ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ನೀಡುತ್ತೇನೆ ಎಂದಿದ್ದು ನಿಜ: ಸತ್ಯ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ

ಮೊನ್ನೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿರುವುದು ನಿಜ ಎಂದು ಶಾಸಕ ಬಿಆರ್ ಪಾಟೀಲ್ ಸತ್ಯ ಒಪ್ಪಿಕೊಂಡಿದ್ದಾರೆ.

ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ನೀಡುತ್ತೇನೆ ಎಂದಿದ್ದು ನಿಜ: ಸತ್ಯ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ
ಬಿ.ಆರ್.ಪಾಟೀಲ್‌
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on: Jul 30, 2023 | 7:00 PM

ಕಲಬುರಗಿ, (ಜುಲೈ 30): ಮೊನ್ನೇ ಅಷ್ಟೇ ನಡೆದಿದ್ದ ಕಾಂಗ್ರೆಸ್ (Congress)  ಶಾಸಕಾಂಗ ಸಭೆಯಲ್ಲಿ ಆಳಂದ ಶಾಸಕ ಬಿಆರ್ ಪಾಟೀಲ್ (BR Patil)ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದು ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಟಿವಿ9 ಮಾತ್ರ ರಾಜೀನಾಮೆ ಪ್ರಸ್ತಾಪಿಸಿರುವುದನ್ನು ಪ್ರಸಾರ ಮಾಡಿತ್ತು. ಆದ್ರೆ, ಇದನ್ನು ಕೆಲವರು ಸುಳ್ಳು ಎಂದು ಅಲ್ಲಗೆಳೆದಿದ್ದರೆ, ಇನ್ನೂ ಕೆಲವರು ಈ ಬಗ್ಗೆ ಏನು ಹೇಳಿದ ಮೌನಕ್ಕೆ ಜಾರಿದ್ದರು. ಆದ್ರೆ, ಇದೀಗ ಅದು ನಿಜ ಎಂದು ಸಾಬೀತಾಗಿದೆ. ಹೌದು.. ರಾಜೀನಾಮೆ ಪ್ರಸ್ತಾಪ ಮಾಡಿರುವುದು ನಿಜ ಎಂದು ಸ್ವತಃ ಶಾಸಕ ಬಿಆರ್ ಪಾಟೀಲ್ ಸತ್ಯ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ವಿಚಾರ ಎತ್ತಿದ್ರಾ ಶಾಸಕರು? ಇಲ್ಲಿದೆ ಸಭೆಯ ಇನ್​ಸೈಡ್​ ಮಾಹಿತಿ

ಈ ಬಗ್ಗೆ ಇಂದು ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ (ಜುಲೈ 30) ಮಾತಾಡಿದ ಬಿ. ಆರ್ ಪಾಟೀಲ್, ನಾನು ನನ್ನ ಆತ್ಮಗೌರವಕ್ಕೆ ಧಕ್ಕೆ ಬಂದ್ರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದು ಸತ್ಯ. ಆದ್ರೆ ಯಾವ ಕಾರಣಕ್ಕೆ ಎನ್ನುವುದು ಸೇರಿದಂತೆ ಎಲ್ಲಾ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ನಿಮ್ಮ ಟಿವಿ9 ಮಾಡಿದ್ದ ಸುದ್ದಿ ನಿಖರವಾಗಿದೆ ಮತ್ತೊಮೆ ಸಾಬೀತಾಗಿದೆ.

