ಚಿಕ್ಕಬಳ್ಳಾಪುರ: ಲಂಚ ಪಡೆಯುವಾಗ ಎಸಿಬಿ ದಾಳಿ; ಬೆಸ್ಕಾಂ ಅಧಿಕಾರಿಯ ಬಂಧನ
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಬೆಸ್ಕಾಂ ಉಪ ವಿಭಾಗದ ಮೇಲೆ ಚಿಕ್ಕಬಳ್ಳಾಪುರ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಸಹಾಯಕ ಇಂಜಿನಿಯರ್ ಶ್ರೀನಿವಾಸ ಅವರನ್ನು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಬೆಸ್ಕಾಂ ಉಪ ವಿಭಾಗದ ಮೇಲೆ ಚಿಕ್ಕಬಳ್ಳಾಪುರ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಸಹಾಯಕ ಇಂಜಿನಿಯರ್ ಶ್ರೀನಿವಾಸ ಅವರನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಅಂಕತಟ್ಟಿ ಗ್ರಾಮದ ರೈತನ ಟ್ರಾಸ್ ಪಾರ್ಮರ್ ಸುಟ್ಟಿರುತ್ತೆ, ಸರಿ ಮಾಡಲು ಅರ್ಜಿ ನೀಡಿದಾಗ ಬೆಸ್ಕಾಂ ಎಇ ಶ್ರೀನಿವಾಸ್ ಲಂಚ ಕೇಳಿರುತ್ತಾರೆ.
ರೈತ ಅಕ್ರಮವಾಗಿ ಕೃಷಿ ಹೋಡಕ್ಕೆ ಸಂಪರ್ಕ ಪಡೆದಿದ್ದೀರೆಂದು ಸುಮಾರು 89 ಸಾವಿರ ರೂಪಾಯಿಗಳು ದಂಡ ಹಾಕಿ ಅಂಕತಟ್ಟಿ ಗ್ರಾಮದ ರೈತನಿಗೆ ಎ ಇ ಶ್ರೀನಿವಾಸ್ ನೋಟೀಸ್ ನೀಡುತ್ತಾರೆ. ರೈತ ದಂಡ ಪ್ರಶ್ನಿಸಿದ್ದಕ್ಕೆ ಸುಟ್ಟಿರುವ ಟಾನ್ಸ್ ಪಾರ್ಮರ್ ರಿಪೇರಿ ಮಾಡಿಸಿ ಕೊಡುತ್ತೇನೆ ಜೊತೆಗೆ ಹಾಕಿರುವ ದಂಡವನ್ನು ವಜಾ ಮಾಡುತ್ತೇನೆ ಅಂತ 30 ಸಾವಿರ ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಅದ್ರಲ್ಲಿ 25 ಸಾವಿರಕ್ಕೆ ತೀರ್ಮಾನಿಸಿ 5 ಸಾವಿರ ರೂಪಾಯಿಗಳು ಅಡ್ವಾನ್ಸ್ ಪಡೆದಿದ್ದರು.
ಉಳಿದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಬೆಸ್ಕಾಂ ಇಲಾಖೆಯ ಎ ಇ ಶ್ರೀನಿವಾಸ್ನನ್ನು ಎ.ಸಿ.ಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಮಾಡಿದ್ದಾರೆ.
ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ನೀಡಲು ರೈತರ ಆಗ್ರಹ
ಚಿತ್ರದುರ್ಗ: ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ನೀಡಲು ರೈತರ ಆಗ್ರಹಿಸುತ್ತಿದ್ದು, ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ರೈತರು ಪ್ರತಿಭಟನೆ ಮಾಡಿದ್ದಾರೆ. ರೈತಪರ ಸಂಘಟನೆಗಳ ನೇತೃತ್ವದಲ್ಲಿ ಕೃಷಿ ಇಲಾಖೆ ಕಚೇರಿಯಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ.
ಕೃಷಿ ಅಧಿಕಾರಿಗಳು ಬೆಳೆ ವಿಮೆ ವಂಚನೆಯಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ವಿಮೆ ಕಂಪನಿಗಳ ಜೊತೆ ಸೇರಿ ಬೆಳೆ ವಿಮೆ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಅವರಿಗೆ ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು, ಕೃಷಿ ಅಧಿಕಾರಿಗಳ ಜತೆ ರೈತರ ವಾಗ್ವಾದ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Published On - 9:24 pm, Wed, 27 July 22