AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜೆ ಮಜಾ ಮಾಡಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದ: ಸಿಕ್ಕ ಸಿಕ್ಕ ಲಿಂಕ್​ ಕ್ಲಿಕ್​ ಮಾಡುವರು ಈ ಸುದ್ದಿ ಓದಲೇಬೇಕು

ಸೈಬರ್ ವಂಚನೆ ಪ್ರಕರಣಗಳು ಬೇರೆ ಸ್ವರೂಪದಲ್ಲಿ ನಡೆಯುತ್ತಿವೆ. ನಿತ್ಯ ಸಾವಿರಾರು ಸೈಬರ್ ವಂಚನೆ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತವೆ. ಇಂತಹ ಸೈಬರ್ ವಂಚನೆ ಜಾಲಕ್ಕೆ ಬೀಳುತ್ತಿರುವವರು ಯಾರು ಅವಿದ್ಯಾವಂತರಲ್ಲ ವಿದ್ಯಾವಂತರು. ಒಳ್ಳೊಳ್ಳೆ ಉದ್ಯೋಗದಲ್ಲಿರುವವರು. ರಜೆ ಇದ್ದಿದ್ದರಿಂದ ಮಕ್ಕಳ ಜೊತೆ ಮೈಸೂರಿಗೆ ಹೋದವರಿಗೆ ಸೈಬರ್ ವಂಚಕರು ಬಿಗ್ ಶಾಕ್ ಕೊಟ್ಟಿದ್ದಾರೆ.

ರಜೆ ಮಜಾ ಮಾಡಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದ: ಸಿಕ್ಕ ಸಿಕ್ಕ ಲಿಂಕ್​ ಕ್ಲಿಕ್​ ಮಾಡುವರು ಈ ಸುದ್ದಿ ಓದಲೇಬೇಕು
ಸಿಇಎನ್ ಅಪರಾಧ ಪೊಲೀಸ್​ ಠಾಣೆ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: ವಿವೇಕ ಬಿರಾದಾರ|

Updated on:Jun 20, 2025 | 9:22 PM

Share

ಚಿಕ್ಕಮಗಳೂರು, ಜೂನ್ 20: ಸೈಬರ್ ವಂಚನೆ (Cyber Crime) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ವುತ್ತಲೇ ಇವೆ. ಹೊಸ ಹೊಸ ರೀತಿಯಲ್ಲಿ ಸೈಬರ್ ವಂಚಕರು ತಮ್ಮ ವಂಚನೆಯ ಜಾಲವನ್ನು ಹೆಣೆಯುತ್ತಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ಮಕ್ಕಳನ್ನು ಕರೆದುಕೊಂಡು ಕುಟುಂಬದವರ ಜೊತೆ ಮೈಸೂರು (Mysore) ಪ್ರವಾಸಕ್ಕೆ ಹೋಗಿದ್ದ ಚಿಕ್ಕಮಗಳೂರಿನ (Chikamgaluru) ವ್ಯಕ್ತಿ ಸೈಬರ್ ವಂಚಕರ ಜಾಲದಲ್ಲಿ ಬಿದ್ದು 25 ಸಾವಿರ ಹಣ ಕಳೆದುಕೊಂಡಿದ್ದಾರೆ.

