Arvind Bellad: ನಾಳೆ ಧಾರವಾಡ ಬಂದ್ ಇಲ್ಲ; ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ದೊರೆಯದ್ದಕ್ಕೆ ಬಂದ್ ಎಂದು ವೈರಲ್ ಆದದ್ದು ಸುಳ್ಳುಸುದ್ದಿ

Arvind Bellad: ನಾಳೆ ಧಾರವಾಡ ಬಂದ್ ಇಲ್ಲ; ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ದೊರೆಯದ್ದಕ್ಕೆ ಬಂದ್ ಎಂದು ವೈರಲ್ ಆದದ್ದು ಸುಳ್ಳುಸುದ್ದಿ
ಅರವಿಂದ ಬೆಲ್ಲದ್

ಸಮಸ್ತ ಧಾರವಾಡ ಜನತೆಯಿಂದ ಬಂದ್ ಎಂದು ಪೋಸ್ಟ್ ವೈರಲ್ ಮಾಡಲಾಗಿದೆ. ಆದರೆ, ಅದು ಸುಳ್ಳು ಸುದ್ದಿಯಾಗಿದ್ದು, ಯಾರೂ ಸಹ ನಂಬಿ ಮೋಸಹೋಗಬೇಡಿ ಎಂದು ದೇವರಾಜ್ ಶಹಾಪುರ ಮನವಿ ಮಾಡಿದ್ದಾರೆ. ನಾಳೆ ಧಾರವಾಡದಲ್ಲಿ ಯಾವುದೇ ಬಂದ್ ಇರುವುದಿಲ್ಲ ಎಂದು ಸಹ ಅವರು ಖಚಿತಪಡಿಸಿದ್ದಾರೆ.

TV9kannada Web Team

| Edited By: guruganesh bhat

Aug 05, 2021 | 3:19 PM

ಧಾರವಾಡ: ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ನಾಳೆ (ಆಗಸ್ಟ್ 6) ಧಾರವಾಡ ಬಂದ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಸುದ್ದಿ ಸುಳ್ಳು ಎಂದು ಬಿಜೆಪಿ ಮಾಧ್ಯಮ ವಕ್ತಾರ ದೇವರಾಜ್ ಶಹಾಪುರ ಸ್ಪಷ್ಟನೆ ನೀಡಿದ್ದಾರೆ. ಕಿಡಿಗೇಡಿಗಳು ನಾಳೆ ಧಾರವಾಡ ಬಂದ್ ಎಂದು ಸುಳ್ಳು ಸುದ್ದಿ ಸೃಷ್ಟಿಸಿ ವೈರಲ್ ಮಾಡಿದ್ದಾರೆ. ಅರವಿಂದ ಬೆಲ್ಲದಗೆ (Arvind Bellad) ಸಚಿವ ಸ್ಥಾನ ದೊರೆತಿಲ್ಲ ಎಂಬ ಕಾರಣದಿಂದ ಸಮಸ್ತ ಧಾರವಾಡ ಜನತೆಯಿಂದ ಬಂದ್ ಎಂದು ಪೋಸ್ಟ್ ವೈರಲ್ ಮಾಡಲಾಗಿದೆ. ಆದರೆ, ಅದು ಸುಳ್ಳು ಸುದ್ದಿಯಾಗಿದ್ದು, ಯಾರೂ ಸಹ ನಂಬಿ ಮೋಸಹೋಗಬೇಡಿ ಎಂದು ದೇವರಾಜ್ ಶಹಾಪುರ ಮನವಿ ಮಾಡಿದ್ದಾರೆ. ನಾಳೆ ಧಾರವಾಡದಲ್ಲಿ ಯಾವುದೇ ಬಂದ್ ಇರುವುದಿಲ್ಲ ಎಂದು ಸಹ ಅವರು ಖಚಿತಪಡಿಸಿದ್ದಾರೆ.

ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ನೀಡಲು ಸಾಹಿತ್ಯ ವಲಯದಿಂದಲೂ ಆಗ್ರಹ ವ್ಯಕ್ತವಾಗಿತ್ತು. ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಶಾಸಕ ಅರವಿಂದ ಬೆಲ್ಲದ ಸಚಿವ ಸ್ಥಾನ ನೀಡುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದರು.. ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ಸಲ್ಲಿಸುವಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಪ್ರಮುಖ ಪಾತ್ರ ವಹಿಸಿದ್ದರು ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ನಂತರದ ಮುಖ್ಯಮಂತ್ರಿಯಾಗಿ ಅರವಿಂದ ಬೆಲ್ಲದ ಆಯ್ಕೆಯಾಗುತ್ತಾರೆ ಎಂದೇ ಬಿಂಬಿತವಾಗಿತ್ತು.

FakeNews

                                                                   ವೈರಲ್ ಆಗಿರುವ ಸುಳ್ಳು ಸುದ್ದಿ

ಶಾಸಕ ಅರವಿಂದ ಬೆಲ್ಲದ ನಡೆಸಿದ ಪ್ರಯತ್ನದಿಂದಲೇ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು ಎಂಬ ಮಾತುಗಳು ಸಹ ಬಿಜೆಪಿ ವಲಯದಲ್ಲೂ ಕೇಳಿಬಂದಿದ್ದವು. ಯಡಿಯೂರಪ್ಪ ನಂತರ ಮುಖ್ಯಮಂತ್ರಿ ರೇಸ್​ನಲ್ಲಿಯೂ ಅವರ ಅರವಿಂದ ಬೆಲ್ಲದ ಹೆಸರು ಚಾಲ್ತಿಯಲ್ಲಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರನ್ನು ವಿವಿಧ ಕಾರಣಗಳಿಂದ ಹಿಂದಿಕ್ಕಿದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು.

ಇದನ್ನೂ ಓದಿ: Karnataka BJP Crisis: ಅರವಿಂದ ಬೆಲ್ಲದ್​ ಅವರ ರಾಜಕೀಯ ಚದುರಂಗದಾಟ ಅವರಿಗೇ ಮುಳುವಾಗಬಲ್ಲುದೇ?

ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ನೀಡುವಂತೆ ಪತ್ರ ಬರೆದ ಹಿರಿಯ ಸಾಹಿತಿ ಚನ್ನವೀರ ಕಣವಿ

(No Dharwad Band tomorrow Vandalism goes viral as MLA Aravind Bellad not gets a ministerial seat)

Follow us on

Related Stories

Most Read Stories

Click on your DTH Provider to Add TV9 Kannada