ಪ್ರೀತಿಗೆ ಮನೆಯವರ ವಿರೋಧ, ಓಡಿ ಹೋಗಿ ಮದುವೆಯಾದ ಪ್ರೇಮಿಗಳು; ಪೋಷಕರಿಂದ ಜೀವ ಬೆದರಿಕೆ

ಇವರಿಬ್ಬರು ಒಂದೇ ಗ್ರಾಮದ ಯುವಕ, ಯುವತಿ. ಅದರಲ್ಲೂ ಎದುರು ಬದುರು ಮನೆಯಲ್ಲಿದ್ದ ಅವರಿಬ್ಬರು ಸ್ನೇಹಿತರಾಗಿದ್ದರು. ಅವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಪ್ರೇಮ ಹಕ್ಕಿಗಳಿಗೆ ಮನೆಯವರೇ ವಿಲನ್ ಆಗಿದ್ದರು. ಯುವತಿಯ ಮನೆಯವರ ವಿರೋಧ ತುಸು ಹೆಚ್ಚೇ ಇತ್ತು. ಹೀಗಾಗಿ ಇಬ್ಬರು ಪ್ರೇಮಿಗಳು ಮನೆಯಿಂದ ಓಡಿ ಹೋಗಿ ದರ್ಗಾವೊಂದರಲ್ಲಿ ವಿವಾಹವಾಗಿದ್ದಾರೆ. ಇದೀಗ ಯುವತಿಯ ಮನೆಯವರಿಂದ, ಯುವಕನ ಕುಟುಂಬದವರಿಗೆ ಜೀವ ಬೆದರಿಕೆಯಂತೆ. ರಕ್ಷಣೆಗಾಗಿ ಈ ನವಜೋಡಿ ಎಸ್ಪಿ ಕಚೇರಿಯ ಬಾಗಿಲು ತಟ್ಟಿದ್ದಾರೆ.

ಪ್ರೀತಿಗೆ ಮನೆಯವರ ವಿರೋಧ, ಓಡಿ ಹೋಗಿ ಮದುವೆಯಾದ ಪ್ರೇಮಿಗಳು; ಪೋಷಕರಿಂದ ಜೀವ ಬೆದರಿಕೆ
ಯುವ ಪ್ರೇಮಿಗಳು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 17, 2023 | 10:16 PM

ವಿಜಯಪುರ, ನ.17: ಜಿಲ್ಲೆಯ ತಾಳಿಕೋಟೆ(Talikoti) ಪಟ್ಟಣದ ಕೆಂಬಾವಿ ಕಾಲೋನಿಯ ನಿವಾಸಿಗಳಾದ ಯುವಕ ಇಸಾಕ್‌ ಜನ್ನಳ್ಳಿ  ಹಾಗೂ ಯುವತಿ ಸುಮಯ್ಯ ಡೋಣಿ ಎಂಬುವವರ ಮಧ್ಯೆ ಸ್ನೇಹ ಹುಟ್ಟಿ. ಅದು ಪ್ರೀತಿ(Love)ಯಾಗಿ ಬೆಳೆದು ಪರಸ್ಪರ ಇಷ್ಟಪಟ್ಟಿದ್ದರು. ಇವರ ಸಂಬಂಧಕ್ಕೆ ಯುವತಿ ಸುಮಯ್ಯಾ ಕುಟುಂಬದವರು ತೀವ್ರ ವಿರೋಧ ಮಾಡಿದ್ದರು. ಈ ಹಿನ್ನಲೆ ಇಸಾಕ್ ಹಾಗೂ ಸುಮಯ್ಯಾ ಮನೆ ಬಿಟ್ಟು, ಓಡಿ ಹೋಗಿ ಮುಸ್ಲಿಂ ಧರ್ಮದ ನಿಯಮಗಳಂತೆ ವಿಜಯಪುರದ ದರ್ಗಾವೊಂದರಲ್ಲಿ ನಿಖಾ(ಮದುವೆ) ಮಾಡಿಕೊಂಡಿದ್ದರು. ಇದು ಸುಮಯ್ಯಾ ಪೋಷಕರ ಪಿತ್ತನೆತ್ತಿಗೇರುವಂತೆ ಮಾಡಿದೆ. ಇದೀಗ ನಿಮ್ಮನ್ನು ಹಾಗೂ ಯುವಕ ಇಸಾಕ್ ಮನೆಯವರನ್ನು ಕೊಲೆ ಮಾಡುತ್ತೇವೆ ಎಂದು ಸುಮ್ಯಯಾ ಪೋಷಕರು ಬೆದರಿಕೆ ಹಾಕಿದ್ದಾರಂತೆ.

