ಜೈಲಿನಿಂದ ಹೊರಬಂದ ಎರಡೇ ದಿನದಲ್ಲಿ ಮತ್ತೆ ಕಂಬಿ ಹಿಂದೆ ಹೋದ 25ರ ಯುವಕ
ಐಷಾರಾಮಿ ಜೀವನಕ್ಕಾಗಿ ಯುವಕರು ಅಡ್ಡದಾರಿ ಹಿಡಿದಿದ್ದರು. ಹಾಸನ ಮೂಲದ 25 ವರ್ಷ ಯುವಕ ತಾನು ಐಷಾರಾಮಿ ಜೀವನ ಸಾಗಿಸಬೇಕೆಂದು ಕಳ್ಳತನದ ದಾರಿ ಹಿಡಿದ್ದಾನೆ. ಆದರೆ, ಈತ ಅನುಭಿಸುತ್ತಿದ್ದು ಮಾತ್ರ ಜೈಲು ಜೀವನ. ಕಳ್ಳತನ ಪ್ರಕರಣದ ಆರೋಪಿ 25 ವರ್ಷದ ಯುವಕ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ? ಇಲ್ಲಿದೆ ಓದಿ

ತುಮಕೂರು, ಜೂನ್ 20: ಶೋಕಿ ಜೀವನದ ಆಸೆಗೆ ಅಡ್ಡದಾರಿ ಹಿಡಿದ ಯುವಕರು ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹಾಸನ (Hassan) ಮೂಲದ ಸುದೀಪ್ (25) ಮತ್ತು ಈತನ ಗೆಳೆಯ ಶಾಯಿದ್ ಸರಗಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಆರೋಪಿಗಳಾದ ಸುದೀಪ್ ಹಾಗೂ ಶಾಯಿದ್ ತುಮಕೂರು (Tumakuru) ಮತ್ತು ಹಾಸನದಲ್ಲಿ ಜಿಲ್ಲೆಗಳಲ್ಲಿ ನಡೆದ ನಾಲ್ಕು ಸರಗಳ್ಳತನ ಪ್ರಕರಣಗಳ ಆರೋಪಿಗಳಾಗಿದ್ದಾರೆ. ಈ ಪ್ರಕರಣಗಳಲ್ಲಿ ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಸುದೀಪ್ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ರಾಮನಗರ ಜೈಲು ಸೇರಿದ್ದನು. ಜೈಲಿನಲ್ಲಿ ಸುದೀಪ್ಗೆ ಶಾಯಿದ್ ಪರಿಚಯಾವಾಗಿದ್ದಾನೆ. ಜೂನ್ 13 ರಂದು ಸುದೀಪ್ ಬಿಡುಗಡೆಯಾಗಿ ಹೊರಗೆ ಬಂದಿದ್ದಾನೆ. ಸದೀಪ್ಗೂ ಮುನ್ನ ಶಾಯಿದ್ ಜೈಲಿನಿಂದ ಹೊರಬಂದಿದ್ದನು.
ಇದನ್ನೂ ಓದಿ: ಪೊಲೀಸರ ಜಾಗೃತಿಗೂ ಮೀರಿದ ಸೈಬರ್ ವಂಚಕರ ಗಾಳ: ತುಮಕೂರಿನಲ್ಲಿ 6 ತಿಂಗಳಲ್ಲಿ 10 ಕೋಟಿ ರೂ. ವಂಚನೆ
ಜೈಲಿನಿಂದ ಬಿಡುಗಡೆಯಾದರೂ ಕೂಡ ಸುದೀಪ್ ತನ್ನ ವಕೀಲರಿಗೆ ಫೀಸ್ ಕೊಟ್ಟಿರಲಿಲ್ಲ. ಹೀಗಾಗಿ, ಹಣ ರೆಡಿ ಮಾಡಲು ಮುಂದಾದ ಸುದೀಪ್ ತನ್ನ ಗೆಳೆಯ ಶಾಯಿದ್ ಜೊತೆ ಸೇರಿ ಮೊದಲಿಗೆ ಹಾಸನದಲ್ಲಿ ಎರಡು ನಂತರ ತುಮಕೂರಿನಲ್ಲಿ ಎರಡು ಸರಗಳನ್ನು ಕದ್ದಿದ್ದಾನೆ. ಬಳಿಕ ರಾಮನಗರಕ್ಕೆ ಬಂದಿದ್ದಾರೆ. ಇವರು ರಾಮನಗರಕ್ಕೆ ಕಾಲಿಟ್ಟ ವಿಚಾರ ತಿಳಿದ ತುಮಕೂರಿನ ಹೆಬ್ಬುರು ಪೊಲೀಸರು ಆರೋಪಿಗಳು ಮತ್ತೆ ಕೈಚಳಕ ತೊರುವ ಮುನ್ನವೇ ಬಂಧಿಸಿದ್ದಾರೆ. ಸದ್ಯ ಆರೋಪಿಗಳ ಬಂಧನದಿಂದ ನಾಲ್ಕು ಸರಗಳ್ಳತನ ಪ್ರಕರಣ ಪತ್ತೆಯಾಗಿದ್ದು, ಬಂಧಿತರಿಂದ 13 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.







