Video: ಸ್ನೇಹಿತನೇ..ಸ್ನೇಹಿತನೆ ಹಾಡಿಗೆ ಭರತನಾಟ್ಯ ಮಾಡಿದ ಫ್ರೆಂಚ್ ಡ್ಯಾನ್ಸರ್; ಶೂ ಹಾಕಬಾರದಿತ್ತು ಎಂದು ಸಲಹೆ ಕೊಟ್ಟ ನೆಟ್ಟಿಗರು
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವ ಬಹುತೇಕ ಎಲ್ಲ ಹಾಡಿಗೂ ಜಿಕಾ ನೃತ್ಯ ಮಾಡುತ್ತಾರೆ. ಕಚ್ಚಾ ಬಾದಾಮ್ ಹಾಡಿಗೆ ಕುಣಿದು ಸಖತ್ ಫೇಮಸ್ ಆಗಿದ್ದರು. ಇವರು ಮೂಲತಃ ಫ್ರೆಂಚ್ನವರು ಆಗಿದ್ದರೂ, ವಿವಿಧ ಪ್ರಕಾರದ ನೃತ್ಯಗಳನ್ನು ಕಲಿತಿದ್ದಾರೆ.
ನೀವು ಇನ್ಸ್ಟಾಗ್ರಾಂ ಬಳಕೆದಾರರಾಗಿದ್ದರೆ, ಅದರಲ್ಲಿ ಸದಾ ವೈರಲ್, ಟ್ರೆಂಡ್ ಆಗುತ್ತಿರುವ ವಿಡಿಯೋಗಳನ್ನೆಲ್ಲ ನೋಡುತ್ತಿದ್ದರೆ ನಿಮಗೆ ಖಂಡಿತ ಫ್ರೆಂಚ್ ಡ್ಯಾನ್ಸರ್ ಜಿಕಾ ಗೊತ್ತಿರುತ್ತಾರೆ. ಇವರು ಮೂಲತಃ ಫ್ರೆಂಚ್ನ ನೃತ್ಯಗಾರನಾದರೂ ಭಾರತೀಯ ಚಿತ್ರರಂಗದ ಹಲವು ಹಾಡುಗಳಿಗೆ ಈಗಾಗಲೇ ಡ್ಯಾನ್ಸ್ ಮಾಡಿದ್ದಾರೆ. ಆ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕತ್ರೀನಾ ಕೈಪ್ ಅಭಿನಯದ ಸೂರ್ಯವಂಶಿ ಸಿನಿಮಾದ ಟಿಪ್ಟಾಪ್ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಭಾರತೀಯ ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದ ಅವರೀಗ ತಮಿಳಿನ ಸ್ನೇಹಿತನೇ..ಸ್ನೇಹಿತನೇ ರಿಮಿಕ್ಸ್ ಹಾಡಿಗೆ ಚೆಂದೆನೆಯ ಡ್ಯಾನ್ಸ್ ಮಾಡಿದ್ದಾರೆ. ಭರತನಾಟ್ಯ ಶೈಲಿಯಲ್ಲಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವ ಬಹುತೇಕ ಎಲ್ಲ ಹಾಡಿಗೂ ಜಿಕಾ ನೃತ್ಯ ಮಾಡುತ್ತಾರೆ. ಕಚ್ಚಾ ಬಾದಾಮ್ ಹಾಡಿಗೆ ಕುಣಿದು ಸಖತ್ ಫೇಮಸ್ ಆಗಿದ್ದರು. ಇವರು ಮೂಲತಃ ಫ್ರೆಂಚ್ನವರು ಆಗಿದ್ದರೂ, ವಿವಿಧ ಪ್ರಕಾರದ ನೃತ್ಯಗಳನ್ನು ಕಲಿತಿದ್ದಾರೆ. ಈಗವರು ಸ್ನೇಹಿತನೇ..ಸ್ನೇಹಿತನೇ ರಿಮಿಕ್ಸ್ಗೆ ಭರತನಾಟ್ಯ ಶೈಲಿಯಲ್ಲಿ ನೃತ್ಯ ಮಾಡಿದ್ದನ್ನೂ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಹಾಡು 2000ನೇ ಇಸ್ವಿಯಲ್ಲಿ ತೆರೆಕಂಡ ತಮಿಳು ಸಿನಿಮಾ ಅಲೈ ಪಾಯುತೇಯದ್ದು. ಮೂಲತಃ ಇದನ್ನು ಹಾಡಿದ್ದು ಸಾಧನಾ ಸರ್ಗಮ್ ಮತ್ತು ಶ್ರೀನಿವಾಸ್. ಇತ್ತೀಚೆಗೆ ಈ ಹಾಡಿನ ರಿಮಿಕ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅದೆಷ್ಟೋ ಜನರು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಹಾಗೇ, ಜಿಕಾ ಕೂಡ ಟ್ರೈ ಮಾಡಿದ್ದಲ್ಲದೆ, ನಾನು ಭರತನಾಟ್ಯಂ ಪ್ರಯತ್ನಿಸಿದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ.
View this post on Instagram
ಈ ನೃತ್ಯ ನೋಡಿದ ನೆಟ್ಟಿಗರು ಫುಲ್ ಖುಷಿ ಪಟ್ಟಿದ್ದಾರೆ. ವಿಡಿಯೋಕ್ಕೆ ಭಾರತೀಯರೂ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ನಿಮ್ಮ ಬಹುದೊಡ್ಡ ಅಭಿಮಾನಿ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು ನೀವು ಭರತನಾಟ್ಯ ಪ್ರಯತ್ನಿಸಿದ್ದು ಸಂತೋಷ. ಆದರೆ ಭರತನಾಟ್ಯವನ್ನು ಮಾಡುವಾಗ ಕಾಲಿಗೆ ಶೂ ಹಾಕಿಕೊಳ್ಳಬಾರದು ಎಂಬ ಸಲಹೆಯನ್ನೂ ಕೊಟ್ಟಿದ್ದಾರೆ. 4 ದಿನಗಳ ಹಿಂದೆಯೇ ವಿಡಿಯೋ ವೈರಲ್ ಆಗಿದ್ದು, ಈಗಾಗಲೇ ಲಕ್ಷಕ್ಕೂ ಮೀರಿ ವೀವ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ: Electricity shortage ಈ ಬೇಸಿಗೆಯಲ್ಲಿ ಭಾರತದಲ್ಲಿ ವಿದ್ಯುತ್ ಕೊರತೆಯುಂಟಾಗುತ್ತಿರುವುದಕ್ಕೆ ಕಾರಣಗಳೇನು?