ವಿಜಯಪುರ ಜಿಲ್ಲೆಯಲ್ಲಿ ಹೈನೋದ್ಯಮ ಮಾಡುವ ಗೌಳಿಗರು ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸುತ್ತಾರೆ! ಏನದರ ವಿಶೇಷ?
ಎಮ್ಮೆಗಳ ಓಟದಲ್ಲಿ ವಿವಿಧ ಗೌಳಿಗರಲ್ಲೇ ಹಣಾಹಣಿ ನಡೆಯುತ್ತದೆ. ತಮ್ಮ ತಮ್ಮ ಎಮ್ಮಗಳನ್ನು ಹೇಗೆಲ್ಲಾ ಓಡಿಸುತ್ತಾರೆ, ಅವುಗಳನ್ನು ಕಂಟ್ರೋಲ್ ಮಾಡುತ್ತಾರೆ ಎಂಬುದು ಸಹ ಇಲ್ಲಿ ಪ್ರತಿಷ್ಠೆಯಾಗಿರುತ್ತದೆ. ಯಾರೆಲ್ಲ ಎಮ್ಮೆಗಳಿಗೆ ಹೆಚ್ಚು ಅಲಂಕಾರ ಮಾಡಿದ್ದರು ಎಂಬುದು ಸಹ ಚರ್ಚೆಯಾಗುತ್ತದೆ. ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ ಗೌಳಿ ಸಮಾಜದ ದೀಪಾವಳಿ ಮಾತ್ರ ವಿಭಿನ್ನವಾಗಿ ಆಚರಣೆಯಾಗುತ್ತದೆ.
ಬೆಳಕಿನ ಹಬ್ಬ ದೀಪಾವಳಿಯನ್ನು (Deepavali) ಇಡೀ ದೇಶದಲ್ಲಿ ಶ್ರದ್ದಾ ಭಕ್ತಿಯಿಂದ ಆರಚಣೆ ಮಾಡುತ್ತಾರೆ. ಈ ಬಾರಿ ಬರಗಾಲವಿದ್ದರೂ ದೀಪಾವಳಿಯ ಆಚರಣೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಸಾಮಾನ್ಯವಾಗಿ ಬಲಿ ಚಕ್ರವರ್ತಿ ಹಾಗೂ ವಿಷ್ಟು ಅವತಾರದ ವಾಮನ ಕಥೆ ದೀಪಾವಳಿಯನ್ನು ಆಚರಣೆಯಾಗುತ್ತದೆ. ಬಲಿ ಪಾಡ್ಯವೆಂದೇ ಪೂಜೆ ಮಾಡುವುದು ವಾಡಿಕೆ. ಇನ್ನು ದೀಪಾವಳಿ ಐಶ್ವರ್ಯದ ಸಂತೇಕವಾಗಿದ್ದು ಶ್ರೀ ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಉತ್ತರ ಕರ್ನಟಕ ಭಾಗದಲ್ಲಿ ಶ್ರೀಲಕ್ಷ್ಮೀ ದೇವರ ಪೂಜೆ ಮಾಡಿ ಅಷ್ಟ ಐಶ್ವರಗಳು ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ( Vijayapur district ) ಹೈನೋದ್ಯಮವನ್ನು ಮಾಡುವ ಗೌಳಿಗರು ( Vijayapur district ) ಮಾತ್ರ ಶ್ರೀಲಕ್ಷ್ಮೀ ದೇವತೆಯ ಪೂಜೆ ಮಾಡುವುದಿಲ್ಲ. ಅವರ ಆಚರಣೆಯೇ ಬೇರೆ ಇದೆ. ದೀಪಾವಳಿ ಪಾಡ್ಯದ ಬಳಿಕ ಗೌಳಿಗರು ದೀಪಾವಳಿ ಆಚರಿಸುತ್ತಾರೆ. ಡಿಟೇಲ್ಸ್ ಇಲ್ಲಿದೆ ನೋಡಿ.
