ಸಿಎಂ ಬೊಮ್ಮಾಯಿ ಸಂಪುಟ ಸಂಕಟ: ಚೊಚ್ಚಲ ಸಂಪುಟ ರಚನೆಗೂ ಮುನ್ನವೇ ಮಾಮನಿ ರಾಜೀನಾಮೆ ಬೆದರಿಕೆ

ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ, ಸಚಿವ ಸ್ಥಾನ ಸಿಗದಿದ್ರೆ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಹಾಗೂ ರಾಜೀನಾಮೆ ನೀಡುವುದಾಗಿ ಆನಂದ ಮಾಮನಿ ಮಾಡಿದ್ದಾರೆ ಎನ್ನಲಾದ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಿಎಂ ಬೊಮ್ಮಾಯಿ ಸಂಪುಟ ಸಂಕಟ: ಚೊಚ್ಚಲ ಸಂಪುಟ ರಚನೆಗೂ ಮುನ್ನವೇ ಮಾಮನಿ ರಾಜೀನಾಮೆ ಬೆದರಿಕೆ
ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ
Follow us
TV9 Web
| Updated By: ಆಯೇಷಾ ಬಾನು

Updated on:Aug 04, 2021 | 1:00 PM

ಬೆಳಗಾವಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮೂರು ದಿನಗಳ ಕಾಲ ದೆಹಲಿಯಲ್ಲಿ ಸೆಣೆಸಾಡಿ ಅಂತಿಮ ಹಂತದ ಸಚಿವ ಸಂಪುಟದ ಲಿಸ್ಟ್ ಸಿದ್ಧ ಪಡಿಸಿದ್ದಾರೆ. ಇಂದು ಆ ಲಿಸ್ಟ್ನಲ್ಲಿರುವ ನೂತನ ಸಚಿವರ ಪ್ರಮಾಣ ವಚನಕ್ಕೆ ಬೆಂಗಳೂರಿನ ರಾಜ ಭವನ ಸಿಂಗಾರಗೊಳ್ಳುತ್ತಿದೆ. ಇತ್ತ ಬೊಮ್ಮಾಯಿ ಸಂಪುಟ(Bommai Cabinet) ಸೇರಲು ಹಲವರು ತುದಿಗಾಲಲ್ಲಿ ನಿಂತಿದ್ರೆ. ಇನ್ನೂ ಕೆಲವರು ಸಂಪುಟದಿಂದ ಔಟ್ ಆಗೋದು ಪಕ್ಕಾ ಆಗಿದೆ. ಹೀಗೆ ಸಂಪುಟದಿಂದ ಹೊರ ಹೋಗೋರ ಲಿಸ್ಟ್ನಲ್ಲಿ ಹಲವು ಹಿರಿಯ ಸಚಿವರೇ ಇದ್ದಾರೆ.

ಸಚಿವ ಸ್ಥಾನ ಸಿಗದಿದ್ರೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಲಿಸ್ಟ್ ಸಿದ್ಧವಾಗುತ್ತಿದ್ದಂತೆ ಅನೇಕರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಸಂಪುಟ ಸೇರಲಿರುವ ಕೆಲ ಶಾಸಕರಿಗೆ ಸಿಎಂ ಬೊಮ್ಮಾಯಿ ಕರೆ ಮಾಡಿದ್ದಾರೆನ್ನಲಾಗಿದೆ. ಆದ್ರೆ ಕರೆ ಬಾರದ ಶಾಸಕರು ಟೆನ್ಶನ್ ಆಗಿದ್ದಾರೆ. ಇತ್ತ ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ(Anand Mamani), ಸಚಿವ ಸ್ಥಾನ ಸಿಗದಿದ್ರೆ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಹಾಗೂ ರಾಜೀನಾಮೆ ನೀಡುವುದಾಗಿ ಆನಂದ ಮಾಮನಿ ಮಾಡಿದ್ದಾರೆ ಎನ್ನಲಾದ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಚಿವ ಸ್ಥಾನ ಸಿಗದಿದ್ರೆ ನಾಳೆ ಸಚಿವರ ಪ್ರಮಾಣವಚನಕ್ಕೂ ಮುನ್ನವೇ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಆನಂದ್ ಮಾಮನಿ‌ ನಿರ್ಧರಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ಮಾಮನಿ‌ ಮಾಹಿತಿ ನೀಡಿದ್ದಾರೆ. 12 ದಿನದಿಂದ ಸರ್ಕಾರಿ ಕಾರು ಸಹ ಬಳಸುತ್ತಿಲ್ಲ. ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ನಾನು ಬದ್ಧ. ಎಲ್ಲರ ನಿರ್ಣಯದಿಂದ ನಾನು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಬಂದಿದ್ದೆ. ನನಗೆ ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿದ್ದೇನೆ. ನನಗೆ ಈವರೆಗೂ ದೂರವಾಣಿ ಕರೆ ಬಂದಿಲ್ಲ. ನಾನು ಸಿಎಂ, ಬಿಎಸ್‌ವೈರನ್ನು ಭೇಟಿಯಾಗಿ ಮಾತನಾಡುವೆ. ಬಳಿಕ ನನ್ನ ಬೆಂಬಲಿಗರ ಜತೆ ಮಾತನಾಡಿ ನಿರ್ಧರಿಸುತ್ತೇನೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದು ಮಾಮನಿ ತಿಳಿಸಿದ್ದಾರೆ.

