ದೀಪಾವಳಿ ಬಳಿಕ ವಿಜಯಪುರದಲ್ಲಿ ನಡೆಯುತ್ತೆ ಶಿವಾಜಿ ಉತ್ಸವ; ಏನಿದರ ವಿಶೇಷ? ಇಲ್ಲಿದೆ ವಿವರ

ದೀಪಾವಳಿ ಬಳಿಕ ನಗರದಲ್ಲಿ ಶಿವಾಜಿ ಮಹಾರಾಜರ ವಿಶೇಷ ಉತ್ಸವ ಆಚರಣೆ ಮಾಡಲಾಗುತ್ತದೆ. ಮರಾಠಾ ಸಮುದಾಯದವರ ಮನೆಯ ಮುಂದೆ ಶಿವಾಜಿ ಮಹಾರಾಜರ ಸಂಸ್ಥಾನ ಹಾಗೂ ಕೋಟೆಗಳ ಮಾದರಿಯನ್ನು ಸ್ಥಾಪಿಸಲಾಗುತ್ತದೆ.

ದೀಪಾವಳಿ ಬಳಿಕ ವಿಜಯಪುರದಲ್ಲಿ ನಡೆಯುತ್ತೆ ಶಿವಾಜಿ ಉತ್ಸವ; ಏನಿದರ ವಿಶೇಷ? ಇಲ್ಲಿದೆ ವಿವರ
ದೀಪಾವಳಿ ಬಳಿಕ ವಿಜಯಪುರದಲ್ಲಿ ನಡೆಯುತ್ತೆ ಶಿವಾಜಿ ಉತ್ಸವ
Follow us
| Edited By: ಗಣಪತಿ ಶರ್ಮ

Updated on:Nov 18, 2023 | 4:42 PM

ವಿಜಯಪುರ, ನವೆಂಬರ್ 18: ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಹೆಸರು ಯಾರು ತಾನೆ ಕೇಳಿಲ್ಲ ಹೇಳಿ. ಧರ್ಮ ರಕ್ಷಣೆಗಾಗಿ ಹಾಗೂ ಸ್ವರಾಜ್ಯ ನಿರ್ಮಾಣಕ್ಕಾಗಿ ಹೋರಾಡಿದ ಧೀರ ಮಹಾರಾಜರು ಅವರು. ಅಂತಹ ರಾಜನನ್ನು ಮೋಸದಿಂದ ಕೊಲ್ಲಲು ಯತ್ನಿಸಿದ್ದ ಆದಿಲ್ ಶಹಾ ಸಾಮ್ರಾಜ್ಯದ ಮಹಾದಂಡನಾಯಕ ಗಜಗಾತ್ರದ ಅಫ್ಜಲ್ ಖಾನ್​​ನನ್ನು ಉಪಾಯದಿಂದಲೇ ಮುಗಿಸಿದ ಚಾಣಾಕ್ಷ ಈ ಶಿವಾಜಿ. ಇಂತಹ ಶಿವಾಜಿ ಅತಿಹೆಚ್ಚು ಕೋಟೆಗಳನ್ನು ವಶ ಪಡಿಸಿಕೊಳ್ಳಲು ಯುದ್ಧಕ್ಕೆ ಸನ್ನದ್ದವಾಗಿದ್ದು ದೀಪಾವಳಿ ನಂತರ ಎನ್ನಲಾಗಿದೆ. ಹಾಗಾಗಿ ಶಿವಾಜಿಯ ಶೌರ್ಯ, ಬುದ್ದಿಶಕ್ತಿ, ಚಾಣಾಕ್ಷತನ ಮುಂದಿನ ಯುವ ಪೀಳಿಗೆಗೆ ತಿಳಿಯಲಿ ಎಂದು ದೀಪಾವಳಿ ನಂತರ ವಿಜಯಪುರದಲ್ಲಿ ವಿಶಿಷ್ಟ ಆಚರಣೆ ಮಾಡಲಾಗುತ್ತಿದೆ.

