ಚಿಕ್ಕಬಳ್ಳಾಪುರ: ಏಪ್ರಿಲ್ 17ರಂದು ಜಿಲ್ಲೆಯಲ್ಲಿ ಮಹೇಶ್ವರಮ್ಮನ ಅದ್ಧೂರಿ ಜಾತ್ರೆ ನಡೆದಿದೆ. ಭಕ್ತಸಾಗರದ ನಡುವೆ ರಥೋತ್ಸವ ಜರುಗಿದೆ. ಆ ಜಾತ್ರೆಯಲ್ಲೇ ಒಂದು ಪವಾಡ ಕೂಡಾ ಆಗಿದೆ. ಇದ್ರ ನಡುವೆ ಹೆಜ್ಜೇನು ದಾಳಿ ಜಾತ್ರೆಗೆ ಬಂದ ಭಕ್ತರು ದಿಕ್ಕಾಪಾಲಾಗುವಂತೆ ಮಾಡಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೀಣಕನಗುರ್ಕಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ. ಸಡಗರದ ಕ್ಷಣ. ಸಹಸ್ರ ಸಹಸ್ರ ಭಕ್ತರ ಸಂಗಮ. ಈ ಸಮಾಗಮಕ್ಕೆ ಕಾರಣವಾಗಿದ್ದು ಮಹೇಶ್ವರಮ್ಮ ರಥೋತ್ಸವ. ಗ್ರಾಮ ದೇವತೆ ಮಹೇಶ್ವರಮ್ಮ ಜಾತ್ರೆ ನಿನ್ನೆ ಅದ್ಧೂರಿಯಾಗಿ ನಡೆದಿತ್ತು. ಈ ಜಾತ್ರೆಯ ವಿಶೇಷ ಅಂದ್ರೆ, ದೇಗುಲದಿಂದ ಸಾಗಿ ಬರೋ ರಥ, ರೈತನ ಜಮೀನಿನ ಬಳಿ ಇರುವ ಬೇವಿನ ಮರದ ಬಳಿ ಬರ್ತಿದ್ದಂತೆ. ಮರದಲ್ಲಿನ ಕಹಿ ಬೇವು ಸಿಹಿಯಾಗುತ್ತಂತೆ. ಅದೇ ಸಿಹಿ ಬೇವನ್ನ ಸವಿಯಲು ಭಕ್ತರು ಮುಗಿ ಬೀಳ್ತಾರೆ.
ಭಕ್ತರನ್ನ ಓಡಿಸಿದ ‘ಹೆಜ್ಜೇನು ಹಿಂಡು’
ಇನ್ನು ಭಕ್ತರ ಗದ್ದಲಕ್ಕೋ ಅಥವಾ ದೇಗುಲದಲ್ಲಿನ ಊದುಬತ್ತಿಯ ಹೊಗೆಯ ಕಾರಣಕ್ಕೋ ಮರದ ಮೇಲಿದ್ದ ಹೆಜ್ಜೇನು ಹುಳುಗಳು ಭಕ್ತರ ಮೇಲೆ ದಾಳಿ ಮಾಡಿದ್ವು. ಹೀಗಾಗಿ ಭಕ್ತರು ಕೆಲಕಾಲ ದಿಕ್ಕಾಪಾಲಾಗಿ ಓಡಿದ್ರು. ಕೆಲವರಂಥೂ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಓಡಾಡಿದ್ರೆ, ಮಹಿಳೆಯರು ಟೆಂಟ್‌ಗಳಲ್ಲಿ ಆಶ್ರಯ ಪಡೆದಿದ್ರು. ಇದ್ರ ನಡುವೆ ನಾಲ್ಕೈದು ಜನರ ಮೇಲೆ ದಾಳಿ ಮಾಡಿದ್ದ ಹೆಜ್ಜೇನು, ಮುಖದ ಚಿತ್ರಣ ಬದಲಾಗುವಂತೆ ಮಾಡಿತ್ತು. ಒಟ್ನಲ್ಲಿ ಕಹಿ ಬೇವು ಮಹೇಶ್ವರಮ್ಮ ರಥೋತ್ಸವದ ವೇಳೆ ಸಿಹಿಯಾಗುತ್ತೆ ಅಂತ ಭಕ್ತರು ಮುಗಿಬಿದ್ದು ಬೇವಿನ ಸೊಪ್ಪನ್ನೆ ಪ್ರಸಾದವಾಗಿ ಪಡೆದ್ರು. ಇನ್ನೂ ಕೆಲವರು ಹೆಜ್ಜೇನು ಕಾಟ ತಪ್ಪಿಸಿಕೊಳ್ಳಲು ದಿಕ್ಕು ಪಾಲಾಗಿ ಓಡಿದ್ರು.
ವರದಿ: ಭೀಮಪ್ಪ ಪಾಟೀಲ , ಟಿವಿ9 ಚಿಕ್ಕಬಳ್ಳಾಪುರ
ಇದನ್ನೂ ಓದಿ: ವಿವಾದಿತ ಪೋಸ್ಟ್ನಿಂದ ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ; 100ಕ್ಕೂ ಹೆಚ್ಚು ಜನ ಅರೆಸ್ಟ್, ಕೋರ್ಟ್‌ಗೆ ಹಾಜರುಪಡಿಸಲಿರುವ ಪೊಲೀಸರು
Video: ಇದು ಹುಲಿ ಕುಣಿತವಲ್ಲ, ಜಿಗಿತ; ಬೋಟ್ನಿಂದ ನೀರಿಗೆ ಜಂಪ್ ಮಾಡಿ, ತಿರುಗಿಯೂ ನೋಡದೆ ಹೋದ ಟೈಗರ್ !