ಸಾಲವಾಗಿ ಕಬಾಬ್ ಕೊಡದಿದ್ದಕ್ಕೆ ಅಡುಗೆ ಭಟ್ಟನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ

ಸಾಲವಾಗಿ ಕಬಾಬ್ ನೀಡದ್ದಕ್ಕೆ ಅಡುಗೆ ಭಟ್ಟನ ಮೇಲೆ ಪುಂಡರ ಗುಂಪೊಂದು ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ. ಹಲ್ಲೆ ಮಾಡುತ್ತಿರುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾಲವಾಗಿ ಕಬಾಬ್ ಕೊಡದಿದ್ದಕ್ಕೆ ಅಡುಗೆ ಭಟ್ಟನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2025 | 8:35 PM

ಚಿಕ್ಕಬಳ್ಳಾಪುರ, ನವೆಂಬರ್ 02: ಸಾಲವಾಗಿ ಕಬಾಬ್ (Kabab)​​ ನೀಡದ್ದಕ್ಕೆ ಪುಂಡರ ಗುಂಪೊಂದು ಅಡುಗೆ ಭಟ್ಟನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ (Assault) ಮಾಡಿರುವಂತಹ ಘಟನೆ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ. ಪುಂಡರ ಅಟ್ಟಹಾಸದ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗಾಯಾಳು ಅಡುಗೆ ಭಟ್ಟ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿ ಮೂಲದ ಯುವಕ ಸುನೀಲ್, ಎಪಿಎಂಸಿ ಮಾರುಕಟ್ಟೆಯ ಚೇತನ್ ಬಾರ್ ಪಕ್ಕ ಹಲವು ವರ್ಷಗಳಿಂದ ಸಿರಿ ಎಂಬ ಹೆಸರಿನಲ್ಲಿ ಎಗ್​ರೈಸ್, ಕಬಾಬ್ ಹೋಟೆಲ್ ಇಟ್ಟುಕೊಂಡು ಬಿಸಿನೆಸ್ ಮಾಡುತ್ತಿದ್ದರು.

ಇದನ್ನೂ ಓದಿ: ಎಂಥ ಕಾಲ ನೋಡ್ರಪ್ಪಾ …ಬುದ್ಧಿ ಹೇಳಿದ್ದಕ್ಕೆ ಕುಚಿಕು ಗೆಳೆಯನನ್ನ ಹತ್ಯೆಗೈದ ಸ್ನೇಹಿತ

ಅವರ ಅಂಗಡಿಗೆ ಬಹುತೇಕರು ಬಾರ್​ಗೆ ಬರುವವರೇ ಹೋಗುತ್ತಾರೆ. ಮೂರು ನಾಲ್ಕು ದಿನಗಳಿಂದ ಕಣಜೇನಹಳ್ಳಿ ಗ್ರಾಮದ ನಾಗರಾಜು ಎಂಬಾತ ಸಮೀಪದ ಬಾರ್​ನಲ್ಲಿ ಕಂಠಪೂರ್ತಿ ಕುಡಿದು ಹೋಟೆಲ್​ ಬಳಿ ಬಂದು ಕಬಾಬ್​​ ಅನ್ನು ಸಾಲ ಕೇಳಿದ್ದಾರೆ. ಇದಕ್ಕೆ ಅಡುಗೆ ಭಟ್ಟ ಗಣೇಶ್​​, ಮಾಲೀಕರು ಇಲ್ಲ, ಅವರು ಬಂದ ನಂತರ ಸಾಲ ತೆಗೆದುಕೊಳ್ಳುವಂತೆ ಹೇಳಿದ್ದಾರೆ.

ಹಲ್ಲೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಇಷ್ಟಕ್ಕೆ ಆಕ್ರೋಶಗೊಂಡ ನಾಗರಾಜ್, ತನ್ನ ಹುಡುಗರನ್ನು ಸ್ಥಳಕ್ಕೆ ಕರೆಸಿ ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಗಣೇಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತೀಪ್ಪೇನಹಳ್ಳಿ ಗ್ರಾಮದ ಸುನೀಲ್ ಜೀವನ ನಡೆಸಲು ಸಾಲಸೋಲ ಮಾಡಿ ಕಬಾಬ್, ಎಗ್​ರೈಸ್ ಹೋಟೆಲ್ ಇಟ್ಟುಕೊಂಡಿದ್ದರು. ಪ್ರತಿನಿತ್ಯ ಒಂದಿಷ್ಟು ಹಣ ಅಂತ ಸಂಪಾದನೆ ಮಾಡಿಕೊಳ್ಳುತ್ತಿದ್ದರು. ಆದರೆ ಕೆಲ ಮದ್ಯಪ್ರಿಯರು ಆಗಾಗ ಬಂದು ಕಬಾಬ್ ಅನ್ನು ಸಾಲವಾಗಿ ಪಡೆಯುತ್ತಿದ್ದರು. ಆದರೆ ಮೂರು ದಿನಗಳಿಂದ ನಾಗರಾಜ್ ಎಂಬುವವರು ಸಾಲಕ್ಕೆ ಕಬಾಬ್ ಕೇಳಿ ಗಲಾಟೆ ಮಾಡುತ್ತಿದ್ದರು.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ: ಸಾವಿನ ಕಾರಣ ನಿಗೂಢ

ಇಂದು ಹೋಟೆಲ್ ಬಳಿ ಗಣೇಶ್ ಒಬ್ಬರೇ ಇರುವಾಗ ನಾಗರಾಜ್ ಕುಡಿದು ಬಂದು ಹೋಟೆಲ್ ಬಳಿ ಗಲಾಟೆ ಮಾಡಿ ಹುಡುಗರನ್ನು ಕರೆಸಿ ಏನೂ ಅರಿಯದ ಗಣೇಶ್ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಇನ್ನು ಪುಂಡರ ಥಳಿತಕ್ಕೆ ಗಾಯಗೊಂಡ ಗಣೇಶ್, ಪ್ರಾಣ ರಕ್ಷಣೆಗೆ ಓಡಿಹೋಗಿ ಬಚ್ಚಿಟ್ಟುಕೊಂಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.