ಜನವರಿಯಿಂದ ಆಗಸ್ಟ್ ತಿಂಗಳಿನವರೆಗೂ ಆ ಪ್ರದೇಶದಲ್ಲಿ ಕಣ್ಣುಹಾಯಿಸಿದಷ್ಟೂ ವಿದೇಶಿ ಅತಿಥಿಗಳದ್ದು ಕಲರ್ಫುಲ್ ಕಲರವ. ಸಂತಾನೊತ್ಪತ್ತಿಗಾಗಿ ಅಂತಾನೇ ದೂರದ ವಿದೇಶಗಳಿಂದ ಬರುವ ಈ ಅತಿಥಿಗಳು…(Bird migration and honeymoon) ಆಗಸ್ಟ್ ತಿಂಗಳು ಬರುತ್ತಿದ್ದಂತೆ ಆ ಜಾಗದಿಂದ ಯಾರಿಗೂ ಹೇಳದೆ-ಕೇಳದೆ ಕುಟುಂಬ ಸಮೇತರಾಗಿ ಮಾಯವಾಗಿಬಿಡುತ್ತಾರೆ! ಅವರು ಅಲ್ಲಿ ಇರುವವರೆಗೂ ಆ ಗ್ರಾಮದ ಜನ ಅವರಿಗೆ ವಿಶೇಷ ಆಶ್ರಯ ರಕ್ಷಣೆ ನೀಡಿ ಸಂತೋಷದಿಂದ ಬೀಳ್ಕೊಡುತ್ತಾರೆ. ಅಷ್ಟಕ್ಕೂ ಆ ವಿಶೇಷ ಅತಿಥಿಗಳು ಯಾರು ಅಂತೀರಾ? ಈ ಸ್ಟೋರಿ ನೋಡಿ…!
ಇದು ಆಂದ್ರ ಕರ್ನಾಟಕ ಗಡಿನಾಡು ವೀರಾಪುರ ಗ್ರಾಮ. ಚಿಕ್ಕಬಳ್ಳಾಫುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಿಂದ ಕೇವಲ 10 ಕಿಲೋ ಮೀಟರ್ ದೂರವಿರುವ ಈ ಗ್ರಾಮಕ್ಕೆ (veerapuram bagepalli) ವಿದೇಶಿ ಮೂಲದ ಸೈಬೇರಿಯನ್ ಪಕ್ಷಿಗಳು ಅನ್ನೊ ವಿಶೇಷ ಅತಿಥಿಗಳು ಬರುತ್ತವೆ. ವಿದೇಶಗಳಿಂದ ಬರುವ ಪಕ್ಷಿಗಳು ಸಾಮಾನ್ಯವಾಗಿ ಇಲ್ಲಿಗೆ ಬಂದ ಮೇಲೆ, ಇಲ್ಲಿಯ ಗಿಡ ಮರಗಳ ಮೇಲೆ ಮೊಟ್ಟೆಯನ್ನು ಇಡುತ್ತವೆ.
ಆ ಮೇಲೆ ಮರಿಗಳನ್ನು ಮಾಡಿಕೊಂಡು ಅವು ಚೆನ್ನಾಗಿ ಹಾರಾಡುವಂತೆ ಆದ ಮೇಲೆ ತಮ್ಮ ಸಂತಾನೊತ್ಪತ್ತಿಗಳ ಜೊತೆ ಆಗಸ್ಟ್ ತಿಂಗಳಲ್ಲಿ ಇಲ್ಲಿಂದ ತವರೂರು ಕಡೆ ಹೊರಡುತ್ತವೆ. ಸಂತಾನೊತ್ಪತ್ತಿಗೆಂದೇ ಸೈಬೇರಿಯನ್ ಪಕ್ಷಿಗಳು ಇಲ್ಲಿಗೆ ಬರುತ್ತಿವೆ ಎನ್ನುತ್ತಾರೆ ಡಾ. ಜ್ಞಾನೇಶ, ಉಪ ನಿರ್ದೇಶಕರು ಪಶುಸಂಗೋಪನೆ ಇಲಾಖೆ.
