ಬಾಲ ಬಿಚ್ಚಿದ್ರೆ ಕಟ್ ಮಾಡ್ತೇನೆ, ಬೇಕಾದ್ರೆ ಟ್ರೈ ಮಾಡುವುದಕ್ಕೆ ಹೇಳಿ: ಸುಧಾಕರ್ ಬೆಂಬಲಿಗರಿಗೆ ಪ್ರದೀಪ್ ಈಶ್ವರ್ ಸವಾಲ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಚಿವ ಸುಧಾಕರ್ ನಡುವಿನ ವಾಕ್ಸಮರ ಮುಂದುವರಿದಿದ್ದು, ಇದರ ಮಧ್ಯೆ ಸುಧಾಕರ್ ಬೆಂಗಬಲಿಗರಿಗ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ, (ಜುಲೈ 30): ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Elections 2023 ಮುಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದೂ 2 ತಿಂಗಳೂ ಆಯ್ತು. ಆದ್ರೆ, ಚಿಕ್ಕಬಳ್ಳಾಪುರದಲ್ಲಿ(Chikkaballapur) ಮಾತ್ರ ಶಾಸಕ ವರ್ಸಸ್ ಮಾಜಿ ಸಚಿವರ ನಡುವಿನ ವಾಕ್ಸಮರ ಮಾತ್ರ ನಿಂತಿಲ್ಲ. ಡಾ.ಕೆ.ಸುಧಾಕರ್ (Dr K Sudhakar) ಮತ್ತು ಶಾಸಕ ಪ್ರದೀಪ್ ಈಶ್ವರ್ (Pradeep Eshwar)ನಡುವಿನ ಸವಾಲಿನ ಸಮರ ಜೋರಾಗಿದ್ದು, ಇವತ್ತೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ಗುಡುಗಿದ್ದಾರೆ. ಇಂದು (ಜುಲೈ 30) ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗರು ಬಾಲ ಬಿಚ್ಚಿದ್ರೆ ಕಟ್ ಮಾಡುತ್ತೇನೆ. ಬೇಕಾದ್ರೆ ಟ್ರೈ ಮಾಡುವುದಕ್ಕೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು.
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಬೆಂಬಲಿಗರು ಬಾಲ ಬಿಚ್ಚಿದ್ರೆ ಕಟ್ ಮಾಡುತ್ತೇನೆ. ಬೇಕಾದ್ರೆ ಟ್ರೈ ಮಾಡುವುದಕ್ಕೆ ಹೇಳಿ ನೋಡೋಣ. ಮಾಜಿ ಸಚಿವ ಕೆ. ಸುಧಾಕರ್ ಗೆ ಶಾಸಕ ಪ್ರದೀಪ್ ಈಶ್ವರ್ ಮತ್ತೆ ಸವಾಲು. ನಾನು ದ್ವೇಷ ರಾಜಕಾರಣ, ಗೂಂಡಾಗಿರಿ ರಾಜಕಾರಣ ಮಾಡಲ್ಲ, ಆದ್ರೆ ಗೂಂಡಾಗಿರಿ ರಾಜಕಾರಣ ಮಾಡುವರನ್ನು ಬಿಡಲ್ಲ. ಕ್ಷೇತ್ರದಲ್ಲಿ ನನಗೆ ಸಿಕ್ಕ ಜನ ಬೆಂಬಲ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಡಾ.ಕೆ.ಸುಧಾಕರ್ ಸುಳ್ಳು ದೂರು ಕೊಡಿಸಿ ಗಲಭೆ ಸೃಷ್ಟಿಸುತ್ತಿದ್ದಾರೆ. ಐದು ವರ್ಷದಲ್ಲಿ ಚಿಕ್ಕಬಳ್ಳಾಪುರವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ. ಸುಧಾಕರ್ ರೀತಿಯಲ್ಲಿ ನಾನು ತಪ್ಪು ಮಾಡಲ್ಲ. ಪರ, ವಿರೋಧ ದೂರು ನೀಡಿದ್ದಾರೆ, ತನಿಖೆ ಆಗಿ ಸತ್ಯ ತಿಳಿಯಲಿ ಎಂದು ಸುಧಾಕರ್ ವಿರುದ್ಧ ಮತ್ತೆ ಶಾಸಕ ವಾಗ್ದಾಳಿ ನಡೆಸಿದರು.
ಬೇರೆ ಶಾಸಕರುಗಳ ರೀತಿ ನನಗೆ ರಾಜಕೀಯ ಅಭದ್ರತೆ ಇಲ್ಲ. ನಾನು ಶಾಸಕನಾಗಿದ್ದೆ ಲಾಟರಿ. ನಾನು ಯಾವುದೆ ರಾಜಕೀಯ ಗಿಮಿಕ್ ಮಾಡಲ್ಲ. ಮುಂದೆ ಯಾರಾದರೂ ಒಳ್ಳೆ ಕೆಲಸ ಮಾಡುತ್ತಾರೆ ಅಂದ್ರೆ ಅವರಿಗೆ ಓಟು ಹಾಕಿ ಗೆಲ್ಲಿಸಿ. ನಾನು ಒಳ್ಳೆ ಕೆಲಸ ಮಾಡಿದ್ರೆ ಮುಂದೆ ನನ್ನನ್ನು ಗೆಲ್ಲಿಸಿ. ಬೇರೆಯವರ ರೀತಿ ನಾನು 20-30 ವರ್ಷ ಕಡಿದು ಕಟ್ಟೆ ಹಾಕುತ್ತೇನೆ ಅಂತ ಹೇಳಲ್ಲ. ಕ್ಷೇತ್ರದಲ್ಲಿ ತಪ್ಪು ಯಾರು ಮಾಡಿದರೂ ತಪ್ಪೆ. ಸುಧಾಕರ್ ರೀತಿಯಲ್ಲಿ ನಾನು ತಪ್ಪು ಮಾಡಲ್ಲ. ಪರ ವಿರೋಧ ದೂರು ನೀಡಿದ್ದಾರೆ. ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿ ಎಂದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