ಚಿಕ್ಕಬಳ್ಳಾಪುರದಲ್ಲಿ ಜಲ್ಲಿಕ್ರಷರ್​ ಯಂತ್ರಕ್ಕೆ ಸಿಲುಕಿ ಕಾರ್ಮಿಕ ದಾರುಣ ಸಾವು

| Updated By: ರಮೇಶ್ ಬಿ. ಜವಳಗೇರಾ

Updated on: Jul 30, 2023 | 3:32 PM

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಬಳಿಯ ಸಂತೋಷ್ ಪಾಟೀಲ್ ಎಂಬುವರಿಗೆ ಸೇರಿದ ಜಯ್ ಕ್ರಷರ್​ನಲ್ಲಿ ಸಿಲುಕಿ ಕಾರ್ಮಿಕ ಧಾರುಣ ಅಂತ್ಯ ಕಂಡಿದ್ದಾನೆ. ಕಾರ್ತಿಕ್(20) ಮೃತ ರ್ದುದೈವಿ.

ಚಿಕ್ಕಬಳ್ಳಾಪುರದಲ್ಲಿ ಜಲ್ಲಿಕ್ರಷರ್​ ಯಂತ್ರಕ್ಕೆ ಸಿಲುಕಿ ಕಾರ್ಮಿಕ ದಾರುಣ ಸಾವು
ಕಾರ್ಮಿಕ ಸಾವು
Follow us on

ಚಿಕ್ಕಬಳ್ಳಾಪುರ, ಜು.30: ತಾಲೂಕಿನ ಪೆರೇಸಂದ್ರ ಬಳಿಯ ಸಂತೋಷ್ ಪಾಟೀಲ್ ಎಂಬುವರಿಗೆ ಸೇರಿದ ಜಯ್ ಕ್ರಷರ್​ನಲ್ಲಿ ಸಿಲುಕಿ ಕಾರ್ಮಿಕ ಧಾರುಣ ಅಂತ್ಯ ಕಂಡಿದ್ದಾನೆ. ಕಾರ್ತಿಕ್(20) ಮೃತ ರ್ದುದೈವಿ. ಇನ್ನು ಕ್ರಷರ್​​ ಮಾಲೀಕರ ನಿರ್ಲಕ್ಷ್ಯದಿಂದಲೇ ಕಾರ್ಮಿಕ(labour) ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದ್ದು, ಕೆಲಸ ಮಾಡುವಾಗ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳದ‌ ಕಾರಣ ಈ ದುರಂತ ಸಂಭವಿಸಿದೆ. ಈ ಕುರಿತು ಘಟನಾ ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈತನ ತೋಟದಲ್ಲಿ ಕಳ್ಳರ ಕೈ ಚಳಕ; 4 ಲಕ್ಷ ಮೌಲ್ಯದ ಕೃಷಿ‌ ಸಲಕರಣೆಗಳು ಕದ್ದು‌ ಪರಾರಿ

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ತಾಲ್ಲೂಕಿನ‌ ಎಲ್ ಮುತ್ತುಕದಹಳ್ಳಿ ಗ್ರಾಮದ ಸುಬ್ಬರಾಯಪ್ಪ ಎನ್ನುವವರ ತೋಟದಲ್ಲಿದ್ದ 4 ಲಕ್ಷ ಬೆಲೆ ಬಾಳುವ ಕೃಷಿ‌ ಸಲಕರಣೆಗಳನ್ನು ಕದ್ದು‌ ಪರಾರಿ ಖದೀಮರು ಪರಾರಿಯಾಗಿದ್ದಾರೆ. ಹೌದು ತೋಟದಲ್ಲಿ ಡ್ರಿಫ್ ಪೈಪ್ .ಸ್ಟಾಟರ್, ಕೇಬಲ್‌ ಸೇರಿ ಸುಮಾರು ನಾಲ್ಕೈದು ಲಕ್ಷ ಬೆಲೆ ಬಾಳುವ ಸಲಕರಣೆಗಳು ಕಳ್ಳತನವಾಗಿದೆ. ಇದರ ಪರಿಣಾಮ ತುಂಬಿದ‌ ಬೆಳೆಗೆ ನೀರು ಹಾಯಿಸಲು ಆಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

ಇದನ್ನೂ ಓದಿ:ಮೈಸೂರು: 8 ಮೂಟೆಯಷ್ಟು ಶುಂಠಿ ಕಟಾವು ಮಾಡಿ ಕಳ್ಳತನ

ಶಿವಮೊಗ್ಗದಲ್ಲಿ ಕುಡಿದ ಮತ್ತಿನಲ್ಲಿ ಸಂಬಂಧಿಕನಿಂದಲೇ ವ್ಯಕ್ತಿಯ ಕೊಲೆ

ಶಿವಮೊಗ್ಗ; ಕುಡಿದ ಮತ್ತಿನಲ್ಲಿ ವ್ಯಕ್ತಿಯನ್ನ ಕೊಲೆ ಮಾಡಿದ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿದೆ. ಜ್ಞಾನೇಶ್ವರ್ (45) ಕೊಲೆಯಾದ ದುರ್ದೈವಿ. ಸಂಬಂಧಿಕರ ಮನೆಗೆ ಬಂದಿದ್ದ ಜ್ಞಾನೇಶ್ವರ್ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಈ ಕುರಿತು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Sun, 30 July 23