ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಕೈ ಕೊಯ್ದುಕೊಂಡ ಅಭಿಮಾನಿ..

ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಕೈ ಕೊಯ್ದುಕೊಂಡ ಅಭಿಮಾನಿ..
ಬಿ.ವೈ.ವಿಜಯೇಂದ್ರ

ಮಂಡ್ಯ ಜಿಲ್ಲೆಯ ಶಿವಕುಮಾರ್ ಎಂಬುವರು ತಮ್ಮ ಕೈಕೊಯ್ದುಕೊಂಡಿದ್ದು, ತಾನು ವಿಜಯೇಂದ್ರ ಅಭಿಮಾನಿ ಎಂದಿದ್ದಾರೆ. ನಮ್ಮ ಸಾಹೇಬರ (ಬಿ.ಎಸ್​.ಯಡಿಯೂರಪ್ಪ) ಮಗನನ್ನು ಸಂಪುಟಕ್ಕೆ ಸೇರಿಸಿಲ್ಲ. ನನಗೆ ತುಂಬ ನೋವಾಗುತ್ತಿದೆ ಎಂದಿದ್ದಾರೆ.

TV9kannada Web Team

| Edited By: Lakshmi Hegde

Aug 04, 2021 | 4:44 PM

ಬೆಂಗಳೂರು: ಇತ್ತೀಚೆಗೆ ಯಡಿಯೂರಪ್ಪ (BS Yediyurappa)ನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದಾಗ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗೇ, ಈಗವರ ಪುತ್ರ ಬಿ.ವೈ.ವಿಜಯೇಂದ್ರ(B.Y.Vijayendra) ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬರು ಕಾವೇರಿಯ ನಿವಾಸದ ಸಮೀಪ ಕೈಕೊಯ್ದುಕೊಂಡು ಪ್ರತಿಭಟನೆ ನಡೆಸಿದ್ದಾರೆ.  ಮಂಡ್ಯ ಜಿಲ್ಲೆಯ ಶಿವಕುಮಾರ್ ಎಂಬುವರು ತಮ್ಮ ಕೈಕೊಯ್ದುಕೊಂಡಿದ್ದು, ತಾನು ವಿಜಯೇಂದ್ರ ಅಭಿಮಾನಿ ಎಂದಿದ್ದಾರೆ. ನಮ್ಮ ಸಾಹೇಬರ (ಬಿ.ಎಸ್​.ಯಡಿಯೂರಪ್ಪ) ಮಗನನ್ನು ಸಂಪುಟಕ್ಕೆ ಸೇರಿಸಿಲ್ಲ. ನನಗೆ ತುಂಬ ನೋವಾಗುತ್ತಿದೆ. ನಾನು ಪ್ರಾಣ ಕಳೆದುಕೊಳ್ಳಬೇಕು ಎನ್ನಿಸುತ್ತಿದೆ. ಆದರೆ ನನಗೂ ಕುಟುಂಬ ಇದೆ. ಹಾಗಾಗಿ ಸಾಯುವುದಿಲ್ಲ. ವಿಜಯೇಂದ್ರ ಇಲ್ಲದೆ ಇದ್ದರೆ ಅದು ಸಂಪುಟವೇ ಅಲ್ಲ ಎಂದು ಹೇಳಿದ್ದಾರೆ. 

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂಪುಟ ರಚನೆಗೆ ಗ್ರೀನ್​ ಸಿಗ್ನಲ್​ ನೀಡಲು ಹೈಕಮಾಂಡ್​ ತುಂಬ ವಿಳಂಬ ಮಾಡಿತ್ತು. ಆದರೆ ಬೊಮ್ಮಾಯಿ ವಿಚಾರದಲ್ಲಿ ಹಾಗಾಗಲಿಲ್ಲ. ಮುಖ್ಯಮಂತ್ರಿಯಾದ ವಾರದಲ್ಲಿ ಸಂಪುಟವೂ ರಚನೆಯಾಯ್ತು. ಅದನ್ನೂ ದೆಹಲಿಗೆ ಹೋಗಿ ಚರ್ಚಿಸಿ, ಇಂದು ಬೆಳಗ್ಗೆಯಷ್ಟೇ ಪಟ್ಟಿ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಬಾರಿ ಕೆಲವು ಹಳಬರನ್ನು ಕೈಬಿಟ್ಟು, ಹೊಸಬರನ್ನು ಸೇರಿಸಲಾಗಿದೆ. ಹಾಗೇ, ವಿಜಯೇಂದ್ರ ಬಗ್ಗೆಯೂ ತುಂಬ ಕುತೂಹಲ ಇತ್ತು. ಅದರಲ್ಲೂ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದಕ್ಕೆ ಪ್ರತಿಯಾಗಿ, ವಿಜಯೇಂದ್ರನಿಗೆ ಸಚಿವರ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಮೂಡಿತ್ತು. ಆದರೆ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದಲ್ಲಿ ವಿಜಯೇಂದ್ರ ಇರವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಇದು ಅವರ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

ಇದನ್ನೂ ಓದಿ: Karnataka Cabinet: ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಬೆಂಗಳೂರಿನ ಶಾಸಕರಿವರು

ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್​; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್​ಪ್ರೈಸ್

Follow us on

Related Stories

Most Read Stories

Click on your DTH Provider to Add TV9 Kannada