ಇನ್ನು ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ನಾನು ಕ್ಷಮೆ ಕೇಳಿಲ್ಲ, ಕ್ಷಮೆ ಕೇಳುವಂತಹ ತಪ್ಪು ಕೂಡಾ ನಾನು ಮಾಡಿಲ್ಲ, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೇಳುವದು ನಮ್ಮ ಹಕ್ಕು. ಶಾಸಕಾಂಗ ಪಕ್ಷದ ಸಬೆಯಲ್ಲಿ ನಮ್ಮ ಎಲ್ಲಾ ವಿಚಾರ ಹೇಳಿದ್ದೇವೆ. ಅದಕ್ಕೆ ಪರಿಹಾರ ಕೂಡಾ ಸಿಕ್ಕಿದೆ. ಕೆಲ ಸಚಿವರ ವರ್ತನೆ ಸರಿಯಿರಲಿಲ್ಲ. ಹೀಗಾಗಿ ಅದನ್ನು ಸರಿಪಡಿಸಿಕೊಳ್ಳಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು. ಆದ್ರೆ ಸಚಿವರಿಗೆ ಸಿಎಂ ಏನು ಹೇಳಿದ್ದಾರೆ ಎನ್ನುವುದು ಅವರಿಗೆ ಗೊತ್ತು. ಆದ್ರೆ ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ರಾಜೀನಾಮೆ ವಿಚಾರ ಎತ್ತಿದ್ದ ಶಾಸಕರು

ಬಹಿರಂಗವಾಗಿ ಪತ್ರ ಬರೆದಿದ್ದಕ್ಕೆ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡು, ನನಗೆ ವೈಯಕ್ತಿಕವಾಗಿ ಬಂದು ಭೇಟಿ ಮಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಿತ್ತು. ಪತ್ರ ಬರೆಯುವ ಅವಶ್ಯಕತೆ ಏನಿತ್ತು ಎಂದು ಸಭೆಯಲ್ಲಿ ಪ್ರಶ್ನಿಸಿದ್ದರು. ಬಳಿಕ ಸಿಎಂ ಮಾತಿನಿಂದ ಬೇಸರಗೊಂಡ ಬಿ ಆರ್ ಪಾಟೀಲ್, ಆಯ್ತು ಬಿಡಿ ನಾನು ರಾಜೀನಾಮೆ ಕೊಟ್ಟು ಬಿಡಡುತ್ತೇನೆ. ನನಗೆ ಏನು ಹೇಳುವುದಿಲ್ಲ. ನನ್ನನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ. ನನ್ನ ಮಾತಿಗೆ ನಾನು ಬದ್ದ. ನಾನು ಸಂಪೂರ್ಣವಾಗಿ ಪತ್ರವನ್ನ ನೋಡಿ ಅರ್ಥೈಸಿಕೊಂಡು ಸಹಿ ಹಾಕಿದ್ದೇನೆ ಎಂದಿದ್ದರು. ಇನ್ನು ಬಿ.ಆರ್.ಪಾಟೀಲ್‌ಗೆ ಸಾಥ್ ನೀಡಿದ್ದ ಇಂಡಿ ಶಾಸಕ‌ ಯಶವಂತ ರಾಯಗೌಡ, ಬಿ.ಆರ್. ಪಾಟೀಲ್ ಅವರು ಹೇಳಿರುವುದರಲ್ಲಿ ಸತ್ಯ ಇದೆ. ಸಚಿವರ ಕಚೇರಿ ಮೊದಲು ಸರಿ ಇರಲಿ. ಮೊದಲು ಗೌರವ ಕೊಡುವುದನ್ನ ಕಲಿಯಲಿ. ನಾವ್ಯಾರು ಸುಮ್ಮನೆ ಶಾಸಕರಾಗಿಲ್ಲ. ಸರಿಯಾಗಿ ನೋಡಿಯೇ ಪತ್ರಕ್ಕೆ ನಾನೂ ಸಹಿ ಹಾಕಿದ್ದೇನೆ. ನಮಗೆ ಸ್ವಾಭಿಮಾನ ಗೌರವ ಇಲ್ಲವಾದಲ್ಲಿ ಶಾಸಕ ಸ್ಥಾನವೇ ಬೇಡ. ನಾವು ರಾಜೀನಾಮೆ ಕೊಡಲು ಸಿದ್ಧ ಎಂದು ಅತೃಪ್ತಿ ಹೊರಹಾಕಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