ಚಿಕ್ಕಬಳ್ಳಾಪುರ: ಕಾಸ್ಟಿಕ್ ಸೋಡಾ ಮಿಶ್ರಣ ಮಾಡುವಾಗ ಬೆಂಕಿ ಹೊತ್ತುಕೊಂಡು 5 ಜನ ಕಾರ್ಮಿಕರು ಗಾಯಗೊಂಡ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಚಿಕ್ಕಕುರುಗೋಡು ಗ್ರಾಮದ ಬಳಿ ಇರುವ ಕಾರ್ಖಾನೆಯೊಂದರಲ್ಲಿ ನಡೆದಿದೆ. ದುರ್ಘಟನೆ ನಡೆದ ಪ್ರೀಕಾಟ್ ಲಿಮಿಟೆಡ್ ಕೆ.ಯೂನಿಟ್ ಕಾರ್ಖಾನೆಯ ಕಾರ್ಮಿಕರಾದ ಹರೀಶ, ವೆಂಕಟೇಶ, ರವಿಕುಮಾರ್, ಆನಂದಕುಮಾರ್, ಗೋರವಯ್ಯ ಗಾಯಗೊಂಡ ದುರ್ದೈವಿಗಳಾಗಿದ್ದಾರೆ. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಡಿಯಂ ಹೈಡ್ರಾಕ್ಸೈಡ್ ರಾಸಾಯನಿಕಕ್ಕೆ ನೀರು ಮಿಶ್ರಣ ಮಾಡುವಾಗ ದುರ್ಘಟನೆ ಸಂಭವಿಸಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಕಾರ್ಖಾನೆಯ ದೃಶ್ಯ
ಇದನ್ನೂ ಓದಿ:
ಚಿಕ್ಕಬಳ್ಳಾಪುರ: ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಕೆಎಸ್ಆರ್ಟಿಸಿ ಟ್ರಾಫಿಕ್ ಕಂಟ್ರೋಲರ್
(Chikkaballapur Fire in mixing caustic soda 5 workers injured)