AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ ಪ್ರಾಣ ತೆಗೆದ ಮೊಬೈಲ್: ಪತ್ನಿಯನ್ನೇ ಕೊಂದ ಪತಿ, ಮಕ್ಕಳು ಅನಾಥ

ಉಡುಪಿಯಲ್ಲಿ ಘನಘೋರ ದುರಂತ ನಡೆದಿದ್ದು, ಮೊಬೈಲ್​ ಮಹಿಳೆಯ ಜೀವ ಕಸಿದುಕೊಂಡಿದೆ. ಹೌದು.. ಪತಿಯೇ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದು ಹಾಕಿದ್ದಾನೆ. ಪತ್ನಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಾಳೆಂದು ಕೋಪಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಬಡಪಾಯಿ ಎರಡು ಮಕ್ಕಳ ತಾಯಿ ಕೊನೆಯುಸಿರೆಳೆದಿದ್ದಾಳೆ. ಕುಡುಕ ಪತಿ ಅಂದರ್ ಆಗಿದ್ದಾನೆ. ಇದರಿಂದ ಮಕ್ಕಳು ಅನಾಥವಾಗಿವೆ.

ಮಹಿಳೆಯ ಪ್ರಾಣ ತೆಗೆದ ಮೊಬೈಲ್: ಪತ್ನಿಯನ್ನೇ ಕೊಂದ ಪತಿ, ಮಕ್ಕಳು ಅನಾಥ
Ganesh And Rekha
ಪ್ರಜ್ವಲ್ ಅಮೀನ್​, ಉಡುಪಿ
| Updated By: ರಮೇಶ್ ಬಿ. ಜವಳಗೇರಾ|

Updated on: Jun 20, 2025 | 8:57 PM

Share

ಉಡುಪಿ, (ಜೂನ್ 20): ಹೆಚ್ಚು ಮೊಬೈಲ್  (Mobile) ಬಳಸುತ್ತಾಳೆಂದು ಕೋಪಗೊಂಡ ವ್ಯಕ್ತಿ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ (Murder) ಮಾಡಿದ್ದಾನೆ. ಪತ್ನಿ (Wife) ಹೆಚ್ಚು ಸಮಯ ಮೊಬೈಲ್  ಬಳಸುತ್ತಾಳೆ ಎಂದು ಪತಿ (Husband) ಕತ್ತಿಯಿಂದ ಕಡಿದು ಹತ್ಯೆಗೈದ ಘಟನೆ ಉಡುಪಿಯ(Udupi)  ಬ್ರಹ್ಮಾವರ (Brahmavar) ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ನಡೆದಿದೆ. ರೇಖಾ‌(27) ಕೊಲೆಯಾದ ಮಹಿಳೆ. ಕೊಳಂಬೆ ಗ್ರಾಮದ ನಿವಾಸಿಯಾದ ಆರೋಪಿ ಪತಿ ಗಣೇಶ ಪೂಜಾರಿಯನ್ನು(42) ಸದ್ಯ ಬಂಧಿಸಲಾಗಿದೆ. ಆದ್ರೆ, ಪಾಪ ಇಬ್ಬರು ಮಕ್ಕಳು ಅನಾಥವಾಗಿವೆ.

ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಹಾಗೂ ರೇಖಾಳಿಗೆ 8 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದರು. ರೇಖಾ ಪೆಡ್ರೋಲ್ ಬಂಕ್‌ವೊಂದರಲ್ಲಿ ಕೆಲಸಕ್ಕಿದ್ದು ಗಣೇಶ್ ಮೊಬೈಲ್ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಈ ಹಿಂದೆ ಶಂಕರನಾರಾಯಣ ಪೊಲೀಸರಿಗೆ ದೂರು ಅರ್ಜಿ ನೀಡಲಾಗಿದ್ದು ಅವರು ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು. ಆದರೆ ಗಣೇಶ್ ತನ್ನ ಚಾಳಿ ಮುಂದುವರೆಸಿದ್ದು, ಗುರುವಾರ ತಡರಾತ್ರಿ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ತೆಗೆದಿದ್ದು, ಈ ವೇಳೆ ಕತ್ತಿಯಿಂದ ಪತ್ನಿಗ ಇರಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ಇದೇ ವಿಧಿಯಾಟ: ತಂಗಿ ಶವಸಂಸ್ಕಾರಕ್ಕೆ ಬಂದವರು ಅಕ್ಕನ ಅಂತ್ಯಸಂಸ್ಕಾರ ಮಾಡಬೇಕಾಯ್ತು!

ಹತ್ಯೆ ಮಾಡಿದ ಬಳಿಕ ಮನೆಯಿಂದ ಓಡಿ ಹೋಗಿದ್ದ ಆರೋಪಿ ಗಣೇಶ್ ಪೂಜಾರಿಯನ್ನು ಕುಂದಾಪುರ ವೃತ್ತನಿರೀಕ್ಷಕ ಜಯರಾಮ್ ಗೌಡ, ಶಂಕರನಾರಾಯಣ ಪೊಲೀಸ್ ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್ ಮತ್ತು ಸಿಬ್ಬಂದಿಗಳು ಪತ್ತೆಮಾಡಿ ಬಂಧಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಕುಡಿತದ ಚಟದಿಂದ ಪತ್ನಿ ರೇಖಾ ರೋಸಿ ಹೋಗಿದ್ದಳು. ಅನೇಕ ರೀತಿಯಲ್ಲಿ ಬುದ್ಧಿವಾದ ಹೇಳಿ ಸೋತಿದ್ದಳು. ಪೊಲೀಸ್ ಠಾಣೆಗೆ ಹೋದರು ಆತನಿಗೆ ಬುದ್ಧಿ ಬಂದಿರಲಿಲ್ಲ. ಪತಿಯ ಈ ದುರ್ವರ್ತನೆಯಿಂದ ಪತ್ನಿ ರೇಖಾ ಇಡೀ ದಿನ ಮೊಬೈಲಿಗೆ ಅಡಿಕ್ಟ್ ಆಗಿದ್ದಳು. ಮೊಬೈಲ್ ನೋಡುತ್ತಿದ್ದರೂ ಪತಿ ಗಣೇಶ್ ಆಕ್ಷೇಪಿಸುತ್ತಿದ್ದ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ತಾಯಿ ಮಸಣ ಸೇರಿದ್ದರೆ, ತಂದೆ ತಂದೆ ಜೈಲು ಪಾಲಾಗಿದ್ದಾನೆ. ಇದರಿಂದ ದಂಪತಿಗಳ ಎರಡು ಮಕ್ಕಳು ಅನಾಥರಾಗಿದ್ದಾರೆ. ಆಕೆಗೆ ಮೊಬೈಲ್ ಚಟ ಇವನಿಗೆ ಕುಡಿತದ ಚಟ ಈಗ ಮಕ್ಕಳಿಗೆ ದಿಕ್ಕಿಲ್ಲದಂತಾಗಿದೆ.