ದೀಪಾವಳಿ ಬಳಿಕ ನಗರದಲ್ಲಿ ನಡೆಯುತ್ತೆ ಶಿವಾಜಿ ಮಹಾರಾಜರ ವಿಶೇಷ ಉತ್ಸವ ಆಚರಣೆ ಮಾಡಲಾಗುತ್ತದೆ. ಮರಾಠಾ ಸಮುದಾಯದವರ ಮನೆಯ ಮುಂದೆ ಶಿವಾಜಿ ಮಹಾರಾಜರ ಸಂಸ್ಥಾನ ಹಾಗೂ ಕೋಟೆಗಳ ಮಾದರಿಯನ್ನು ಸ್ಥಾಪಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಆಡಳಿತ ಹೊಂದಿದ ಹಾಗೂ ಧರ್ಮ ರಕ್ಷಣೆ, ಸ್ವರಾಜ್ಯ ನಿರ್ಮಾಣ ಮಾಡಿದ ಛತ್ರಪತಿ ಶಿವಾಜಿಯನ್ನು ಇಂದಿಗೂ ಸಹ ವಿಜಯಪುರದಲ್ಲಿ ನೆನೆಸಲಾಗುತ್ತಿದೆ. ವಿಜಯಪುರ ಶಿವಾಜಿ ಸರ್ಕಲ್ ಬಳಿ ಇರುವ ಶಿವಾಜಿ ಪೇಟೆ, ಡೋಬಳೆ ಗಲ್ಲಿಯ ಪ್ರತಿಯೊಂದು ಮನೆಯ ಮುಂದೆ ಶಿವಾಜಿಯ ಸಂಸ್ಥಾನದ ರೂಪಕ ನಿರ್ಮಿಸಿರುವುದು ಕಾಣಬಹುದು. ಮಹಾನ್ ಧೀರನೂ ಹಾಗೂ ಶೂರನು ಆಗಿದ್ದ ಶಿವಾಜಿಯ ಆಡಳಿತ ಹಾಗೂ ಕಾರ್ಯ ವೈಖರಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಹೀಗಾಗಿಯೇ ಇಲ್ಲಿ ಪ್ರತಿವರ್ಷ ದಿಪಾವಳಿಯಿಂದ ಬಳಿಕ ಶಿವಾಜಿ ಕೋಟೆಯ ಮಾದರಿಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತದೆ. ಮುಸ್ಲೀಂ ಪ್ರಾಭಲ್ಯದಲ್ಲಿ ಹಿಂದೂ ರಾಜರುಗಳು ಸಾಮ್ರಾಟರು ತಮ್ಮ ರಾಜ್ಯಗಳನ್ನು ಕಳೆದುಕೊಂಡಿದ್ದರು. ಇಂಥ ರಾಜ್ಯಗಳನ್ನು ಕೋಟೆ ಕೊತ್ತಲುಗಳನ್ನು ವಾಪಸ್ ಪಡೆಯು ಶಿವಾಜಿ ಮಹಾರಾಜ ಯುದ್ದವನ್ನು ಆರಂಭಿಸಿದ್ದರು.

ದೀಪಾವಳಿಯ ಬಳಿಕ ಯುದ್ದವನ್ನು ಆರಂಭಿಸಿದ್ದ ಶಿವಾಜಿ ಮಹಾರಾಜ ಒಂದೊಂದೇ ಕೋಟೆಗಳನ್ನು ವಶ ಪಡಿಸಿಕೊಳ್ಳುತ್ತಾ ಗೆಲುವಿನ ನಗೆ ಬೀರಿದ್ದರು. ದೀಪಾವಳಿಯ ಬಳಿಕ ಮುಸ್ಲಿಂ ರಾಜ್ಯರುಗಳ ಆಧೀನದಲ್ಲಿದ್ದ 13 ಕೋಟೆಗಳನ್ನು ಗೆದ್ದಿದ್ದ ಶಿವಾಜಿಯ ಶೌರ್ಯ ಹಾಗೂ ಧೈರ್ಯ ಎಲ್ಲರಿಗೂ ಮಾದರಿಯಾಗಿದೆ. ಶಿವಾಜಿಯ ವೀರತನ, ಪರಾಕ್ರಮಗಳ ಕುರಿತು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಸಲುವಾಗಿ ಶಿವಾಜಿಪೇಟೆ ಹಾಗೂ ಡೊಬಳೆ ಗಲ್ಲಿಯಲ್ಲಿ 50 ಕ್ಕೂ ಹೆಚ್ಚು ಮನೆಗಳ ಮುಂದೆ ಶಿವಾಜಿಯ ಪ್ರತಿಮೆ, ಅವರ ಆಡಳಿತ ಶೈಲಿ, ಕೋಟೆ, ಸೈನಿಕರು, ಕಾರ್ಯಾಚರಣೆ, ಗುಪ್ತಚರ ಕಾರ್ಯಗಳ ಬಗ್ಗೆ ಗೊಂಬೆಗಳನ್ನು ಮಾಡಿ ಮನೆಯ ಮುಂದೆ ಶಿವಾಜಿ ಕೋಟೆಯ ರೂಪುರೇಷೆ ನಿರ್ಮಿಸಲಾಗಿರುತ್ತದೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಹೈನೋದ್ಯಮ ಮಾಡುವ ಗೌಳಿಗರು ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸುತ್ತಾರೆ! ಏನದರ ವಿಶೇಷ?