ಸಂಪುಟ ಸೇರಲಿರುವ ಶಾಸಕರಿಗೆ ಸಿಎಂ ಬೊಮ್ಮಾಯಿ ಕರೆ ಯಾರಿಗೆ ಮಂತ್ರಿಗಿರಿ ಸಿಗುತ್ತೆ…? ಯಾರಿಗೆ ಸಚಿವರಾಗೋ ಭಾಗ್ಯ ಒಲಿದು ಬರುತ್ತೆ ಅಂತಾ ಕೊನೇ ಕ್ಷಣದ ಲೆಕ್ಕಾಚಾರದ ನಡುವೆ ಸಂಪುಟ ಸೇರಲಿರುವ ಕೆಲ ಶಾಸಕರಿಗೆ ಸಿಎಂ ಬೊಮ್ಮಾಯಿ ಕರೆ ಮಾಡಿದ್ದಾರೆನ್ನಲಾಗಿದೆ. ಶಾಸಕರಾದ ಮುರುಗೇಶ್ ನಿರಾಣಿ, ಕೆ.ಎಸ್. ಈಶ್ವರಪ್ಪ, ಬಿ.ಸಿ. ಪಾಟೀಲ್ಗೆ ಸಿಎಂ ಬೊಮ್ಮಾಯಿ ಅಧಿಕೃತವಾಗಿದೆ ಕರೆ ಮಾಡಿದ್ದಾರೆ ಅಂತಾ ಶಾಸಕರು ಬಹಿರಂಗಪಡಿಸಿದ್ದಾರೆ. ಸಿಎಂ ಕರೆ ಬಂದಿರೋ ಬಗ್ಗೆ ಬಿ.ಸಿ. ಪಾಟೀಲ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಶಾಸಕ ಮುರುಗೇಶ್ ನಿರಾಣಿ ಹಾಗೂ ಈಶ್ವರಪ್ಪ ಟಿವಿ9ಗೆ ನೇರವಾಗಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಶಾಸಕರಾದ ಆರ್ ಅಶೋಕ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಪೂರ್ಣಿಮಾ ಶ್ರೀನಿವಾಸ್, ಅಶ್ವತ್ಥ್ ನಾರಾಯಣ, ಬಿ.ಶ್ರೀರಾಮುಲು ಸೇರಿದಂತೆ ಹಲವರು ಸಿಎಂ ಕರೆಗಾಗಿ ಇನ್ನೂ ಕಾಯುತ್ತಾ ಕೂತಿದ್ದಾರೆ.

ನೂತನ ಸಚಿವರ ಪ್ರಮಾಣಕ್ಕೆ ಮಧ್ಯಾಹ್ನ 2.15ರ ಮುಹೂರ್ತ ನೂತನ ಸಚಿವ ಸಂಪುಟ ರಚನೆ ಕಂಪ್ಲೀಟ್ ಆಗಿ ಫೈನಲ್ ಆಗಿದ್ದು, ಇನ್ನೇನು ಸಚಿವರು ಪ್ರಮಾಣವಚನ ಸ್ವೀಕರಿಸೋದಷ್ಟೇ ಬಾಕಿ ಇದೆ. ಈಗಾಗಲೇ ಕೆಲ ಶಾಸಕರಿಗೆ ಪ್ರಮಾಣವಚನ ಸ್ವೀಕಾರಕ್ಕೆ ರೆಡಿಯಾಗುವಂತೆ ಸಿಎಂ ಸಂದೇಶ ರವಾನಿಸಿದ್ದಾರೆನ್ನಲಾಗಿದೆ. ನೂತನ ಸಚಿವ ಪ್ರಮಾಣವಚನಕ್ಕೆ ಮಧ್ಯಾಹ್ನ 2.15ರ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಇವತ್ತು ಮಧ್ಯಾಹ್ನ ಆಗುವಷ್ಟರಲ್ಲಿ ಬೊಮ್ಮಾಯಿ ಸಂಪುಟ ರೆಡಿಯಾಗಿರಲಿದೆ.

ಇದನ್ನೂ ಓದಿ: ಹಾವೇರಿ: ಕ್ರಿಕೆಟ್ ಆಡುತ್ತಿದ್ದ ಹುಡುಗರಿಂದ ಬದುಕಿತು ಬಡಜೀವ, ನಾಯಿಗಳ ದಾಳಿಯಿಂದ ಜಿಂಕೆಯ ರಕ್ಷಣೆ

Published On - 9:00 am, Wed, 4 August 21