ಚಿಕ್ಕಬಳ್ಳಾಪುರ : ನಿರಂತರ ಮಳೆಗೆ ಹೂ ಬೆಳೆ ನಾಶ, ಬಾಡಿತು ಹೂ ಬೆಳೆಗಾರರ ಬದುಕು

ರಾಜ್ಯದ ಕರಾವಳಿ ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯಲ್ಲಿ ಧಾರಾಕರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆ ಅದರ ದುಷ್ಪರಿಣಾಮ ಚಿಕ್ಕಬಳ್ಳಾಫುರ ಜಿಲ್ಲೆಗೆ ತಟ್ಟಿದೆ. ಅಷ್ಟಕ್ಕೂ ಬಯಲು ಸೀಮೆಯ ಚಿಕ್ಕಬಳ್ಳಾಪುರಕ್ಕೂ ಹಾಗೂ ಕರಾವಳಿ ಮಲೆನಾಡು ಉತ್ತರ ಕರ್ನಾಟಕಕ್ಕೂ ಅದೇ ಸಂಬಂಧ ಅಂತೀರಾ? ಇಲ್ಲಿದೆ ನೋಡಿ.

ಚಿಕ್ಕಬಳ್ಳಾಪುರ : ನಿರಂತರ ಮಳೆಗೆ ಹೂ ಬೆಳೆ ನಾಶ, ಬಾಡಿತು ಹೂ ಬೆಳೆಗಾರರ ಬದುಕು
ಹೂಗಳು ಮಾರಾಟವಾಗದೇ ತಿಪ್ಪೆಗೆ ಸುರಿದ ಚಿಕ್ಕಬಳ್ಳಾಪುರ ರೈತರು
Edited By:

Updated on: Jul 28, 2023 | 7:25 AM

ಚಿಕ್ಕಬಳ್ಳಾಪುರ, ಜು.27: ನಗರದ ಹೂ ಮಾರುಕಟ್ಟೆಯಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಚಿನ್ನದಂಥಹ ಹೂಗಳನ್ನು(Flowers) ತಿಪ್ಪೆಗೆ ಸುರಿದು, ರೈತರ ಕಥೆ ಇಷ್ಟೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯಲ್ಲಿ ರಾಜ್ಯಕ್ಕೆ ಆಗುವಷ್ಟು ತರೇವಾರಿ ಹೂಗಳನ್ನು ಬೆಳೆದು ರಾಜ್ಯದಾದ್ಯಂತ ರಪ್ತು ಮಾಡುತ್ತಾರೆ. ಆದ್ರೆ, ಈಗ ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆ ಬೆಳೆದ ಹೂಗಳನ್ನು ರಪ್ತು ಮಾಡಲು ಆಗುತ್ತಿಲ್ಲ. ಜೊತೆಗೆ ತುಂತುರು ಮಳೆಯಿಂದ ಹೂಗಳು ಹೊದ್ದೆಯಾಗಿರುತ್ತದೆ, ಕೆಲವೆಡೆ ರಸ್ತೆಗಳು ಬಂದ್ ಆಗಿವೆ. ಇನ್ನೂ ಕೆಲವೆಡೆ ಶುಭ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಹೂ ಗಳ ಬೇಡಿಕೆ ಕುಸಿದು ಬೆಲೆ ಕಳೆದುಕೊಂಡಿವೆ.

ಹೂಗಳನ್ನು ತಿಪ್ಪೆಗೆ ಸುರಿಯುತ್ತಿರುವ ರೈತರು

ಇನ್ನೂ ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯ ಅಧ್ಯಕ್ಷ ರವೀಂದ್ರ ಅವರು ಮಾತನಾಡಿ ‘15 ದಿನಗಳಿಂದ ವಿಪರೀತ ಮಳೆಯಿದ್ದು, ಸಾಗಾಟ ಮಾಡಲು ಕಷ್ಟವಾಗುತ್ತಿದೆ. ಹಾಗೂ ಮಾರುಕಟ್ಟೆಗೆ ರಫ್ತು ಮಾಡಿದರೂ ಹೂಗಳಲ್ಲಿ ಡ್ಯಾಮೇಜ್​​ ಬರುತ್ತಿರುವ ಕಾರಣ ಯಾರೂ ತೆಗೆದುಕೊಳ್ಳುತ್ತಿಲ್ಲ. ಮಳೆಯಿಂದ ಹೂಗಳು ಕೊಳೆತು ಹೋಗುತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ತರೇವಾರಿ ಸೇವಂತಿ, ಕಲರ್ ಪುಲ್ ರೋಜ್​ಗಳು, ಚೆಂಡೂ ಹೂ, ಕನಕಾಂಬರ, ಸುಗಂಧರಾಜ ಬೆಳೆಯುತ್ತಾರೆ. ಮಳೆಯಾಗುವ ಹಿಂದೆ 200 ರೂಪಾಯಿ ಇದ್ದ ಕೆ.ಜಿ ಹೂಗಳು ಈಗ ಕೇವಲ 50 ರೂಪಾಯಿಗೆ ಬಂದಿದೆ. ಇದರಿಂದ ರೈತರು ಮಾರಾಟವಾಗದ ಹೂಗಳನ್ನು ತಿಪ್ಪೆಗೆ ಸುರಿಯುತ್ತಿದ್ದಾರೆ ಎಂದರು.

ಇದನ್ನೂ ಓದಿ:Shivamogga Airport: ಶಿವಮೊಗ್ಗ ಬೆಂಗಳೂರು ಮಧ್ಯೆ ಇಂಡಿಗೊ ವಿಮಾನ ಸಂಚಾರಕ್ಕೆ ಕೊನೆಗೂ ಮುಹೂರ್ತ ನಿಗದಿ; ಇಲ್ಲಿದೆ ವಿವರ

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರೀಕ್ಷೆಯಂತೆ ಮಳೆ ಇಲ್ಲ, ಹೌದು ವಾಡಿಕೆಯ ಮಳೆಯೂ ಆಗಿಲ್ಲವಾಗಿತ್ತು. ಆದ್ರೆ, ಹನಿ ನೀರು ಬಸಿದು ಹೂಗಳನ್ನು ಬೆಳೆಯಲಾಗಿತ್ತು. ಇದೀಗ ಅದಕ್ಕೂ ಉತ್ತಮ ಬೆಲೆ ಇಲ್ಲದೆ ರೈತರು ಕಂಗಲಾಗಿದ್ದು, ಕೆ.ಜಿಗೆ 50 ರೂನಂತೆ ಮಾರಾಟ ಮಾಡಿ, ಮಾರಾಟವಾಗದ ಹೂವನ್ನ ತಿಪ್ಪೆಗೆ ಎಸೆದು ಹೋಗುತ್ತಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:21 am, Fri, 28 July 23