ಈ ವಿಚಾರವಾಗಿ ಇಸಾಕ್ ಮೇಲೆ ಸುಮಯ್ಯಾಳನ್ನು ಅಪಹರಣ ಮಾಡಿದ್ಧಾನೆಂದು ಯುವತಿಯ ಪೋಷಕರು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರಂತೆ. ತಾಳಿಕೋಟೆ ಪೊಲೀಸರಿದ ಇಸಾಕ್ ಕುಟುಂಬದವರಿಗೆ ಹಿಂಸೆ ಕೊಡಿಸುತ್ತಿದ್ದಾರೆಂದು ಇವರು ಆರೋಪ ಮಾಡಿದ್ದಾರೆ. ಹೀಗಾಗಿ ನಮಗೆ ರಕ್ಷಣೆಬೇಕೆಂದು ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ನಾವುಗಳು, ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ. ನಮ್ಮ ಮನೆಯವರಿಂದ ನಮಗೆ ಜೀವ ಬೆದರಿಕೆ ಇದೆ ಎಂದು ಯುವತಿ ಆರೋಪ ಮಾಡಿದ್ದಾಳೆ.

ಇದನ್ನೂ ಓದಿ:ಅನೈತಿಕ ಸಂಬಂಧ; ಪ್ರೀತಿಸಿ ಮದುವೆಯಾದ ಹೆಂಡತಿಗೆ ಕಟ್ಟಿದ ಚಟ್ಟ, ಏನಿದು ಕಥೆ ಅಂತೀರಾ?ಈ ಸ್ಟೋರಿ ಓದಿ

