ಚಿಕ್ಕಬಳ್ಳಾಪುರ: ನಕಲಿ ಖಾತೆ ಸೃಷ್ಟಿಸಿ ಇಡೀ ಗ್ರಾಮವೇ ಮಾರಾಟ, ಪಂಚಾಯಿತಿ ಬಿಲ್ ಕಲೆಕ್ಟರ್​ ಸಸ್ಪೆಂಡ್

| Updated By: ಆಯೇಷಾ ಬಾನು

Updated on: Nov 28, 2023 | 10:54 AM

ಬಾರ್ಲಹಳ್ಳಿ ಗ್ರಾಮವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಅವಲಗುರ್ಕಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಕಾಶ್ ಅಮಾನತು ಮಾಡಲಾಗಿದೆ. ಪ್ರಕಾಶ್ ಅವರು ತನ್ನ ಪತ್ನಿ ಹೆಸರಿಗೆ ದಾಖಲೆ ಸೃಷ್ಟಿಸಿ ಸೈಟ್​ ಮಾರಾಟ ಮಾಡಿದ್ದರು. ಸದ್ಯ ಗ್ರಾ.ಪಂ ಅಧ್ಯಕ್ಷೆ ನಾಗಮಣಿ ಅನುಮತಿ ಮೇರೆಗೆ ಪಿಡಿಒ ಅರುಣ ಗೋಪಿ ಆದೇಶ ಹೊರಡಿಸಿದ್ದಾರೆ.

ಚಿಕ್ಕಬಳ್ಳಾಪುರ: ನಕಲಿ ಖಾತೆ ಸೃಷ್ಟಿಸಿ ಇಡೀ ಗ್ರಾಮವೇ ಮಾರಾಟ, ಪಂಚಾಯಿತಿ ಬಿಲ್ ಕಲೆಕ್ಟರ್​ ಸಸ್ಪೆಂಡ್
ತಾ.ಪಂ ಇಒ ಜಿ.ಆರ್.ಮಂಜುನಾಥ್
Follow us on

ಚಿಕ್ಕಬಳ್ಳಾಪುರ, ನ.28: ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾ.ಪಂ ವ್ಯಾಪ್ತಿಯ ಬಾರ್ಲಹಳ್ಳಿಯಲ್ಲಿ ನಕಲಿ ಖಾತೆ ಸೃಷ್ಟಿಸಿ ನಿವೇಶನಗಳ ಮಾರಾಟ (Land Sale) ಮಾಡಿದ್ದ ಕೇಸ್​ಗೆ ಸಂಬಂಧಿಸಿ ಮಾರಾಟ ಮಾಡಿದ್ದ 55 ನಿವೇಶನಗಳ ಖಾತೆ ರದ್ದು ಮಾಡಿ ತಾ.ಪಂ ಇಒ ಜಿ.ಆರ್.ಮಂಜುನಾಥ್​ ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ಜನವಸತಿ ಇಲ್ಲದ ಬಾರ್ಲಹಳ್ಳಿ ಗ್ರಾಮವನ್ನೆ ಮಾರಾಟ ಮಾಡಿದ್ದರು. ಗ್ರಾಮದ ಸ್ವತ್ತಿಗೆ ಅಕ್ರಮವಾಗಿ ಖಾತೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು. ಸದ್ಯ 55 ನಿವೇಶನಗಳ ಖಾತೆ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.

ಅವಲಗುರ್ಕಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಕಾಶ್ ಅಮಾನತು

ಇನ್ನು ಬಾರ್ಲಹಳ್ಳಿ ಗ್ರಾಮವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿ PDO ಎಂ.ಸಿ. ವೆಂಕಟೇಶ ಅವರನ್ನು ಅಮಾನತು ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಪ್ರಕಾಶ ಜೆ. ನಿಟ್ಟಾಲಿ ಆದೇಶ ಹೊರಡಿಸಿದ್ದರು. ಈಗ ಮತ್ತೆ ಅವಲಗುರ್ಕಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಕಾಶ್ ಅಮಾನತು ಮಾಡಲಾಗಿದೆ. ಪ್ರಕಾಶ್ ಅವರು ತನ್ನ ಪತ್ನಿ ಹೆಸರಿಗೆ ದಾಖಲೆ ಸೃಷ್ಟಿಸಿ ಸೈಟ್​ ಮಾರಾಟ ಮಾಡಿದ್ದರು. ಸದ್ಯ ಗ್ರಾ.ಪಂ ಅಧ್ಯಕ್ಷೆ ನಾಗಮಣಿ ಅನುಮತಿ ಮೇರೆಗೆ ಪಿಡಿಒ ಅರುಣ ಗೋಪಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಗ್ರಾಮವನ್ನೇ ಮಾರಿದ ಗ್ರಾಮ ಪಂಚಾಯ್ತಿ PDO ವೆಂಕಟೇಶ ಅಮಾನತು-ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಆದೇಶ

ಘಟನೆ ಹಿನ್ನೆಲೆ

ಗ್ರಾಮ ಪಂಚಾಯ್ತಿಯೊಂದರ ವ್ಯಾಪ್ತಿಗೆ ಬರುವ ಹಳೇ ಗ್ರಾಮವನ್ನೇ ರಕ್ಷಿಸಿ ಭದ್ರಪಡಿಸಬೇಕಾಗಿದ್ದ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು, ಅಧಿಕಾರಿಗಳು, ಆ ಗ್ರಾಮವೊಂದರಲ್ಲಿ ಜನವಸತಿ ಇಲ್ಲವೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನಗಳನ್ನಾಗಿ ವಿಂಗಡಿಸಿ, ನನಗೊಂದು, ನನ್ನ ಹೆಂಡತಿ ಮಕ್ಕಳಿಗೂ ಒಂದೊಂದು ಎನ್ನುವ ರೀತಿಯಲ್ಲಿ ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಂಡು ಮಾರಾಟ ಮಾಡಿದ್ದರು. ಜೊತೆಗೆ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳ ರೂಪದಲ್ಲಿ ಮಾರಾಟ ಮಾಡಲಾಗಿತ್ತು. ತಮಿಳುನಾಡು ಮೂಲದ ಈಶಾ ಲೈಪ್ ಪ್ರೈವೆಟ್ ಲಿಮಿಟೆಡ್ ನ ಪ್ರತಿನಿಧಿ ಪ್ರಭಾಕರ್ ಗೋಪಾಲನ್ ಗೆ ಮಾರಟ ಮಾಡಲಾಗಿತ್ತು. 42 ನಿವೇಶನಗಳ ರೂಪದಲ್ಲಿ ಪ್ರಭಾಕರ್ ಗೋಪಾಲನ್ ಗೆ ಮಾರಾಟ ಮಾಡಲಾಗಿತ್ತು. ತಲಾ ನಿವೇಶನಗಳಿಗೆ 6 ಲಕ್ಷ ರೂಪಾಯಿ ಪಡೆದು ಮಾರಾಟ ಮಾಡಲಾಗಿತ್ತು. ತನಿಖಾ ತಂಡದಿಂದ ಅಕ್ರಮ, ಅವ್ಯವಹಾರ, ಕರ್ತವ್ಯಲೋಪ, ವ್ಯವಸ್ಥಿತ ಷಡಂತ್ರ್ಯ ಬಯಲಾಗಿದ್ದು ಪ್ರಕರಣದಲ್ಲಿ ಪಿ.ಡಿ.ಓ ವೆಂಕಟೇಶ, ಬಿಲ್ ಕಲಡಕ್ಟರ್ ಪ್ರಕಾಶ ಅಮಾನತು ಆಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