ಗೌಳಿಗರ ಸಮಾಜದಿಂದ ವಿಶೇಷ ದೀಪಾವಳಿ ಆಚರಣೆ…. ಇಲ್ಲಿ ಶ್ರೀಲಕ್ಷ್ಮೀ ದೇವರ ಪೂಜೆ ಇಲ್ಲಾ ಪುನಸ್ಕಾರವಿಲ್ಲಾ…. ದೀಪಾವಳಿ ಪಾಡ್ಯದ ಬಳಿಕ ಗೌಳಿಗರು ದೀಪಾವಳಿ ಆಚರಣೆ ಮಾಡುತ್ತಾರೆ… ಇವರಿಗೆ ಎಮ್ಮೆಗಳೇ ಶ್ರೀಲಕ್ಷ್ಮೀ ದೇವರು… ಎಮ್ಮೆಗೆ ಪೂಜೆ ಮಾಡಿ ಅವುಗಳ ಓಟ ಓಡಿಸೋ ಮೂಲಕ ದೀಪಾವಳಿಯ ಸಂಭ್ರಮ ಮಾಡುತ್ತಾರೆ….. ದೀಪಾವಳಿ ಹಬ್ಬ ಎಂದರೆ ಸಾಕು ಅಲ್ಲಿ ಖುಷಿ ಸಂತಸ ಮನೆ ಮಾಡಿರುತ್ತದೆ. ದೇಶದ ವಿವಿಧೆಡೆ ವಿಭಿನ್ನವಾಗಿ ದೀಪಾವಳಿ ಆಚರಣೆಯಾಗುತ್ತದೆ.
ಇಂಥಹ ಬೆಳಕಿನ ಹಬ್ಬ ವಿಜಯಪುರ ಜಿಲ್ಲೆಯ ಗೌಳಿಗರ ಸಮುದಾಯದಲ್ಲಿ ಇನ್ನೂ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಎಲ್ಲೆಡೆ ದೀಪಾವಳಿ ಅಮಾವಾಸ್ಯೆ ಹಾಗೂ ಪಾಡ್ಯದ ದಿನ ಶ್ರೀಲಕ್ಷ್ಮೀ ದೇವತೆಯು ಪೂಜೆ ಮಾಡಿ ಸುಖ ಶಾಂತಿ ನೆಮ್ಮದಿ ಐಶ್ವರ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಗೌಳಿಗರು ಮಾತ್ರ ಪಾಡ್ಯದ ಬಳಿಕ ದೀಪಾವಳಿ ಆಚರಣೆ ಮಾಡುತ್ತಾರೆ. ಗೌಳಿಗರು ದೀಪಾವಳಿಯಲ್ಲಿ ತಾವು ಸಾಕಿ ಎಮ್ಮೆಗಳನ್ನೇ ದೇವರೆಂದು ಪೂಜೆ ಮಾಡುತ್ತಾರೆ. ಎಮ್ಮೆಗಳೇ ನಮ್ಮ ದೇವರು ಎಂದು ನಂಬಿರೋ ಗೌಳಿಗರು ಎಮ್ಮೆಗಳ ಮೈತೊಳೆದು ಅಲಂಕಾರ ಮಾಡುತ್ತಾರೆ. ಎಮ್ಮೆಗಳ ಕೊಂಬುಗಳಿಗೆ ಬಣ್ಣ ಬಳಿದು ನವಿಲು ಗರಿ ಸೇರಿದಂತೆ ಇತರೆ ಸಾಮಗ್ರಿಗಳಿಂದ ಅಲಂಕರಿಸುತ್ತಾರೆ. ಬಳಿಕ ಎಮ್ಮೆಗಳ ಪೂಜೆಯನ್ನ ಮಾಡುತ್ತಾರೆ. ಪೂಜೆಯ ಮಾರನೇ ದಿನವೇ ಎಮ್ಮೆಗಳ ಓಟವನ್ನು ಆಯೋಜಿಸಿ ಎಂಜಾಯ್ ಮಾಡುತ್ತಾರೆ.
ಇದನ್ನೂ ಓದಿ: ಬೆಂಗಳೂರಿಗೆ ಎದುರಾಗಲಿದೆ ಹಾಲಿನ ಕೊರತೆ; ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದು ಎಚ್ಚರಿಕೆ ನೀಡಿದ ಬಮುಲ್
ವಿಜಯಪುರ ನಗರದಲ್ಲಿ ಹೆಚ್ಚಾಗಿ ಲಿಂಗಾಯತ ಗೌಳಿಗ ಸಮಾಜದ ಜನರು ಹೆಚ್ಚು ವಾಸವಿದ್ದಾರೆ. ಎಮ್ಮೆಗಳನ್ನು ಸಾಕುವುದು ಹೈನೋದ್ಯಮ ಮಾಡುವ ಮೂಲಕ ಜೀವನ ಮಾಡುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸ ಇಲ್ಲದ ಗೌಳಿಗರ ಸಮಾಜದಲ್ಲಿ ಎಮ್ಮೆ ಸಾಕುವುದು ಹಾಲು ಮಾರಾಟ ಮಾಡುವುದೇ ಪ್ರಮುಖ ಉದ್ಯೋಗವಾಗಿದೆ. ಈ ಉದ್ಯೋಗವನ್ನು ಬಿಟ್ಟು ಬೇರೆ ಕೆಲಸ ಮಾಡುವುದು ಅಪರೂಪವಾಗಿದೆ. ದೀಪಾವಳಿ ಬಂದರೆ ಸಾಕು ಗೌಳಿಗರಿಗೆ ಎಲ್ಲಿಲ್ಲದ ಖುಷಿ. ವರ್ಷದ ಪ್ರಮುಖ ಹಬ್ಬ ದೇವರ ಹಬ್ಬವೆಂದು ಎಮ್ಮೆಗಳಿಗೆ ಪೂಜೆ ಮಾಡಿ ಅವುಗಳ ಓಟವನ್ನು ಆಯೋಜಿಸುತ್ತಾರೆ.
