ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು: ವಿಪಕ್ಷನಾಯಕ ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Aug 21, 2022 | 2:49 PM

ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಚಿಕ್ಕಬಳ್ಳಾಪೂರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು: ವಿಪಕ್ಷನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಚಿಕ್ಕಬಳ್ಳಾಪುರ: ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ (Indian constitution) ಬದಲಿಸಲು ಎಂದು ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಚಿಕ್ಕಬಳ್ಳಾಪೂರದಲ್ಲಿ (Chikkaballapura) ಬಿಜೆಪಿ (BJP) ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸರಳ ಸಾಮೂಹಿಕ ಮದುವೆ ಸಮಾರಂಭದಲ್ಲಿ ಬಾಗಿಯಾಗಿ ಮಾತನಾಡಿದ ವೇಳೆ ಸಂವಿಧಾನ ಬದಲಿಸಲು ಬಂದಿದ್ದೇವೆಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ (Ananth Kumar Hegde) ಹೇಳುತ್ತಾನೆ. ಅನಂತಕುಮಾರ ಹೆಗಡೆ ವಿರುದ್ಧ ಬಿಜೆಪಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹರಿಹಾಯ್ದರು.

ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ನೀಡಿದಾಗಲೂ ಕ್ರಮಕೈಗೊಂಡಿಲ್ಲ. ರಾಷ್ಟ್ರಧ್ವಜದ ಬಗ್ಗೆಯೂ ಬಿಜೆಪಿಯವರಿಗೆ ಗೌರವ ಇಲ್ಲ. ಈಗ ಹರ್​ ಘರ್​ ತಿರಂಗಾ ಎಂದು ನಾಟಕ ಮಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಟಕ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅನ್ನೋ ಒಬ್ಬ ಪೆದ್ದ ಇದ್ದಾನೆ. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆಂದು ಹೇಳುತ್ತಾನೆ. ಬಿಜೆಪಿಯವರು ಎಂತಹ ಡೋಗಿಗಳೆ ಎಂಬುದು ಗೊತ್ತಾಗಿದೆ ಎಂದು ಹೇಳಿದರು.

ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಮಳೆ, ನೆರೆ ಹಾನಿ ವೀಕ್ಷಣೆಗೆ ನಾನು ತೆರಳಿದ್ದೆ. ಈ ವೇಳೆ ಅಂದು ನನ್ನನ್ನು ತಡೆದಿದ್ದು ಬಿಜೆಪಿ, ಆರ್​ಎಸ್​ಎಸ್​ ಕಾರ್ಯಕರ್ತರು. ನನ್ನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್​ ಆರ್​ಎಸ್​ಎಸ್​ ಕಾರ್ಯಕರ್ತನಾಗಿದ್ದು, ನಾನು ಕಾಂಗ್ರೆಸ್ ಕಾರ್ಯಕರ್ತನೆಂದು ಹೇಳುವಂತೆ ಬಿಜೆಪಿಯವರು ಮೊಟ್ಟೆ ಎಸೆದಿದ್ದ ಸಂಪತ್ ಬಾಯಲ್ಲಿ ಹೇಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರ, ಸಂಪತ್ತು ಕೆಲವೇ ಜನರ ಬಳಿ ಇದೆ. ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಿಗಬೇಕು. ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಅಧಿಕಾರ ಸಂಪುತ್ತು ಕೆಲವೆ ಜನರಲ್ಲಿ ಇರಬಾರದು. ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು. ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸೇರಿ ಅಧಿಕಾರ ಹಂಚಿಕೆಯಾಗಬೇಕು ಎಂದು ತಿಳಿಸಿದರು.

ನಾನು ಯಾರಿಗೂ ಭಯ ಪಡುವ ಪ್ರಶ್ನೆಯೇ ಇಲ್ಲ. ನಾವು ಸಂವಿಧಾನ, ಜನರಿಗೆ ಮಾತ್ರ ಭಯ ಪಡುತ್ತೇವೆ. ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ಆಗುಬೇಕು. ಬಸವಣ್ಣನವರು ಜಾತಿಯತೆ ವಿರುದ್ಧ ಆವಾಗಲೆ ಕ್ರಾಂತಿಯನ್ನು ಮಾಡಿದ್ದಾರೆ. ಆದರೂ ಮತ್ತೆ ನೀ ಯಾವ ಜಾತಿ ಅಂತ ಕೇಳುತ್ತೇವೆ. ಆರ್.ಎಸ್.ಎಸ್​ನಲ್ಲಿ ಇದುವರೆಗೂ ದಲಿತರು ಹಿಂದೂಳಿದವರು ಅಲ್ಪಸಂಖ್ಯಾತರನ್ನು ಸರಸಂಚಾಲಕರನ್ನು ಮಾಡಿಲ್ಲ. ಆರ್.ಎಸ್.ಎಸ್​ನಲ್ಲಿ ಮೇಲ್ಚಾತಿಯವರೆ ಇರಬೇಕು ಎಂದು ಕಿಡಿಕಾರಿದರು.

ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ವಿಚಾರವಾಗಿ ಮಾತನಾಡಿದ ಅವರು ನಾನು ಏನ್ ಬೇಕಾದರೂ ತಿಂದು ಎಲ್ಲಿಗೆ ಬೇಕಾದರೂ ಹೋಗುತ್ತೇನೆ. ಅದನ್ನು ಬೇರೆಯವರು ಏನ್ ನನಗೆ ಕೇಳೋದು. ನಾನು ಮಾಂಸಹಾರಿ ಮಾಂಸ ತಿನ್ನುತ್ತೇನೆ. ನಿಮ್ಮ ಹವ್ಯಾಸ ನಿಮಗೆ ನಮ್ಮ ಹವ್ಯಾಸ ನಮಗೆ. ಅದನ್ನು ಕೇಳೋಕೆ ಬಿಜೆಪಿಯವರು ಯಾರು ? ಎಂದು ಪ್ರಶ್ನಿಸಿದರು.

ಸುದರ್ಶನ್​ ಗೆಸ್ಟ್​ಹೌಸ್​ನಲ್ಲಿ ಊಟ ಮಾಡಿದ್ದೆವು. ದೇವರು ಇಂಥದ್ದನ್ನೇ ತಿಂದು ಬಾ ಎಂದು ಹೇಳಿದ್ದಾರಾ? ಮಧ್ಯಾಹ್ನ ಮಾಂಸ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಹುದಾ? ಹಿಂದಿನ ದಿನ ಮಾಂಸ ತಿಂದು ದೇಗುಲಕ್ಕೆ ಹೋಗುವುದು ಸರಿಯಾ?. ಬಿಜೆಪಿಯವರು ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