20 ಹಸಿಮೆಣಸು ತಿನ್ನಲು ಪಣತೊಟ್ಟ ತನಿಷಾ, ವರ್ತೂರು ಸಂತೋಷ್; ಹೊಟ್ಟೆಯಲ್ಲಿ ಬೆಂಕಿ
ವರ್ತೂರು ಸಂತೋಷ್ ಹಾಗೂ ತನಿಷಾಗೆ ತಲಾ 20 ಹಸಿಮೆಣಸು ತಿನ್ನಬೇಕು ಎನ್ನುವ ಚಾಲೆಂಜ್ ನೀಡಲಾಗಿದೆ. ಈ ಚಾಲೆಂಜ್ನ ಇವರು ಸ್ವೀಕರಿಸಿದ್ದಾರೆ.
ಬಿಗ್ ಬಾಸ್ (Bigg Boss) ಕಂಟೆಸ್ಟಂಟ್ಗಳಿಗೆ ಸ್ಪರ್ಧೆ ಕಠಿಣ ಆಗುತ್ತಲೇ ಇದೆ. ಹೊಸ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಈ ವಾರ ಎರಡು ತಂಡ ಮಾಡಲಾಗಿದೆ. ಎದುರಾಳಿ ತಂಡಕ್ಕೆ ಕಠಿಣ ಟಾಸ್ಕ್ ನೀಡಬೇಕು. ಅಂತೆಯೇ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರ ತಲೆ ಕೂದಲನ್ನು ಬೋಳಿಸಲಾಗಿದೆ. ಈಗ ವರ್ತೂರು ಸಂತೋಷ್ ಹಾಗೂ ತನಿಷಾಗೆ ತಲಾ 20 ಹಸಿಮೆಣಸು ತಿನ್ನಬೇಕು ಎನ್ನುವ ಚಾಲೆಂಜ್ ನೀಡಲಾಗಿದೆ. ಈ ಚಾಲೆಂಜ್ನ ಇವರು ಸ್ವೀಕರಿಸಿದ್ದಾರೆ. ಹಸಿಮೆಣಸು ತಿನ್ನುವಾಗ ಕಣ್ಣಲ್ಲಿ ನೀರು ಬಂದಿದೆ. ‘ಇವರ ಹೊಟ್ಟೆಯಲ್ಲಿ ಬೆಂಕಿ ಬಿದ್ದಿರಬಹುದು’ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ 24 ಗಂಟೆ ಲೈವ್ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Tue, 21 November 23
Latest Videos