ಅನ್ಯ ಜಾತಿಯ ಪ್ರೇಮಿಗಳು ಪರಾರಿ; ಯುವತಿ ಕಡೆಯವರಿಂದ ಪ್ರಿಯತಮನ ತಮ್ಮನ ಆಟೋಗೆ ಬೆಂಕಿ!

ಪ್ರೇಮಿಗಳಿಬ್ಬರು ಊರಿಂದ ಪರಾರಿಯಾಗಿ ಮದುವೆಯಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿಯ ಕಡೆಯವರು ಆಕೆಯ ಪ್ರೀಯತಮನ ತಮ್ಮನ ಆಟೋಗೆ ಬೆಂಕಿ ಹಾಕಿ ಪ್ರಾಣ ಬೆದರಿಕೆ ಹಾಕಿದ ಘಟನೆ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಮೇಲಿನ ಅಪ್ಪಿರೆಡ್ಡಿಹಳ್ಳಿ‌ ಗ್ರಾಮದಲ್ಲಿ ನಡೆದಿದೆ.

ಅನ್ಯ ಜಾತಿಯ ಪ್ರೇಮಿಗಳು ಪರಾರಿ; ಯುವತಿ ಕಡೆಯವರಿಂದ ಪ್ರಿಯತಮನ ತಮ್ಮನ ಆಟೋಗೆ ಬೆಂಕಿ!
ಪ್ರೇಮಿಗಳು
Updated By: ಕಿರಣ್ ಹನುಮಂತ್​ ಮಾದಾರ್

Updated on: Nov 30, 2023 | 5:58 PM

ಚಿಕ್ಕಬಳ್ಳಾಪುರ, ನ.30: ಆ ಯುವಕ-ಯುವತಿ ಜಾತಿಯ ಎಲ್ಲೇ ಮೀರಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿದ್ದರು. ಅವರಿಬ್ಬರ ಮದುವೆ (Marriage)ಗೆ ಯುವತಿಯ ಕಡೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಕಡೆಗೆ ಇಬ್ಬರು ಊರಿಂದ ಪರಾರಿಯಾಗಿ ಮದುವೆಯಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿಯ ಕಡೆಯವರು ಆಕೆಯ ಪ್ರೀಯತಮನ ತಮ್ಮನ ಆಟೋಗೆ ಬೆಂಕಿ ಹಾಕಿ ಪ್ರಾಣ ಬೆದರಿಕೆ ಹಾಕಿದ ಘಟನೆ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಮೇಲಿನ ಅಪ್ಪಿರೆಡ್ಡಿಹಳ್ಳಿ‌ ಗ್ರಾಮದಲ್ಲಿ ನಡೆದಿದೆ.

ಅನ್ಯ ಜಾತಿಯ ಪ್ರೇಮಿಗಳ ಮದುವೆಗೆ ಹೊತ್ತಿ ಉರಿದ ಆಟೋ!

ಮೇಲಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದ ರಾಮಕೃಷ್ಣಪ್ಪ-ಆನಂದಮ್ಮ ದಂಪತಿಗಳ ಪುತ್ರಿ ಮೌನಿಕ ಹಾಗೂ ಅವುಲಪ್ಪ-ನಾರಾಯಣಮ್ಮ ದಂಪತಿಯ ಪುತ್ರ ಸುರೇಶ್ ಕುಮಾರ್ ಜಾತಿಯ ಎಲ್ಲೆ ಮೀರಿ ಮದುವೆಯಾಗಿದ್ದರು. ಮೌನಿಕ, ಪಿಯುಸಿ ಓದಿ ಮನೆಯಲ್ಲಿದ್ದರೆ, ಸುರೇಶ್ ಕುಮಾರ್ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಈ ಪ್ರೇಮಿಗಳಿಬ್ಬರು ಎದುರು-ಬದುರು ಮನೆಯವರಾಗಿದ್ದರಿಂದ ನೋಡ ನೋಡುತ್ತಲೇ ಪ್ರೀತಿ ಚಿಗುರಿದೆ. ಪ್ರೀತಿಸಿದ ಜೋಡಿಯ ಮದುವೆಗೆ ಜಾತಿ ಅಡ್ಡ ಬಂದ ಕಾರಣಕ್ಕೆ ಪ್ರೇಮಿಗಳಿಬ್ಬರು ಪರಾರಿಯಾಗಿ ಮದುವೆಯಾಗಿದ್ದಾರೆ.

ಇದನ್ನೂ ಓದಿ:ಮದ್ವೆಯಾಗಿದ್ದರೂ ಪ್ರಿಯಕರನ ಜತೆ ಲಿವ್​ ಇನ್ ರಿಲೇಷನ್ ಶಿಪ್: ಏಕಾಏಕಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಇದು ಹುಡುಗಿಯ ಪೋಷಕರ ಪಿತ್ತ ನೆತ್ತಿಗೇರಿಸುವಂತಾಗಿದೆ. ಈ ಹಿನ್ನಲೆ  ಯುವತಿಯ ಕಡೆಯವರು ಸುರೇಶ್ ಕುಮಾರ್, ತಮ್ಮ ಮೋಹನ್ ಎಂಬುವವರ ಆಟೋಗೆ ಬೆಂಕಿ ಹಚ್ಚಿದ್ದಾರೆಂದು ಆರೋಪಿಸಲಾಗಿದೆ. ಇನ್ನು ಹುಡುಗಿಯ ಕಡೆಯವರು ಪ್ರಬಲವಾಗಿದ್ದು, ದಾಳಿ ಮಾಡುವ ಭೀತಿಯಲ್ಲಿ ಹುಡುಗನ ಕಡೆಯವರಿದ್ದಾರೆ. ಪರಿಣಾಮ ತಲೆ ಮರೆಸಿಕೊಂಡು ಪ್ರಾಣ ರಕ್ಷಿಸಿಕೊಳ್ಳುವಂತಾಗಿದೆ. ಜಾತಿ‌ ಮೀರಿದ ಪ್ರೀತಿ ಮದುವೆ ಹಂತಕ್ಕೆ ಹೋದ ಪರಿಣಾಮ, ಮೇಲಿನ ಅಪ್ಪಿರೆಡ್ಡಿಹಳ್ಳಿ‌ ಗ್ರಾಮದಲ್ಲಿ ಆಕ್ರೋಶದ ಬೆಂಕಿ ಹೊಗೆಯಾಡುತ್ತಿದೆ. ಇನ್ನು ಈ ನವಜೋಡಿಗಳಿಗೆ ಪ್ರಾಣ ಬೆದರಿಕೆ ಇದ್ದು, ಭದ್ರತೆಯ ಹಿನ್ನೆಲೆಯಲ್ಲಿ ನಾಪತ್ತೆಯಲ್ಲಿದ್ದಾರಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Thu, 30 November 23