ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಲು ಆಣೆ ಪ್ರಮಾಣ ಮಾಡಿಸಿರುವುದು. ಅಷ್ಟೇ ಅಲ್ಲದೆ ಹಣದ ಆಮಿಷವೊಡ್ಡುವ ವಿಡಿಯೋ ವೈರಲ್ ಆಗಿದೆ. ಕೋಲಾರ ಚಿಕ್ಕಬಳ್ಳಾಪುರ ಪರಿಷತ್ ಚುನಾವಣೆ ವಿಚಾರವಾಗಿ ಆಣೆ ಪ್ರಮಾಣ ಮಾಡಿಸಿರುವುದು ತಿಳಿದುಬಂದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಫಾರ್ಮ್ ಹೌಸ್ನಲ್ಲಿ ಆಣೆ ಮಾಡಿಸಲಾಗಿದೆ. ಬಾಗೇಪಲ್ಲಿ ತಾಲೂಕಿನ ಪರಗೋಡು ಬಳಿಯ ಫಾರ್ಮ್ ಹೌಸ್ ಇಲ್ಲಿ ತಿರುಪತಿ ತಿಮ್ಮಪ್ಪ ದೇವರ ಫೋಟೋ ಮೇಲೆ ಆಣೆ ಪ್ರಮಾಣ ಮಾಡಲಾಗಿದೆ.
ಜೊತೆಗೆ, ಮತದಾರರಿಗೆ ತಲಾ 75 ಸಾವಿರ ರೂಪಾಯಿ ಆಮಿಷ ಒಡ್ಡಲಾಗಿದೆ. ನಾಯಕರು ಹಣ ಹಂಚಿ ಪ್ರಮಾಣ ಮಾಡಿಸಿಕೊಳ್ಳುತ್ತಿರುವುದು ಇದೀಗ ವೈರಲ್ ಆಗಿದೆ. ಆಣೆ ಪ್ರಮಾಣ, ಹಣದ ಆಮಿಷವೊಡ್ಡುವ ವಿಡಿಯೋ ವೈರಲ್ ಆಗಿದೆ.
ರಾಮನಗರ: ಶಾಲೆಗೆ ನುಗ್ಗಿ 4ನೇ ತರಗತಿ ವಿದ್ಯಾರ್ಥಿ ಮೇಲೆ ಕೋತಿ ದಾಳಿ
ಶಾಲೆಗೆ ನುಗ್ಗಿ 4ನೇ ತರಗತಿ ವಿದ್ಯಾರ್ಥಿ ಮೇಲೆ ಕೋತಿ ದಾಳಿ ಮಾಡಿದ ದುರ್ಘಟನೆ ರಾಮನಗರ ತಾಲೂಕಿನ ನಾಗೋಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಇಲ್ಲಿನ ವಿದ್ಯಾರ್ಥಿ, 10 ವರ್ಷದ ಲಿಖಿತ್‌ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿಕ್ಕಮಗಳೂರು: ಬೊಲೆರೊ ಪಿಕಪ್ ವಾಹನ ಡಿಕ್ಕಿ, ಬೈಕ್ ಸವಾರರಿಬ್ಬರ ಸಾವು
ಬೊಲೆರೊ ಪಿಕಪ್ ವಾಹನ ಡಿಕ್ಕಿ ಆಗಿ, ಬೈಕ್ ಸವಾರರಿಬ್ಬರು ಸಾವನ್ನಪ್ಪಿದ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ. ಬೈಕ್ನಲ್ಲಿದ್ದ ಮತ್ತೊಬ್ಬನ ಸ್ಥಿತಿ ಗಂಭಿರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಸವಾರರು ಹಾಸನ ಜಿಲ್ಲೆಯ ಅರಸೀಕೆರೆ ಮೂಲದವರು ಎಂದು ತಿಳಿದುಬಂದಿದೆ. ಅವರು ಕೆಲಸ ಮುಗಿಸಿಕೊಂಡು ಚಿಕ್ಕಮಗಳೂರಿನಿಂದ ತೆರಳುವಾಗ ಘಟನೆ ನಡೆದಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆಯಲ್ಲಿ ದುಬಾರಿಯಾದ ಮತದಾರ, ಐವತ್ತು ಸಾವಿರದಿಂದ ಒಂದು ಲಕ್ಷಕ್ಕೆ ದಾಟಿದ ಒಂದು ಓಟಿನ ಬೆಲೆ
ಇದನ್ನೂ ಓದಿ: ಕಲಬುರಗಿ: ಪಾಲಿಕೆ ಸದಸ್ಯೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸದಂತೆ, ಮೇಯರ್ ಚುನಾವಣೆಯಲ್ಲಿ ಭಾಗವಹಿಸದಂತೆ ಸದಸ್ಯೆಗೆ ತಡೆಯಾಜ್ಞೆ