ಚಿಂತಾಮಣಿ: ಜಖಂಗೊಂಡಿದ್ದ ತಮಿಳುನಾಡು ಕಾರಿನಲ್ಲಿ, ದಾಖಲೆಗಳಿಲ್ಲದೆ ಸಾಗಿಸ್ತಿದ್ದ 5 ಕೋಟಿ ರೂ ಬೆಲೆಯ 10 ಕೆಜಿ ಚಿನ್ನಾಭರಣ ಪೊಲೀಸರ ವಶಕ್ಕೆ

| Updated By: ಸಾಧು ಶ್ರೀನಾಥ್​

Updated on: Jul 28, 2023 | 5:55 PM

ತಮಿಳುನಾಡು ಮೂಲದವರಿದ್ದ ಕಾರಿನಲ್ಲಿ ಎರಡು ಬ್ಯಾಗ್ ಗಳಲ್ಲಿ 10 ಪ್ಲಾಸ್ಟಿಕ್ ಡಬ್ಬಿಗಳಿದ್ದು ಅವುಗಳಲ್ಲಿ 10 ಕೆಜಿ 30 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ.

ಚಿಂತಾಮಣಿ: ಜಖಂಗೊಂಡಿದ್ದ ತಮಿಳುನಾಡು ಕಾರಿನಲ್ಲಿ, ದಾಖಲೆಗಳಿಲ್ಲದೆ ಸಾಗಿಸ್ತಿದ್ದ 5 ಕೋಟಿ ರೂ ಬೆಲೆಯ 10 ಕೆಜಿ ಚಿನ್ನಾಭರಣ ಪೊಲೀಸರ ವಶಕ್ಕೆ
ದಾಖಲೆಗಳಿಲ್ಲದೆ ಸಾಗಿಸ್ತಿದ್ದ 5 ಕೋಟಿ ರೂ ಬೆಲೆಯ 10 ಕೆಜಿ ಚಿನ್ನಾಭರಣ ಪೊಲೀಸರ ವಶಕ್ಕೆ
Follow us on

ಚಿಕ್ಕಬಳ್ಳಾಪುರ, ಜುಲೈ 28: ದಾಖಲೆಗಳಿಲ್ಲದೆ, ಅನುಮಾನಸ್ಫದವಾಗಿ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಬೆಲೆಬಾಳುವ 10 ಕೆಜಿ 30 ಗ್ರಾಂ ತೂಕದ ಚಿನ್ನಾಭರಣಗಳನ್ನು (Gold Jewelery) ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರು (Chintamani Police) ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರ ಠಾಣಾ ಪಿಎಸ್‍ಐ ನಾಗೇಂದ್ರಪ್ರಸಾದ್ ಎಂಬುವವರು ಗಸ್ತಿನಲ್ಲಿದ್ದಾಗ ಎನ್ ಆರ್ ಬಡವಾಣೆಯಲ್ಲಿ ಮುಂಭಾಗ ಜಖಂಗೊಂಡಿದ್ದ ಕಾರೊಂದು ಬಂದಿದ್ದು ಅನುಮಾನಗೊಂಡ ಪಿಎಸ್‍ಐ ಕಾರನ್ನ ತಡೆದು ಕಾರಿನಲ್ಲಿದ್ದವರ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಕಾರಿನಲ್ಲಿ ತಮಿಳುನಾಡು ಮೂಲದ ಸಂಕರೇಶ್ವರ, ಅರುಣ್, ವಿಕ್ರಮ್, ಗೋಪಾಲ್ ದಾಸ್ ಎಂಬುವವರಿದ್ದು, ಕಾರಿನಲ್ಲಿದ್ದ ಎರಡು ಬ್ಯಾಗ್ ಗಳಲ್ಲಿ 10 ಪ್ಲಾಸ್ಟಿಕ್ ಡಬ್ಬಿಗಳಿದ್ದು ಅವುಗಳಲ್ಲಿ 10 ಕೆಜಿ 30 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ. ಹೀಗಾಗಿ ಸೂಕ್ತ ದಾಖಲೆಗಳನ್ನ ಕೇಳಿದಾಗ ದಾಖಲೆಗಳನ್ನ ನೀಡದೆ ಅಸಮರ್ಪಕ ಉತ್ತರ ನೀಡಿದ್ದು ಅನುಮಾನಗೊಂಡ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಷಾಕ್! ಚೀಟಿ ಹೆಸರಿನಲ್ಲಿ 3 ಕೋಟಿ ಪಂಗನಾಮ, ಹಣ ಕಳೆದುಕೊಂಡು ಚಿಂತಾಮಣಿ ಪೊಲೀಸರ ಮೊರೆ ಹೋದ 40 ಮಹಿಳೆಯರು

ಚೆನ್ನಾಗಿ ಓದುವಂತೆ ಹೆತ್ತಮ್ಮ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಬಾಲಕಿ ಉತ್ತರ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ, ಜುಲೈ 28: ಚೆನ್ನಾಗಿ ಓದುವಂತೆ ಪೋಷಕರು ಮಗಳಿಗೆ  ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಬಾಲಕಿಯೋರ್ವಳು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಉತ್ತರ ಪಿನಾಕಿನಿ ನದಿಯಲ್ಲಿ ಘಟನೆ ನಡೆದಿದೆ.

ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಿಜಯ್ ಕುಮಾರ್ ಹಾಗೂ ಭವ್ಯ ದಂಪತಿಯ ಪುತ್ರಿ 15 ವರ್ಷದ ಬಾಲಕಿ ವಿದ್ಯಾಶ್ರೀ ಮೃತ ದುರ್ದೈವಿಯಾಗಿದ್ದಾಳೆ. ನಗರದ ಖಾಸಗಿ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಆದ್ರೆ ವಿದ್ಯಾಶ್ರೀ ಸರಿಯಾಗಿ ಓದದೆ, ಮೊಬೈಲ್ ಆಟವಾಡಿಕೊಂಡಿರುತ್ತಿದ್ದಳಂತೆ. ಇದರಿಂದ ಆಕೆಯ ತಾಯಿ ಮಗಳಿಗೆ ನಿನ್ನೆ ಗುರುವಾರ ರಾತ್ರಿ ಬುದ್ದಿವಾದ ಹೇಳಿದ್ದಾರೆ. ಇದನ್ನ ಮನಸ್ಸಿಗೆ ಹಚ್ಚಿಕೊಂಡಿದ್ದ ವಿದ್ಯಾಶ್ರೀ ಮನನೊಂದು ಸಮೀಪದ ಉತ್ತರ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧ ಸ್ಥಳಕ್ಕೆ ಗೌರಿಬಿದನೂರು ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Fri, 28 July 23