AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿಯಲ್ಲಿ ಪೊಲೀಸರ ಮನೆಗಳಲ್ಲೇ ಕಳ್ಳತನ, ಬರೋಬ್ಬರಿ 9 ಮನೆಗಳಲ್ಲಿ ಕೈಚಳಕ!

ಎಲ್ಲೋ ಕಳ್ಳತನವಾದರೂ ಮೊದಲು ನೆನಪಾಗುವುದು ಪೊಲೀಸರು. ಕಳ್ಳತನವಾದ ಕೂಡಲೇ ಓಡಿ ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿ ಅದು ಹೋಗಿದೆ, ಇದು ಹೋಗಿದೆ ಎಂದು ಅವರ ಮುಂದೆ ಅಳಲು ತೋಡಿಕೊಳ್ಳುತ್ತಾರೆ. ಆದ್ರೆ, ಇಲ್ಲಿ ಪೊಲೀಸರ ಮನೆಗಳೇ ಕಳ್ಳತನವಾಗಿವೆ. ಒಂದಲ್ಲ, ಎರಡಲ್ಲ ಬರೋಬ್ಬರಿ 9 ಪೊಲೀಸರ ಮನೆಗಳನ್ನ ದೋಚಿರುವ ಖದೀಮರು ಖಾಕಿಗೆ ಶಾಕ್ ಕೊಟ್ಟಿದ್ದಾರೆ.

ಮಡಿಕೇರಿಯಲ್ಲಿ ಪೊಲೀಸರ ಮನೆಗಳಲ್ಲೇ ಕಳ್ಳತನ, ಬರೋಬ್ಬರಿ 9 ಮನೆಗಳಲ್ಲಿ ಕೈಚಳಕ!
Madikeri Police Quarters
Gopal AS
| Edited By: |

Updated on: Jun 19, 2025 | 9:56 PM

Share

ಮಡಿಕೇರಿ, (ಜೂನ್ 19): ಬೀಗ ಮುರಿದು ರಾಜಾರೋಷವಾಗಿ ಮನೆಗೆ ನುಗ್ಗಿ ಬೀರು, ಅಲ್ಮೇರಗಳಲ್ಲಿ ಹುಡುಕಿ ಕೈಗೆ ಸಿಕ್ಕಷ್ಟು ಹಣ, ಚಿನ್ನಾಭರಣದೊಂದಿಗೆ ಖದೀಮರು ಎಸ್ಕೇಪ್ ಆಗಿದ್ದಾರೆ. ಇಲ್ಲಿ ಕಳ್ಳತನಕ್ಕೆ ಒಳಗಾಗಿರುವುದು ಸಾಮಾನ್ಯ ಜನರ ಮನೆಗಳಲ್ಲಿ ಅಲ್ಲ. ಬದಲಿಗೆ ಕಳ್ಳತನವಾಗಿದ್ದು ಪೊಲೀಸರ ಮನೆಗಳು. ಹೌದು…ಅದು ಒಂದಲ್ಲ ಎರಡಲ್ಲ ಬರೋಬ್ಬರಿ 9 ಪೊಲೀಸರ ಮನೆಗಳಲ್ಲಿ ಕಳ್ಳರು ಕೈಚಳ ತೋರಿಸಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ನಗರದ ರೈಫಲ್ ರೇಂಜ್ ಬಡಾವಣೆಯಲ್ಲಿ ಪೊಲೀಸರ ಮನೆಗಳೇ ಕಳ್ಳತನ ಆಗಿವೆ. ಕಳೆದ ರಾತ್ರಿ ರೈಫಲ್ ರೇಂಜ್‌ನಲ್ಲಿರೋ ಪೊಲೀಸ್ ವಸತಿ ಸಮುಚ್ಛಯಕ್ಕೆ (Madikeri Police quarters) ನುಗ್ಗಿರುವ ಖದೀಮರು, ಬರೋಬ್ಬರಿ 9 ಮನೆಗಳನ್ನ ದೋಚಿ ಪರಾರಿಯಾಗಿದ್ದಾರೆ.

ಕೊಡಗು ಜಿಲ್ಲೆ ಮಡಿಕೇರಿ ನಗರದ ರೈಫಲ್ ರೇಂಜ್ ಬಡಾವಣೆಯಲ್ಲಿ ಪೊಲೀಸರ ಮನೆಗಳೇ ಕಳ್ಳತನ ಆಗಿವೆ. ಕಳೆದ ರಾತ್ರಿ ರೈಫಲ್ ರೇಂಜ್‌ನಲ್ಲಿರೋ ಪೊಲೀಸ್ ವಸತಿ ಸಮುಚ್ಛಯಕ್ಕೆ ನುಗ್ಗಿರೋ ಕಳ್ಳರು, ಬರೋಬ್ಬರಿ 9 ಮನೆಗಳನ್ನ ದೋಚಿದ್ದಾರೆ. ಈ ವಸತಿ ಸಮುಚ್ಛಯ ಮುಖ್ಯ ರಸ್ತೆಯಿಂದ ಸ್ವಲ್ಪ ಒಳಭಾಗದಲ್ಲಿದೆ. ಇಲ್ಲಿಯ ಯಾವುದೇ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ. ಎಲ್ಲಿಯೂ ಸಿಸಿಟಿವಿಗಳಿಲ್ಲ. ಯಾವುದೇ ಸುರಕ್ಷತೆ ಇಲ್ಲ. ಬಹಳಷ್ಟು ಪೊಲೀಸರು ಇಲ್ಲಿ ವಸತಿ ಗೃಹಕ್ಕೆ ಬೀಗ ಹಾಕಿ ಕರ್ತವ್ಯ ನಿಮಿತ್ತ ಬೇರೆ ಊರುಗಳಿಗೆ ತೆರಳಿರುತ್ತಾರೆ. ಹೀಗಾಗಿ ಈ ಕ್ವಾರ್ಟರ್ಸ್‌ ಕಳ್ಳರಿಗೆ ಹೇಳಿಮಾಡಿಸಿದಂತಿದೆ. ಊರಿಗೆಲ್ಲಾ ರಕ್ಷಣೆ ನೀಡುವ ಪೊಲಿಸರಿಗೆ ರಕ್ಷಣೆ ಇಲ್ಲಾ ಎಂದು ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವ ಮನೆಯಲ್ಲಿ ಸಿಬ್ಬಂದಿ ಇಲ್ವೋ ಅಂತಹ ಮನೆಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡಿದ್ದಾರೆ. ಜಯಚಂದ್ರ ಎಂಬುವರ ಮನೆಯಿಂದ 95 ಸಾವಿರ ರೂಪಾಯಿ ನಗದು, ಮೂರು ಗ್ರಾಂ ಚಿನ್ನಾಭರಣ ದೋಚಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ. ಇನ್ನೂ ಅನೇಕರ ಮನೆಗಳಿಗೆ ನುಗ್ಗಿರುವ ಕಳ್ಳರು, ನಗ ನಾಣ್ಯ ದೋಚಿದ್ದಾರೆ. ಎಷ್ಟು ದೋಚಿದ್ದಾರೆ ಎಂಬುವುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸದ್ಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರ ಮನೆಗೇ ಖನ್ನ ಹಾಕುವಷ್ಟು ಧೈರ್ಯ ಇರೋ ಆ ಕಳ್ಳರನ್ನ ಹೆಡೆಮುರಿ ಕಟ್ಟಿಯೇ ತೀರುತ್ತೇವೆ ಅಂತಿದ್ದಾರೆ ಪೊಲಿಸರು.