Video: ಇದು ಹುಲಿ ಕುಣಿತವಲ್ಲ, ಜಿಗಿತ; ಬೋಟ್​​​ನಿಂದ ನೀರಿಗೆ ಜಂಪ್​ ಮಾಡಿ, ತಿರುಗಿಯೂ ನೋಡದೆ ಹೋದ ಟೈಗರ್​ !

ಇದೊಂದು ಹಳೇ ವಿಡಿಯೋ ಎಂಬುದನ್ನು ಶೇರ್ ಮಾಡಿಕೊಂಡಿರುವ ಐಎಫ್​ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್​ ಅವರೇ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸುಂದರ್​ಬನ್ಸ್​​ ರಾಷ್ಟ್ರೀಯ ಉದ್ಯಾನವನದ್ದು

Video: ಇದು ಹುಲಿ ಕುಣಿತವಲ್ಲ, ಜಿಗಿತ; ಬೋಟ್​​​ನಿಂದ ನೀರಿಗೆ ಜಂಪ್​ ಮಾಡಿ, ತಿರುಗಿಯೂ ನೋಡದೆ ಹೋದ ಟೈಗರ್​ !
ನೀರಿಗೆ ಹಾರಿದ ಹುಲಿ
Follow us
TV9 Web
| Updated By: Lakshmi Hegde

Updated on:Apr 17, 2022 | 9:49 PM

ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ, ಕ್ಯೂಟ್​-ಭಯಾನಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ಚೇಷ್ಟೆ, ಕಾಳಗ, ಅಟ್ಯಾಕ್​ ಹೀಗೆ ವಿಧವಿಧದ ದೃಶ್ಯಗಳು ತುಂಬ ಖುಷಿ ಕೊಡುತ್ತವೆ..ಅಬ್ಬಾ, ಭಯಾನಕ ಎನ್ನಿಸುತ್ತವೆ. ಆದರೆ ನಾವಿಲ್ಲಿ ತೋರಿಸಿರುವ ವಿಡಿಯೋ ನೋಡಿ, ನಿಮಗೆ ರೋಮಾಂಚನ ಆಗದೆ ಇದ್ದರೆ ಹೇಳಿ ! ಇದು ಹುಲಿಯ ಕುಣಿತವಲ್ಲ..ಜಿಗಿತದ ದೃಶ್ಯ. ಒಂದು ಬೋಟ್​​ನಿಂದ ನೀರಿಗೆ ಹುಲಿರಾಯ ಜಂಪ್​ ಮಾಡಿದ ಚೆಂದ, ಆ ಗತ್ತು ಇದೆಯಲ್ಲ ಮೈ ಜುಂ ಎನ್ನಿಸದೆ ಇರದು.

ಇದೊಂದು ಹಳೇ ವಿಡಿಯೋ ಎಂಬುದನ್ನು ಶೇರ್ ಮಾಡಿಕೊಂಡಿರುವ ಐಎಫ್​ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್​ ಅವರೇ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸುಂದರ್​ಬನ್ಸ್​​ ರಾಷ್ಟ್ರೀಯ ಉದ್ಯಾನವನದ್ದು. ಇದೀಗ ಮತ್ತೊಮ್ಮೆ ಸಿಕ್ಕಾಪಟೆ ವೈರಲ್ ಆಗುತ್ತಿದೆ.  ಯಾವುದೋ ಝೂದಲ್ಲಿ ಇದ್ದ ಹುಲಿಯನ್ನು ಅಲ್ಲಿಂದ ಕಾಡಿಗೆ ಬಿಡಲೆಂದು ಬೋಟ್​​​​ನಲ್ಲಿ ನದಿ ಮೂಲಕ ಕರೆದುಕೊಂಡು ಹೋಗುತ್ತಿರುವ ದೃಶ್ಯ. ಬೋಟ್​​​​ನಿಂದ ಈ ಹುಲಿ ನದಿಗೆ ಧುಮುಕಿದೆ. ನಂತರ ಅಲ್ಲಿಂದ ಈಜಿಕೊಂಡು ಹೋಗಿ ಅಲ್ಲಿಯೇ ದಡದಲ್ಲಿರುವ ಕಾಡು ಸೇರಿಕೊಂಡಿದೆ.  ಆ ಹುಲಿಯ ಹೆಸರು ರಿಚರ್ಡ್​ ಪಾರ್ಕರ್​ ಎಂದು ಹೇಳಲಾಗಿದ್ದು, ಬೋಟ್​​ನಿಂದ ಜಿಗಿದ ಮೇಲೆ ಒಂದು ಸಲವೂ ತಿರುಗಿ ನೋಡದೆ ಈಜುಕೊಂಡು ಹೋಗಿದ್ದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ವಿಡಿಯೋ ನೋಡಿದ ಜನರೆಂತೂ ಭರ್ಜರಿ ಖುಷಿಪಟ್ಟಿದ್ದಾರೆ. ಹುಲಿಯ ಗತ್ತು ನೋಡಿ ಸಿಕ್ಕಾಪಟೆ ಹೊಗಳಿದ್ದಾರೆ. ಹೊರಟಮೇಲೆ ತಿರುಗಿ ನೋಡಬಾರದು ಎಂಬ ಪಾಠವನ್ನು ಈ ಟೈಗರ್​ನಿಂದ ಕಲಿತೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದರೆ, ಏನು ಹೇಳಲೂ ತಿಳಿಯುತ್ತಿಲ್ಲವೆಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಶಿಕ್ಷಣ ಮುಂದುವರಿಸಲು ದಾರಿ ಮಾಡಿಕೊಡಿ; ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಆಗ್ರಹ, ಪ್ರತಿಭಟನೆ

Published On - 9:48 pm, Sun, 17 April 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್