ತಾಳಿಕೋಟೆಯ ಕೆಂಬಾವಿ ಕಾಲೋನಿಯಲ್ಲಿ ಇಸಾಕ್‌ ಅಜ್ಜ-ಅಜ್ಜಿ ಇರುತ್ತಾರಂತೆ. ಇವರ ಮನೆ ಎದುರಲ್ಲೇ ಸುಮಯ್ಯ ಮನೆ ಇದೆ. ಇಸಾಕ್‌ ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿ ಮೆಕಾನಿಕಲ್‌ ಕೆಲಸ ಮಾಡುತ್ತಿದ್ದರೆ, ಇತ್ತ ಸುಮಯ್ಯ ಈಗಷ್ಟೇ ಭೀ ಪಾರ್ಮಸಿ ಓದಿ ಮುಗಿಸಿದ್ದು, ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದಾಳೆ. ಇಷ್ಟರ ಮಧ್ಯೆ ಇವರಿಬ್ಬರು ಮನೆಯಿಂದ ಓಡಿ ಹೋಗಿ ಮದುವೆಯಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಆದರೆ, ಯುವತಿ ಸುಮಯ್ಯಳ ಕುಟುಂಬದವರು ಇಸಾಕ್ ಬಡನನಾಗಿದ್ದು, ಗ್ಯಾರೇಜ್ ಕೆಲಸ ಮಾಡುತ್ತಾನೆ. ನಾವು ಶ್ರೀಮಂತರು ಎಂದು ಇವರಿಬ್ಬರ ಮದುವೆಗೆ ವಿರೋಧ ಮಾಡುತ್ತಿದ್ಧರಂತೆ. ಮೇಲಾಗಿ ಪ್ರಭಾವ ಉಳ್ಳವರಾಗಿದ್ದು, ಇಸಾಕ್ ಕುಟುಂಬದ ಮೇಲೆ ಒತ್ತಡ ಹಾಕಿ ಬೆದರಿಕೆ ಹಾಕುತ್ತಿದ್ದಾರಂತೆ. ಇದರಿಂದ ನಮಗೆ ರಕ್ಷಣೆ ಬೇಕು. ತಾಳಿಕೋಟೆ ಪೊಲೀಸರ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಎಸ್ಪಿ ಅವರಿಗೆ ಭೇಟಿಯಾಗಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ಪ್ರೇಮಿಸಿ ಮದುವೆಯಾದ ಇಸಾಕ್ ಹಾಗೂ ಸುಮಯ್ಯ ವಯಸ್ಕರಾಗಿದ್ದು, ಎಸ್ಪಿ ಋಷಿಕೇಶ ಸೋನೆವಣೆ ಅವರು ಸಮಸ್ಯೆಯನ್ನು ಆಲಿಸಿದ್ದಾರೆ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದರ ಬಗ್ಗೆಯೂ ಮಾಹಿತಿ ಪಡೆದು ರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ಹೇಳಿಕೆ ನೀಡದ ಅವರು, ಕಾನೂನು ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಒಂದೇ ಗ್ರಾಮ, ಒಂದೇ ಸಮುದಾಯದವರಾಗಿದ್ದರೂ ಸಹ ಬಡವ-ಶ್ರೀಮಂತ ಎಂಬ ಭಾವನೇ ಇಲ್ಲಿ ಪ್ರೇಮಿಗಳಿಗೆ ಸಮಸ್ಯೆಯನ್ನು ತಂದೊಡ್ಡಿದೆ. ಪೊಲೀಸರ ರಕ್ಷಣೆಯೇ ಹೊಸ ದಾಂಪತ್ಯಕ್ಕೆ ಕಾಲಿಟ್ಟವರಿಗೆ ಭರವಸೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?
ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ
ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ
ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ನಾಲ್ವರು ಸಚಿವರಿಂದ ಸುದ್ದಿಗೋಷ್ಠಿ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ನಾಲ್ವರು ಸಚಿವರಿಂದ ಸುದ್ದಿಗೋಷ್ಠಿ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಸಾಲಿನ ಫಾಲ್ಸ್​ಗಳಿಗೆ ಜೀವ ಕಳೆ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಸಾಲಿನ ಫಾಲ್ಸ್​ಗಳಿಗೆ ಜೀವ ಕಳೆ
ಹಾಸನ: ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಕುಸಿದ ಗುಡ್ಡ, ವಿಡಿಯೋ ಇಲ್ಲಿದೆ
ಹಾಸನ: ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಕುಸಿದ ಗುಡ್ಡ, ವಿಡಿಯೋ ಇಲ್ಲಿದೆ
ದರ್ಶನ್ ತಲೆಯನ್ನು ಕ್ಲೀನ್ ಶೇವ್ ಮಾಡಲಾಗಿದೆಯಾ? ಅಸಲಿ ವಿಚಾರ ಇಲ್ಲಿದೆ
ದರ್ಶನ್ ತಲೆಯನ್ನು ಕ್ಲೀನ್ ಶೇವ್ ಮಾಡಲಾಗಿದೆಯಾ? ಅಸಲಿ ವಿಚಾರ ಇಲ್ಲಿದೆ
ದೇವರ ನಾಮ ಜಪಿಸುವುದರಿಂದ ಆಗುವ ಲಾಭವೇನು? ಈ ವಿಡಿಯೋ ನೋಡಿ
ದೇವರ ನಾಮ ಜಪಿಸುವುದರಿಂದ ಆಗುವ ಲಾಭವೇನು? ಈ ವಿಡಿಯೋ ನೋಡಿ