ಗ್ರಾಮವನ್ನೇ ಮಾರಿದ ಗ್ರಾಮ ಪಂಚಾಯ್ತಿ PDO ವೆಂಕಟೇಶ ಅಮಾನತು-ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಆದೇಶ

ಬಾರ್ಲಹಳ್ಳಿ ಗ್ರಾಮವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿ PDO ಎಂ.ಸಿ. ವೆಂಕಟೇಶ ಅವರನ್ನು ಅಮಾನತು ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಪ್ರಕಾಶ ಜೆ. ನಿಟ್ಟಾಲಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಕುರಿತು ಟಿವಿ9 ಕನ್ನಡ ಡಿಜಿಟಲ್ ನಿನ್ನೆ ಸೋಮವಾರ ಸವಿಸ್ತಾರ ವರದಿ ಪ್ರಕಟಿಸಿತ್ತು.

ಗ್ರಾಮವನ್ನೇ ಮಾರಿದ ಗ್ರಾಮ ಪಂಚಾಯ್ತಿ PDO ವೆಂಕಟೇಶ ಅಮಾನತು-ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಆದೇಶ
| Edited By: ಸಾಧು ಶ್ರೀನಾಥ್​

Updated on:Nov 21, 2023 | 5:10 PM

ಚಿಕ್ಕಬಳ್ಳಾಪುರ, ನವೆಂಬರ್ 21: ಬಾರ್ಲಹಳ್ಳಿ ಗ್ರಾಮವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿ PDO ಎಂ.ಸಿ. ವೆಂಕಟೇಶ ಅವರನ್ನು ಅಮಾನತು ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಪ್ರಕಾಶ ಜೆ. ನಿಟ್ಟಾಲಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಕುರಿತು ಟಿವಿ9 ಕನ್ನಡ ಡಿಜಿಟಲ್ ನಿನ್ನೆ ಸೋಮವಾರ ಸವಿಸ್ತಾರ ವರದಿ ಪ್ರಕಟಿಸಿತ್ತು.

ಅಮಾನತುಗೊಂಡ ಅಧಿಕಾರಿ ಎಂ.ಸಿ. ವೆಂಕಟೇಶ ಅವಲಗುರ್ಕಿ ಗ್ರಾಮ ಪಂಚಾಯತಿ ಪಿ.ಡಿ.ಓ. ಆಗಿದ್ದರು. ಪ್ರಸ್ತುತ ವೆಂಕಟೇಶ, ಹಾರೋಬಂಡೆ ಗ್ರಾಮ ಪಂಚಾಯತಿ ಪಿಡಿಓ ಆಗಿ ವರ್ಗಾವಣೆ ಆಗಿದ್ದರು. ಅವಲಗುರ್ಕಿ PDO ಆಗಿದ್ದಾಗ ಬಾರ್ಲಹಳ್ಳಿ ಗ್ರಾಮವನ್ನೆ ಇವರು ಮಾರಾಟ ಮಾಡಿದ್ದರು. ಗ್ರಾಮ ಪಂಚಾಯತಿ ಜನಪ್ರತಿನಿದಿಗಳ ಜೊತೆ ಶಾಮೀಲು ಆಗಿ ಅಕ್ರಮ ಕೆಲಸ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು CEO ಪ್ರಕಾಶ ಜೆ. ನಿಟ್ಟಾಲಿ ಟಿವಿ9 ಗೆ ತಿಳಿಸಿದ್ದಾರೆ.

Real Estate ಹಾವಳಿ: ಗ್ರಾಮವನ್ನೇ ಮಾರಿದ ಗ್ರಾಮ ಪಂಚಾಯ್ತಿ, ಗ್ರಾಮ ರಕ್ಷಿಸಬೇಕಾದವರೇ ಭಕ್ಷಿಸಿದ ಕಥೆ, ಎಲ್ಲಿಯ ಉಪಟಳ ಇದು?

ಚಿಕ್ಕಬಳ್ಳಾಪುರ, ನವೆಂಬರ್ 20: ಗ್ರಾಮ ಪಂಚಾಯ್ತಿಯೊಂದರ (Gram Panchayat) ವ್ಯಾಪ್ತಿಗೆ ಬರುವ ಹಳೇ ಗ್ರಾಮವನ್ನೇ ರಕ್ಷಿಸಿ ಭದ್ರಪಡಿಸಬೇಕಾಗಿದ್ದ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು, ಅಧಿಕಾರಿಗಳು, ಆ ಗ್ರಾಮವೊಂದರಲ್ಲಿ ಜನವಸತಿ ಇಲ್ಲವೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನಗಳನ್ನಾಗಿ ವಿಂಗಡಿಸಿ, ನನಗೊಂದು, ನನ್ನ ಹೆಂಡತಿ ಮಕ್ಕಳಿಗೂ ಒಂದೊಂದು ಎನ್ನುವ ರೀತಿಯಲ್ಲಿ ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಂಡು ಮಾರಾಟ ಮಾಡಿರುವ ಪ್ರಕರಣ ವರದಿಯಾಗಿದೆ.

ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ (Avalagurki Gram Panchayat) ಮಜರಾ ಬಾರ್ಲಹಳ್ಳಿ ಎನ್ನುವ ಗ್ರಾಮವೊಂದಿದೆ. ಆ ಗ್ರಾಮದಲ್ಲಿ ಪ್ರಸ್ತುತ ಜನವಸತಿ ಇಲ್ಲ. ಆದರೂ ಕಂದಾಯ ಇಲಾಖೆ, ಪಂಚಾಯ್ತಿಯ ದಾಖಲೆಗಳಲ್ಲಿ ಆ ಗ್ರಾಮವಿದೆ. ಆ ಗ್ರಾಮದ ಹೆಸರಿನಲ್ಲಿ ಸುಮಾರು 3-4 ಎಕರೆ ಜಮೀನು ಇದೆ. ಅಲ್ಲಿದ್ದ ಪಾಳುಬಿದ್ದ ಪಾಯ, ಕಟ್ಟಡಗಳನ್ನು ಸಮತಟ್ಟು ಮಾಡಲಾಗಿದೆ. ನಂತರ ಅದೇ ಗ್ರಾಮದ, ಅದೇ ಜಮೀನಿನ ಮೇಲೆ ಕಣ್ಣು ಹಾಕಿ ರಿಯಲ್ ಎಸ್ಟೇಟ್ (Real Estate) ಮಾಡಲಾಗಿದೆ.

Published On - 4:22 pm, Tue, 21 November 23

Follow us
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