ಹೀಗೆ ಬಂದು ಹಾಗೆ ಹೋಗುವ ಈ ವಿದೇಶಿ ಪಕ್ಷಿಗಳಲ್ಲಿ- ಪೇಂಟೆಡ್ ಸ್ಟಾಕ್ಸರ್, ಗೆಹರನ್, ವ್ಹೈಟಾವಿಸ್, ಬ್ಲಾಕಾವಿಸ್, ಪಾಂಡ್ ಹೆರಾನ್, ಪೆಲಕಿನ್, ಮತ್ತು ವಿವಿಧ ಜಾತಿಯ ಕೊಕ್ಕರೆಗಳು ಸೇರಿವೆ. ಸೈಬೇರಿಯಾ, ನೈಜಿರಿಯಾ, ದಕ್ಷಿಣ ಆಫ್ರಿಕಾದಿಂದ ವಿವಿಧ ತಳಿಯ ಪಕ್ಷಿಗಳು ಇಲ್ಲಿಗೆ ಬಂದು ಹನಿಮೂನ್ ಮಾಡಿಕೊಳ್ಳುತ್ತವೆ. ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿದ ನಂತರ ಆಗಸ್ಟ್ ತಿಂಗಳಲ್ಲಿ ವಾಪಸ್ಸು ತವರಿನ ಕಡೆ ಮುಖ ಮಾಡುತ್ತವೆ. ಆದ್ರೆ ಸಂತಾನೋತ್ಪತ್ತಿಗೆ ಬಂದ ಪಕ್ಷಿಗಳಿಗೆ ಗ್ರಾಮಸ್ಥರು ಯಾವುದೆ ತೊಂದರೆ ಮಾಡದೆ ಅವುಗಳ ರಕ್ಷಣೆಗೆ ಮುಂದಾಗುತ್ತಾರೆ ಡಾ. ರಮೇಶ, ಸಹಾಯಕ ಉಪ ನಿರ್ದೇಶಕರು, ಪಶು ಸಂಗೊಪನೆ ಇಲಾಖೆ.
ಇನ್ನು ವಿದೇಶಿ ಪಕ್ಷಿಗಳ ಅಂದ-ಚೆಂದ, ಒನಪು ವೈಯಾರ, ಹಾರಾಟದ ರೀತಿ-ನೀತಿಯ ಸೊಬಗು ನೋಡಲು ತುಂಬಾ ಸುಂದರವಾಗಿರುತ್ತೆ. ಅದೆ ಕಾರಣಕ್ಕೆ ಇಲ್ಲಿರುವ ಪಕ್ಷಿಗಳನ್ನು ನೋಡಲು ಪ್ರವಾಸಿಗರು ಸಹ ಬರುತ್ತಾರೆ. ಇಂಥ ಗ್ರಾಮವನ್ನು ಅಧಿಕೃತ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ದಿಪಡಿಸಿ, ಪಕ್ಷಿಧಾಮವನ್ನಾಗಿ ಮಾಡಿದ್ರೆ… ಈ ವಿದೇಶಿ ಹಕ್ಕಿಗಳು ಇಲ್ಲಿಯೇ ಶಾಶ್ವತವಾಗಿ ಇರುವಂತೆ ಮಾಡಬಹುದು ಎನ್ನುತ್ತಾರೆ ಸ್ಥಳೀಯರು (World Migratory Bird Day 2024).
ಆದರೆ ಇದಕ್ಕೆ ವಿರುದ್ಧವಾಗಿ ಸ್ಥಳೀಯ ಹಿರಿಯರೊಬ್ಬರು ಹೇಳಿದ ಈ ಮಾತು ಮಾರ್ಮಿಕವಾಗಿದೆ ಎನಿಸುತ್ತದೆ. ಜೊತೆಗೆ, ಅರೆ ಪಕ್ಷಿಗಳ ವಲಸೆ ನೀತಿಯೇ ಅದಾಗಿದೆ ಅಲ್ಲವಾ? ಎನಿಸುತ್ತದೆ. ನೀವು ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಸ್ವರ್ಗ ಸಮಾನ ಪ್ರಶಸ್ತ ಜಾಗ ಮಾಡಿಕೊಟ್ಟರೂ ಅವು ನಾ ಒಲ್ಲೆ ಎನ್ನುತ್ತಾ ಪುರ್ ಅಂತಾ ಹಾರಿಹೋಗುತ್ತವೆ. ಅದೇ ಅದರ ಜಾಯಮಾನ/ ಅದರ ಲಾಜಿಕ್ ಆಗಿದೆ.
ಇನ್ನು ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವುದೂ ಅಪಾಯಕಾರಿಯಾಗಿದೆ. ನಮ್ಮ ಜನಕ್ಕೆ ಪ್ರವಾಸದ ಸೆನ್ಸ್ ಸ್ವಲ್ಪ ಕಡಿಮೆಯೇ. ಸ್ವೇಚ್ಚಾಚಾರಿಯಾದ ಮನುಷ್ಯ ಆ ಪ್ರಾಣಿಪಕ್ಷಿಗಳಿಗೆ ಎಲ್ಲಿ ಅಪಾಯ ತಂದೊಡ್ಡುತ್ತಾನೋ ಎಂಬುದು ನನ್ನ ಆತಂಕವಾಗಿದೆ ಎಂದು ಆ ಹಿರಿಯರು ಹೇಳಿದ ಮಾತಿಗೆ ಏನನ್ನೋಣ!?
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Tue, 14 May 24