ಚಿಕ್ಕಮಗಳೂರಿನ ಮಹೇಶ್ ಎಂಬುವರು ಕುಟುಂಬದವರ ಜೊತೆ ಮೈಸೂರಿಗೆ ಹೋಗಿದ್ದರು. ಮೈಸೂರಿನಲ್ಲಿನ GRS ಫ್ಯಾಂಟಸಿ ಪಾರ್ಕ್​ಗೆ ಹೋಗಲು ಮಹೇಶ್​ ಅವರು ಆನ್ಲೈನ್​ನಲ್ಲಿ ಟಿಕೆಟ್​ ಬುಕ್ ಮಾಡಲು ಸರ್ಚ್ ಮಾಡಿದ್ದಾರೆ. ಆನ್​ಲೈನ್​ನಲ್ಲಿ ತೋರಿಸಿದ GRS ಫ್ಯಾಂಟಸಿ ಪಾರ್ಕ್ ಎಂಬ ಲಿಂಕನ್ನು ಮಹೇಶ್​ ಕ್ಲಿಕ್​ ಮಾಡಿದ್ದಾರೆ. ಅದರಲ್ಲಿ ಬಂದ ಎಲ್ಲ ಆಟಗಳನ್ನು ಕಂಪ್ಲೀಟ್ ಮಾಡಿ, ನಂತರ ಹಣ ಪೇ ಮಾಡಲು ಕಂಪ್ಲೀಟ್ ಬುಕ್ಕಿಂಗ್​ಗೆ ಹೋಗಿ ಹೆಸರು, ಇಮೇಲ್ ಐಡಿ, ಮೊಬೈಲ್ ನಂಬರ್, ಪಿನ್​ಕೋಡ್ ನಂಬರ್ ಅನ್ನು ಹಾಕಿ ನಂತರ ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಲು ಹೋದಾಗ ರಾಂಗ್ UPI ಪಿನ್ ಎಂದು ತೋರಿಸಿದೆ. ಸ್ವಲ್ಪ ಸಮಯದ ನಂತರ ಮಹೇಶ್​ ಅವರ ಖಾತೆಯಲ್ಲಿದ್ದ 90 ಸಾವಿರ ಹಣ ಡೆಬಿಟ್​ ಆಗಿರುವ ಸಂದೇಶ ಬಂದಿದೆ. ಐದು ನಿಮಿಷದ ನಂತರ ಮತ್ತೆ 5000 ಹಣ ಡೆಬಿಟ್​ ಆಗಿರುಚ ಮೆಸೇಜ್ ಬಂದಿದೆ.

ಗಾಭರಿಗೊಂಡ ಮಹೇಶ್​ ಅವರು ಬ್ಯಾಲೆನ್ಸ್ ಚೆಕ್ ಮಾಡಿದಾಗ 95,000 ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಮಹೇಶ್​ ಸೈಬರ್ ಕ್ರೈಮ್‌ಗಳ ಸಹಾಯಕ್ಕಾಗಿ ರಾಷ್ಟ್ರೀಯ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು 95 ಸಾವಿರದಲ್ಲಿ 70000 ಹಣವನ್ನು ಫ್ರೀಜ್ ಮಾಡಿದ್ದಾರೆ.

ಇದನ್ನೂ ಓದಿ
Image
ಬೆಂಗಳೂರಿನ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್​ಗಳ ಮೇಲೆ ಪೊಲೀಸರಿಂದ ದಾಳಿ
Image
ಪೊಲೀಸರಿಂದ ತಪ್ಪಿಸಿಕೊಳ್ಳಲು ಸೀರೆಯುಟ್ಟು ಮಹಿಳೆಯ ವೇಷ ಧರಿಸಿದ ಆರೋಪಿ!
Image
ಮಡಿಕೇರಿಯಲ್ಲಿ ಬರೋಬ್ಬರಿ 9 ಪೊಲೀಸರ ಮನೆಗಳಲ್ಲೇ ಕಳ್ಳತನ!
Image
ಕೌಟುಂಬಿಕ ಕಲಹಕ್ಕೆ ಯುವತಿ ಆತ್ಮಹತ್ಯೆ: 5 ಲಕ್ಷ ರೂ ಪರಿಹಾರ ಪಡೆದ ಕುಟುಂಬ

ಇದನ್ನೂ ಓದಿ: ಮಹಿಳೆಯ ಪ್ರಾಣ ತೆಗೆದ ಮೊಬೈಲ್: ಪತ್ನಿಯನ್ನೇ ಕೊಂದ ಪತಿ, ಮಕ್ಕಳು ಅನಾಥ

ಒಟ್ಟಿನಲ್ಲಿ ಟೆಕ್ನಾಲಜಿ ಬೆಳೆದಂತೆ ಮೋಸ ಹೋಗುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಈ ರೀತಿ ಸೈಬರ್ ವಂಚನೆಗೆ ಒಳಗಾದವರು ಕೂಡಲೇ 1930 ಗೆ ಕಾಲ್ ಮಾಡಿ, ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಳ್ಳುತ್ತಿದ್ದರೂ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗದಿರುವುದು ವಿಪರ್ಯಾಸವೆ ಸರಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Fri, 20 June 25

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