AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Cabinet: ಬಸವರಾಜ ಬೊಮ್ಮಾಯಿ ಟೀಂನ ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ ಇಲ್ಲಿದೆ

Karnataka Cabinet Expansion: ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ  ಸಂಪುಟದಲ್ಲಿದ್ದ ಖಾತೆಗಳ ಮರುಹಂಚಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ

Karnataka Cabinet: ಬಸವರಾಜ ಬೊಮ್ಮಾಯಿ ಟೀಂನ ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ ಇಲ್ಲಿದೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 04, 2021 | 4:56 PM

Share

ಬೆಂಗಳೂರು:  ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು  ಸಚಿವ ಸಂಪುಟ ವಿಸ್ತರಣೆ ಮಾಡಿ 29 ನೂತನ ಸಚಿವರನ್ನು ಸಂಪುಟಕ್ಕೆ  ಸೇರಿಸಿದ್ದಾರೆ. ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ  ಸಂಪುಟದಲ್ಲಿದ್ದ ಖಾತೆಗಳ ಮರುಹಂಚಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಇನ್ನೂ ಖಾತೆ  ಹಂಚಿಕೆ ಆಗಿಲ್ಲ.

ಸಂಭಾವ್ಯ ಖಾತೆಯ ಪಟ್ಟಿ ಇಲ್ಲಿದೆ ಗೋವಿಂದ ಕಾರಜೋಳ-ಲೋಕೋಪಯೋಗಿ ಕೆ.ಎಸ್. ಈಶ್ವ ರಪ್ಪ-ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಆರ್‌.ಅಶೋಕ್‌-ಗೃಹ ಖಾತೆ ಉಮೇಶ್‌ ಕತ್ತಿ-ಕಂದಾಯ ಖಾತೆ ಬಿ.ಶ್ರೀರಾಮುಲು-ಸಮಾಜ ಕಲ್ಯಾಣ ಖಾತೆ ಡಾ.ಕೆ.ಸುಧಾಕರ್‌-ಆರೋಗ್ಯ ಖಾತೆ ಡಾ.ಅಶ್ವತ್ಥ್‌ ನಾರಾಯಣ-ಬೆಂಗಳೂರು ನಗರಾಭಿವೃದ್ಧಿ, ಐಟಿ-ಬಿಟಿ ವಿ.ಸೋಮಣ್ಣ-ವಸತಿ ಖಾತೆ ನಿರಾಣಿ-ಬೃಹತ್‌ & ಮಧ್ಯಮ ಕೈಗಾರಿಕೆ/ಗಣಿ & ಭೂವಿಜ್ಞಾನ ಆರಗ ಜ್ಞಾನೇಂದ್ರ-ಅರಣ್ಯ/ತೋಟಗಾರಿಕೆ ಮತ್ತು ರೇಷ್ಮೆ ಬಿ.ಸಿ.ಪಾಟೀಲ್‌-ಕೃಷಿ ಖಾತೆ ಎಸ್‌.ಅಂಗಾರ-ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ ಖಾತೆ, ಹಿಂದುಳಿದ ವರ್ಗಗಳ ಕಲ್ಯಾಣ ಎಸ್‌.ಟಿ.ಸೋಮಶೇಖರ್‌-ಸಹಕಾರ ಖಾತೆ ಶಿವರಾಮ್‌ ಹೆಬ್ಬಾರ್‌-ಕಾರ್ಮಿಕ ಖಾತೆ ಭೈರತಿ ಬಸವರಾಜ್‌-ನಗರಾಭಿವೃದ್ಧಿ ಖಾತೆ ಕೆ.ಗೋಪಾಲಯ್ಯ-ಅಬಕಾರಿ ಖಾತೆ ಜೆ.ಸಿ.ಮಾಧುಸ್ವಾಮಿ-ಸಣ್ಣ ನೀರಾವರಿ, ಉನ್ನತ ಶಿಕ್ಷಣ ಸುನಿಲ್‌ ಕುಮಾರ್‌-ಪ್ರವಾಸೋದ್ಯಮ ಖಾತೆ ಸಿ.ಸಿ.ಪಾಟೀಲ್‌-ವಾರ್ತಾ/ಮಹಿಳಾ ಮತ್ತು ಮಕ್ಕಳ ಕಲ್ಯಾಣ ಎಂಟಿಬಿ ನಾಗರಾಜ್‌-ಪೌರಾಡಳಿತ ಮತ್ತು ಸಕ್ಕರೆ ಖಾತೆ ಶಶಿಕಲಾ ಜೊಲ್ಲೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭು ಚೌಹಾಣ್‌-ಪಶು ಸಂಗೋಪನೆ ಖಾತೆ ಮುನಿರತ್ನ-ಸಣ್ಣ ಕೈಗಾರಿಕೆ ಖಾತೆ ಆನಂದ್‌ ಸಿಂಗ್‌-ಪರಿಸರ & ಜೀವಿಶಾಸ್ತ್ರ/ಮೂಲ ಸೌಕರ್ಯ ಕೆ.ಸಿ.ನಾರಾಯಣಗೌಡ-ಯುವಜನ ಮತ್ತು ಕ್ರೀಡೆ ಹಾಲಪ್ಪ ಆಚಾರ್‌-ಜವಳಿ ಖಾತೆ ಶಂಕರಪಾಟೀಲ್‌ ಮುನೇನಕೊಪ್ಪ-ಮೂಲಸೌಕರ್ಯ ಶಂಕರಪಾಟೀಲ್‌ ಮುನೇನಕೊಪ್ಪ-ಯೋಜನೆ & ಸಾಂಖ್ಯಿಕ ಬಿ.ಸಿ.ನಾಗೇಶ್‌-ಪ್ರಾಥಮಿಕ ಮತ್ತು ಶಿಕ್ಷಣ

ಇದನ್ನೂ ಓದಿ: Karnataka Cabinet: ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಬೆಂಗಳೂರಿನ ಶಾಸಕರಿವರು

(Karnataka Cabinet Expansion New Ministers Basavaraj Bommai team probable ministry)

Published On - 4:55 pm, Wed, 4 August 21