ಪ್ರವಾಹ ಇಳಿಮುಖವಾಗ್ತಿದ್ದಂತೆ ಕಾಳಜಿ ಕೇಂದ್ರಗಳಿಂದ ಸಂತ್ರಸ್ತರನ್ನು ಹೊರ ಹಾಕಿದ ಅಧಿಕಾರಿಗಳು, ಈ ಕ್ರಮಕ್ಕೆ ಮಹಿಳೆಯರ ಕಣ್ಣೀರು

ಪ್ರವಾಹ ಇಳಿಮುಖವಾಗ್ತಿದ್ದಂತೆ ಕಾಳಜಿ ಕೇಂದ್ರಗಳಿಂದ ಸಂತ್ರಸ್ತರನ್ನು ಹೊರ ಹಾಕಿದ ಅಧಿಕಾರಿಗಳು, ಈ ಕ್ರಮಕ್ಕೆ ಮಹಿಳೆಯರ ಕಣ್ಣೀರು
ಅಧಿಕಾರಿಗಳ ಕ್ರಮಕ್ಕೆ ನೆರೆ ಸಂತ್ರಸ್ತ ಮಹಿಳೆಯರು ಕಣ್ಣೀರು ಹಾಕಿದ್ದಾರೆ

ಪ್ರವಾಹ ಇಳಿಮುಖವಾಗ್ತಿದೆ ಅಂತಾ ಹೇಳಿ ಮನೆಗಳಿಗೆ ವಾಪಾಸ್ ಹೋಗಿ ಎಂದು ಅಧಿಕಾರಿಗಳು ಕಳಿಸುತ್ತಿದ್ದಾರೆ. ಕೃಷ್ಣಾ ನದಿ ಪ್ರವಾಹ ಬಂದಿದ್ದಕ್ಕೆ ಊರು ಬಿಟ್ಟು ಕಾಳಜಿ ಕೇಂದ್ರಕ್ಕೆ ಬಂದಿದ್ದ ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಮಾಂಜರಿ ಗ್ರಾಮದ ನೆರೆ ಸಂತ್ರಸ್ತರು ಕಳೆದ ಹತ್ತು ದಿನಗಳಿಂದ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದರು.

TV9kannada Web Team

| Edited By: Ayesha Banu

Aug 04, 2021 | 3:38 PM

ಬೆಳಗಾವಿ: ಕಳೆದ ಕೆಲ ದಿನಗಳಿಂದ ಜಿಲ್ಲೆಯ ಜನ ನೆರೆ ಹಾನಿಗೆ ಒಳಗಾಗಿದ್ದರು. ಹೀಗಾಗಿ ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿತ್ತು. ಆದರೆ ಈಗ ಏಕಾಏಕಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿರುವ ಕಾಳಜಿ ಕೇಂದ್ರದಿಂದ ಸಂತ್ರಸ್ತರನ್ನು, ಅಧಿಕಾರಿಗಳು ಖಾಲಿ ಮಾಡಿಸುತ್ತಿದ್ದಾರೆ.

