನಕಾರಿಯಾದ್ರೆ ಎತ್ತುಗಳ ಕಣ್ಣೀರ ಕೋಡಿಗೆ ಸಾಕ್ಷಿಯಾಯಿತು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