AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಬಗೆಬಗೆಯ ಮೀನುಗಳನ್ನು, ಮುಟ್ಟಿ ಆನಂದಿಸಿದ ಡಿಕೆ ಶಿವಕುಮಾರ್

ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಬಗೆಬಗೆಯ ಮೀನುಗಳನ್ನು, ಮುಟ್ಟಿ ಆನಂದಿಸಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Nov 21, 2023 | 5:32 PM

Share

ತಿಯೊಂದು ಬಗೆಯ ಮೀನಿನ ಹೆಸರು ಮತ್ತು ಅದರ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಶಿವಕುಮಾರ್ ಮಾಡಿದರು. ಒಂದು ಏಡಿಯನ್ನು ಕೈಯಲ್ಲಿ ಹಿಡಿದು ನೋಡಿದ ಬಳಿಕ ಮೀನೊಂದರ ಹೊಟ್ಟೆಭಾಗವನ್ನು ಒತ್ತಿದರು. ಅದಾದ ಮೇಲೆ ಭಾರಿ ಗಾತ್ರದ ಮೀನೊಂದನ್ನು ಎತ್ತಿ ಮಾಧ್ಯಮದ ಕೆಮೆರಾಗಳಿಗೆ ಪೋಸ್ ನೀಡಿದರು.

ಬೆಂಗಳೂರು: ವಿಧಾನ ಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ವಿಶ್ವ ಮೀನುಗಾರಿಕೆ ದಿನ (World Fisheries Day) ಅಂಗವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಮತ್ತು ಮೀನಗಾರಿಕಾ ಸಚಿವ ಮಂಕಾಳೆ ವೈದ್ಯ (Mankala Vaidya) ಭಾಗವಹಿಸಿದ್ದರು. ನಂತರ ವಿಧಾನ ಸೌಧ ಆವರಣದಲ್ಲಿ ಮೊಗವೀರ ಸಮುದಾಯದ ಸದಸ್ಯರಿಗೆ ಪರಿಸರ ಸ್ನೇಹಿ ಮತ್ಸ್ಯವಾಹಿನಿ ಹೆಸರಿನ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವಕುಮಾರ ಇದೇ ಅವರಣದಲ್ಲಿ ಹಾಕಲಾಗಿದ್ದ ಮೀನುಗಳ ಸ್ಟಾಲ್ ಗಳಲ್ಲಿನ ಬಗೆಬಗೆಯ ಮೀನುಗಳನ್ನು ನೋಡಿ ಆನಂದಿಸಿದರು. ಪ್ರತಿಯೊಂದು ಬಗೆಯ ಮೀನಿನ ಹೆಸರು ಮತ್ತು ಅದರ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಶಿವಕುಮಾರ್ ಮಾಡಿದರು. ಒಂದು ಏಡಿಯನ್ನು ಕೈಯಲ್ಲಿ ಹಿಡಿದು ನೋಡಿದ ಬಳಿಕ ಮೀನೊಂದರ ಹೊಟ್ಟೆಭಾಗವನ್ನು ಒತ್ತಿದರು. ಅದಾದ ಮೇಲೆ ಭಾರಿ ಗಾತ್ರದ ಮೀನೊಂದನ್ನು ಎತ್ತಿ ಮಾಧ್ಯಮದ ಕೆಮೆರಾಗಳಿಗೆ ಪೋಸ್ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.