ಪ್ರವಾಹ ಇಳಿಮುಖವಾಗ್ತಿದೆ ಅಂತಾ ಹೇಳಿ ಮನೆಗಳಿಗೆ ವಾಪಾಸ್ ಹೋಗಿ ಎಂದು ಅಧಿಕಾರಿಗಳು ಕಳಿಸುತ್ತಿದ್ದಾರೆ. ಕೃಷ್ಣಾ ನದಿ ಪ್ರವಾಹ ಬಂದಿದ್ದಕ್ಕೆ ಊರು ಬಿಟ್ಟು ಕಾಳಜಿ ಕೇಂದ್ರಕ್ಕೆ ಬಂದಿದ್ದ ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಮಾಂಜರಿ ಗ್ರಾಮದ ನೆರೆ ಸಂತ್ರಸ್ತರು ಕಳೆದ ಹತ್ತು ದಿನಗಳಿಂದ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದರು. ಆದ್ರೆ ಈಗ ಪ್ರವಾಹ ಕಡಿಮೆಯಾಗಿದೆ ಎಂದು ಏಕಾಏಕಿ ಹೊರ ಹಾಕುತ್ತಿದ್ದಾರೆ. ಅಧಿಕಾರಿಗಳ ಕ್ರಮಕ್ಕೆ ನೆರೆ ಸಂತ್ರಸ್ತ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ನಮ್ಮನ್ನ ಹೊರ ಹಾಕಿದ್ರೇ ಎಲ್ಲಿಗೆ ಹೋಗಬೇಕು ಮನೆಗಳೆಲ್ಲವೂ ಬಿದ್ದಿವೆ. ಈಗ ಊರಿಗೆ ಹೋದ್ರೇ ಎಲ್ಲಿ ಉಳಿಯಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾತ್ರೆ ಸೇರಿದಂತೆ ದವಸ ಧಾನ್ಯಗಳು ಕೊಚ್ಚಿ ಹೋಗಿವೆ. ಊಟಕ್ಕೆ ಎನು ಮಾಡಬೇಕು ಅಂತಾ ಕಣ್ಣೀರಿಟ್ಟಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಉಂಟಾದ ಪ್ರವಾಹದಿಂದ ಅಪಾರ ಪ್ರಮಾಣ ಕಬ್ಬು, ಶೇಂಗಾ, ಉದ್ದು, ತೊಗರಿ ಸೇರಿದಂತೆ ಇತರೆ ಬೆಳೆಗಳು ಜಲಾವೃತವಾಗಿದ್ದು, ಗ್ರಾಮಸ್ಥರು ಪ್ರವಾಹದಿಂದ ತತ್ತರಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿ ನೀರು ನುಗ್ಗಿ ಮ್ಯಾದರಗಡ್ಡೆ ಜಲಾವೃತಗೊಂಡಿದ್ದು, ಜನರು ಪರದಾಟ ಪಡುತ್ತಿದ್ದಾರೆ. ದಿನಬಳಕೆ ವಸ್ತುಗಳಿಲ್ಲದೆ ಸುಮಾರು 20 ಕುಟುಂಬಗಳು ಪರದಾಡುತ್ತಿವೆ. ಸರ್ಕಾರ ನಮ್ಮನ್ನು ಶಾಶ್ವತವಾಗಿ ಸ್ಥಳಾಂತರ ಮಾಡುತ್ತಿಲ್ಲ. ಪರಿಹಾರದ ಹೆಸರಲ್ಲಿ ಅಕ್ರಮ ನಡೆಸುತ್ತಿದ್ದಾರೆ ಅಂತ ನಿವಾಸಿಗಳು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

ನದಿ ನೀರಿನ ಹರಿವು ಕಡಿಮೆಯಾದರೂ ತಪ್ಪದ‌ ಗೋಳು ಹಾವೇರಿ ಜಿಲ್ಲೆಯ ಸವಣೂರು, ರಟ್ಟೀಹಳ್ಳಿ, ಹಾವೇರಿ, ಹಾನಗಲ್ ತಾಲೂಕಿನ ಹಲವೆಡೆ ಜನರು ಪರದಾಟ ಪಡುತ್ತಿದ್ದಾರೆ. ನದಿಗಳ ನೀರಿನ ಹರಿವು ಹೆಚ್ಚಾಗಿ ಬ್ರಿಡ್ಜ್ ಕಂ ಬಾಂದಾರ್ಗಳ ರಸ್ತೆಗಳ ಮೇಲೆ ನೀರು ಹರಿಯುತಿತ್ತು. ನೀರಿನ ಹರಿವು ಕಡಿಮೆ ಆಗುತ್ತಿದ್ದಂತೆ ಬ್ರಿಡ್ಜ್ ಕಂ ಬಾಂದಾರ್ಗಳ ರಸ್ತೆಗಳನ್ನು ತೆರವುಗೊಳಿಸಲಾಗಿದೆ. ಆದರೆ ನದಿ ನೀರಿನ ಹರಿವಿಗೆ ರಸ್ತೆಗಳು ಕಿತ್ತು ಹೋಗಿದ್ದು, ಓಡಾಡುವುದಕ್ಕೆ ಜನರು ಪರದಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರವಾಹಕ್ಕೆ ನಲುಗಿದ ರೈತರ ಬದುಕು; ಬೆಳಗಾವಿಯಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ

Follow us on

Related Stories

Most Read Stories

Click on your DTH Provider to Add TV9 Kannada