ಎಲ್ಲಾ ಎಮ್ಮೆಗಳನ್ನು ಒಟ್ಟಾಗಿ ಸೇರಿಸುತ್ತಾರೆ. ಸುತ್ತಲೂ ಗೌಳಿಗರ ಸಮುದಾಯದ ಯುವಕರು ಸೇರುತ್ತಾರೆ. ಅದರಲ್ಲಿ ಕೆಲವರು ಕೋಲಿಗೆಕಂಬಳಿ ಕಟ್ಟಿ ಎಮ್ಮೆಗಳನ್ನು ರೊಚ್ಚಿಗೇಳಿಸುತ್ತಾರೆ. ರೊಚ್ಚಿಗೇಳಿಸಿ ಓಡಿಸುತ್ತಾರೆ. ಆಗ ಕೆಲವರು ಕೆಂಪು ಬಣ್ಣದ ವಸ್ತ್ರ ತೋರಿಸುವ ಮೂಲಕ ರೊಚ್ಚಿಗೆದ್ದು ಓಡುವ ಎಮ್ಮೆಗಳನ್ನು ನಿಲ್ಲಿಸುತ್ತಾರೆ. ಕೆಂಪು ವಸ್ತ್ರವನ್ನು ತೋರಿಸಿದರೆ ನಿಲ್ಲಬೇಕು. ಕಂಬಳಿ ತೋರಿಸಿದರೆ ಎಮ್ಮೆಗಳು ಓಡಬೇಕು. ಹೀಗೆ ಗೌಳಿಗರು ಹೇಳುವಂತೆ ಎಮ್ಮೆಗಳು ಕೇಳುತ್ತವೆ. ಇದು ಆಶ್ಚರ್ಯವಾದರೂ ಸತ್ಯವಾಗಿದೆ. ಗೌಳಿಗರ ನಿರ್ದೇಶನದಂತೆ ಎಮ್ಮೆಗಳ ಓಟ ನಡೆಯುತ್ತವೆ. ಎಮ್ಮೆಗಳ ಓಟವನ್ನು ನೋಡಲು ನಗರದ ಜನರು ಜಮಾಯಿಸುತ್ತಾರೆ.
ಎಮ್ಮೆಗಳ ಓಟದಲ್ಲಿ ವಿವಿಧ ಗೌಳಿಗರಲ್ಲೇ ಹಣಾಹಣಿ ನಡೆಯುತ್ತದೆ. ತಮ್ಮ ತಮ್ಮ ಎಮ್ಮಗಳನ್ನು ಹೇಗೆಲ್ಲಾ ಓಡಿಸುತ್ತಾರೆ, ಅವುಗಳನ್ನು ಕಂಟ್ರೋಲ್ ಮಾಡುತ್ತಾರೆ ಎಂಬುದು ಸಹ ಇಲ್ಲಿ ಪ್ರತಿಷ್ಠೆಯಾಗಿರುತ್ತದೆ. ಯಾರೆಲ್ಲ ಎಮ್ಮೆಗಳಿಗೆ ಹೆಚ್ಚು ಅಲಂಕಾರ ಮಾಡಿದ್ದರು ಎಂಬುದು ಸಹ ಚರ್ಚೆಯಾಗುತ್ತದೆ. ಹತ್ತಾರು ಎಮ್ಮೆಗಳ ತಂಡವನ್ನಾಗಿ ಓಟವನ್ನು ಓಡಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಒಟ್ಟಾರೆ ಗೌಳಿ ಸಮಾಜದ ದೀಪಾವಳಿ ಮಾತ್ರ ವಿಭಿನ್ನವಾಗಿ ಆಚರಣೆಯಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