ಚಿಕ್ಕಬಳ್ಳಾಪುರ: ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 15, 2023 | 4:12 PM

ಚಿಕ್ಕಬಳ್ಳಾಫುರ ಜಿಲ್ಲೆಯ ಶಿಡ್ಲಘಟ್ಟ(Sidlaghatta) ತಾಲೂಕಿನ ಅಮ್ಮನ ಕೆರೆಯಂಗಳದಲ್ಲಿ ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿ(Sheep)ಗಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ: ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿ ಸಾವು
ಚಿಕ್ಕಬಳ್ಳಾಪುರದ ಬಳಿ ರೈಲಿಗೆ ಸಿಲುಕಿ ಕುರಿಗಳು ಸಾವು
Follow us on

ಚಿಕ್ಕಬಳ್ಳಾಪುರ, ಡಿ.15: ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿ(Sheep)ಗಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆಯ ಶಿಡ್ಲಘಟ್ಟ(Sidlaghatta) ತಾಲೂಕಿನ ಅಮ್ಮನ ಕೆರೆಯಂಗಳದಲ್ಲಿ ನಡೆದಿದೆ. ಕುರಿಗಾಯಿ ಕೂದಲಮ್ಮಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು-ಕೋಲಾರ ಮಾರ್ಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಈ ದುರ್ಘಟನೆ ನಡೆದಿದೆ. ಹುಸಹುಡ್ಯಾ ನಿವಾಸಿಗಳಾದ ಆಂಜಿನಮ್ಮ, ಕೂದಲಪ್ಪ, ಶಶಿಕಲಾ ಹಾಗೂ ನಾರಾಯಣಸ್ವಾಮಿಗೆ ಸೇರಿದ ಕುರಿಗಳು ಇದಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಕೆಆರ್‌ಟಿಸಿ ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಕಲಬುರಗಿ: ನಗರದ ಜಿಲ್ಲಾ ಕಾರಾಗೃಹದ ಬಳಿ ಕೆಕೆಆರ್‌ಟಿಸಿ ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತರಾದ ಘಟನೆ ನಡೆದಿದೆ. ತಿಪ್ಪಣ್ಣ ಇಜೇರಿ(30), ರಾಜೇದ್ರ ಇಜೇರಿ(20) ಮೃತ ದುರ್ದೈವಿಗಳು. ಈ ವೇಳೆ ರಾಣಪ್ಪ ಕಟ್ಟಿಮನಿ ಖಣದಾಳ ಎಂಬುವವರಿಗೆ ಗಂಭೀರ ಗಾಯವಾದರೆ,
ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಮೂವರಿಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ರಾಯಚೂರಿನಿಂದ ಕಲಬುರಗಿಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ಕುರಿತು ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ಭೀಕರ ಅಪಘಾತ, ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಸ್ಕೂಟಿ ಸವಾರ, ವಿಡಿಯೋ ನೋಡಿ

ಕ್ಯಾಂಟರ್​ ಡಿಕ್ಕಿಯಾಗಿ ಬೈಕ್​ ಸವಾರ ಸಾವು

ಬೆಂಗಳೂರು: ನೆಲಮಂಗಲ ತಾಲೂಕಿನ ಬಾಣವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕ್ಯಾಂಟರ್​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ. ಶಶಿಕುಮಾರ್(27) ಸ್ಥಳದಲ್ಲೇ ಮೃತ ವ್ಯಕ್ತಿ. ಶಶಿಕುಮಾರ್ ಬಾಣವಾಡಿ ಗ್ರಾಮ ಪಂಚಾಯತಿ ಕಾರ್ಯಾಲಯದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಇನ್ನು ಘಟನೆಗೆ ಸಂಬಂಧಿಸಿದಂತೆ ಕ್ಯಾಂಟರ್​ನ್ನು ಜಪ್ತಿ ಮಾಡಿ, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