ಛತ್ರಪತಿ ಶಿವಾಜಿ ಮಹಾರಾಜರನ್ನು ಹೇಗಾದರೂ ಮಾಡಿ ಕೊಲ್ಲಬೇಕು ಎಂಬ ದುರುದ್ದೇಶದಿಂದ ಪ್ಲಾನ್ ಮಾಡಿದ್ದ ಆದಿಲ್ ಶಹಾ ಸಾಮ್ರಾಜ್ಯದ ಮಹಾದಂಡನಾಯಕ ಅಫ್ಜಲ್ ಖಾನ್ ಕುತಂತ್ರ ಮಾಡಿರುತ್ತಾನೆ. 1659 ನವ್ಹೆಂಬರ್ 10 ರಂದು ಪ್ರತಾಪಗಢದ ಪ್ರದೇಶದಲ್ಲಿ ಶಿವಾಜಿಯನ್ನು ಆಲಂಗಿಸಿ ಕೊಲೆ ಮಾಡಲು ಯತ್ನಿಸಿದಾಗ ಈ ಕುರಿತು ಮೊದಲೆ ಸಂಶಯಗೊಂಡಿದ್ದ ಶಿವಾಜಿ ಅಫ್ಜಲ್ ಖಾನನ ಕುತಂತ್ರಕ್ಕೆ ಬಗ್ಗದೆ ಪ್ರತಿರೋಧ ಒಡ್ಡಿ ಉಪಾಯದಿಂದ ಆತನನ್ನೇ ಮುಗಿಸಿ ಬಿಡುತ್ತಾನೆ. ಈ ರೀತಿ ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ಶಿವಾಜಿ ತನ್ನ ಶೌರ್ಯದಿಂದಲೇ ಯುದ್ಧಗಳನ್ನು ಗೆಲ್ಲುತ್ತಿದ್ದುದು ವಿಶೇಷವಾಗಿತ್ತು. ಹೀಗಾಗಿ ಆತನ ಸಾಧನೆಗಳ ಕುರಿತು ಜನರಲ್ಲಿ ಮೂಡಿಸುವ ಕೆಲಸ ವಿಜಯಪುರದಲ್ಲಿ ನಡೆಯುತ್ತಿದೆ. ಅಂದಿನಿಂದಲೂ ಸಹ ಡೋಬಳೆ ಗಲ್ಲಿಯ, ಶಿವಾಜಿ ಪೇಟೆಯ ಮನೆಗಳ ಮುಂದೆ ಶಿವಾಜಿ ಆಸ್ಥಾನವನ್ನು, ಕೋಟೆಗಳನ್ನು ಸ್ಥಾಪಿಸಿ ಪೂಜೆ ನಡೆಸಲಾಗುತ್ತದೆ. ಈ ಮೂಲಕ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಶೌರ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಶಿವಾಜಿ ಮಹಾರಾಜರ ರಾಜಧಾನಿಯಾಗಿದ್ದ ರಾಯಘಡ ಕೋಟೆ, ಪ್ರತಾಪಘಡ ಕೋಟೆ, ಶಿವನೇರಿ ಕೋಟೆ, ಸಿಂಹಘಡ ಕೋಟೆ ಮುಂತಾದವುಗಳನ್ನು ಇಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿರುತ್ತದೆ. ಮನೆಗಳ ಮುಂದೆ ಶಿವಾಜಿ ಮಹಾರಾಜರ ಕುತಂತ್ರಿಗಳನ್ನು ಬಗ್ಗುಬಡಿದು ಆಸ್ಥಾನಗಳನ್ನು ವಶಕ್ಕೆ ಪಡೆದು ವಿಜಯಿ ಶಾಲಿಯಾಗುತ್ತಿದ್ದ ಶಿವಾಜಿ ಮಹಾರಾಜರ ಕುರಿತು ಅರಿವು ಮೂಡಿಸುವ ಕೆಲಸ ಇಲ್ಲಿ ನಡೆದುಕೊಂಡು ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Sat, 18 November 23

ತಾಜಾ ಸುದ್ದಿ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